ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ಮರಸನಹಳ್ಳಿ ಬಳಿ ಭೀಕರ ಆಕ್ಸಿಡೆಂಟ್ ನಡೆದಿದೆ. ಪಾದಚಾರಿಗೆ ಡಿಕ್ಕಿ ಹೊಡೆದ ಓಮ್ನಿ ವ್ಯಾನ್ ಉರುಳಿಬಿದ್ದಿದೆ. ಆದರೆ ಓಮ್ನಿ ವ್ಯಾನ್ ಡಿಕ್ಕಿಯಿಂದ ಅಪರಿಚಿತ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು, ವ್ಯಾನ್ನಲ್ಲಿ ತೆರಳ್ತಿದ್ದ 7 ಜನರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ.
ಗಾಯಾಳುಗಳಿಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
(Omni van accident at marasanahalli in chikkaballapur pedestrian died on spot)