ಚಿಕ್ಕಬಳ್ಳಾಪುರ: ಯಾರಿಗೂ ಯಾವುದೂ ಶಾಶ್ವತವಲ್ಲ. ನಾವೇನೂ ಶಾಶ್ವತವಾಗಿ ಮಂತ್ರಿಗಳಾಗಿಯೇ ಇರುವುದಿಲ್ಲ ಎಂದು ನಂದಿಗಿರಿಧಾಮದಲ್ಲಿ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿಕೆ ನೀಡಿದ್ದಾರೆ. ಸದ್ಯ ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೀಡಿರುವ ಹೇಳಿಕೆ ಭಾರಿ ಸಂಚಲನ ಮೂಡಿಸಿದೆ. ಹಲವು ದಿನಗಳಿಂದ ನಡೆಯುತ್ತಿದ್ದ ನಾಯಕತ್ವ ಬದಲಾವಣೆಯ ಕೂಗಿಗೆ ತಿಲಾಂಜಲಿ ಇಡಲು ಮುಂದಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಸಿ.ಪಿ.ಯೋಗೇಶ್ವರ್ ಯಾರಿಗೂ ಯಾವುದೂ ಶಾಶ್ವತವಲ್ಲ ಎಂದು ತಿಳಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು ಸ್ವತಃ ಸಿಎಂ ಮಾಧ್ಯಮಗಳ ಮುಂದೆ ನಿಲುವು ತಿಳಿಸಿದ್ದಾರೆ. ಮುಖ್ಯಮಂತ್ರಿಗಳ ಹೇಳಿಕೆಗೆ ನನ್ನದೇನು ಅಭಿಪ್ರಾಯವಿಲ್ಲ. ನನ್ನ ಸಮಸ್ಯೆ, ತೊಂದರೆಗಳ ಬಗ್ಗೆಯಷ್ಟೇ ಹೇಳಿಕೊಂಡಿದ್ದೆ. ನಮ್ಮ ಪಕ್ಷದ ಹೈಕಮಾಂಡ್ ಎಲ್ಲವನ್ನೂ ತೀರ್ಮಾನಿಸಲಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.
ಸಿಎಂ ಬಿಎಸ್ ಯಡಿಯೂರಪ್ಪ ಹಿರಿಯರಿದ್ದಾರೆ. ಅವರೇ ಸ್ಪಷ್ಟನೆಯನ್ನ ನೀಡುತ್ತಿದ್ದಾರೆ. ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಯಾರೂ ಕೂಡ ಪರ್ಮನೆಂಟ್ ಆಗಿ ಸಚಿವರಾಗಿ ಇರಲ್ಲ. ಕುಮಾರಸ್ವಾಮಿ ನಮ್ಮ ರಾಜಕೀಯ ವಿರೋಧಿಗಳು. ಹಾಗಾಗಿ ನಾವು ಅವರನ್ನ ವಿರೋಧ ಮಾಡುತ್ತೇವೆ. ಕುಮಾರಸ್ವಾಮಿ ನಿಲುವೇ ದ್ವಂದ. ಅವರ ಕೆಲಸಕ್ಕಾಗಿ ಸಿಎಂ ಯಡಿಯೂರಪ್ಪ ಜೊತೆ ಸೇರುತ್ತಾರೆ ಎಂದರು.
ಇದನ್ನೂ ಓದಿ: ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಭೇಟಿ ನೀಡಿ ರೋಪ್ ವೇ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ಮಾಡಿದ ಸಚಿವ ಸಿ.ಪಿ.ಯೋಗೇಶ್ವರ್