AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಿಯಕರನ ಕರ್ಮಕಾಂಡ ಕಂಡು ಶಾಕ್​​: ಪೊಲೀಸ್​​ ಠಾಣೆಯಲ್ಲೇ ತಾಳಿ ಕಿತ್ತೆಸೆದ ಯುವತಿ

ಅವರಿಬ್ಬರು ಪ್ರೀತಿಸಿ ಮದುವೆ ಆಗಿದ್ದರು. ಕಾರಲ್ಲಿ ತೆರಳುತ್ತಿದ್ದ ಅವರನ್ನು ಅಡ್ಡಗಟ್ಟಿದ್ದ ಯುವತಿಯ ಪೋಷಕರು ನೇರವಾಗಿ ಪೊಲೀಸ್​​ ಠಾಣೆಗೆ ಕರೆದೊಯ್ದಿದ್ದರು. ಆ ವೇಳೆ ಯುವಕನ ಬಂಡವಾಳ ಒಂದೊಂದೇ ಬಯಲಾಗಿದೆ. ಈ ಹಿಂದೆ ಹಲವರಿಗೂ ಆತ ಮೋಸ ಮಾಡಿದ್ದ, ಜೊತೆಗೆ ಪೋಕ್ಸೋ ಪ್ರಕರಣ ಕೂಡ ಆತನ ಮೇಲಿದೆ ಎಂಬುದು ಯುವತಿಗೆ ಗೊತ್ತಾಗಿದೆ. ಪ್ರಿಯಕರನ ಬಂಡವಾಳ ಗೊತ್ತಾಗಿದ್ದೇ ತಡ, ಆತ ಕಟ್ಟಿದ್ದ ತಾಳಿ ಕಿತ್ತೆಸೆದು ಪೋಷಯಕರ ಜೊತೆಗೆ ಯುವತಿ ತೆರಳಿರೋ ಪ್ರಸಂಗ ನಡೆದಿದೆ.

ಪ್ರಿಯಕರನ ಕರ್ಮಕಾಂಡ ಕಂಡು ಶಾಕ್​​: ಪೊಲೀಸ್​​ ಠಾಣೆಯಲ್ಲೇ ತಾಳಿ ಕಿತ್ತೆಸೆದ ಯುವತಿ
ಪ್ರೀತಿಸಿ ಮದುವೆಯಾಗಿದ್ದ ಜೋಡಿ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on:Jan 06, 2026 | 8:12 AM

Share

ಚಿಕ್ಕಬಳ್ಳಾಪುರ, ಜನವರಿ 06: ಪೊಲೀಸ್​​ ಠಾಣೆಯಲ್ಲಿ ಪ್ರಿಯಕರನ ಬಂಡವಾಳ ಬಯಲಾಗುತ್ತಿದ್ದಂತೆ ಆತ ಕಟ್ಟಿದ್ದ ತಾಳಿಯನ್ನೇ ಕಿತ್ತೆಸೆದು ಯುವತಿಯೋರ್ವಳು ಪೋಷಕರ ಜೊತೆಗೆ ಮರಳಿ ತೆರಳಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಪ್ರೀತಿಸಿ ಮದುವೆಯಾಗಿದ್ದ ಜೋಡಿಯ ಕಾರು ಅಡ್ಡಗಟಿದ್ದ ಪೋಷಕರು ಅವರನ್ನು ಪೊಲೀಸ್​​ ಠಾಣೆಗೆ ಕರೆದೊಯ್ದಿದ್ದರು. ಈ ವೇಳೆ ಪ್ರೇಮಿಯ ನವರಂಗಿ ಆಟಗಳೆಲ್ಲ ಆರಕ್ಷಕರ ಮುಂದೆಯೇ ಬಯಲಾಗಿದ್ದು, ಪ್ರಿಯಕರನ ನಡೆ ಕಂಡು ಯುವತಿ ಬೆಚ್ಚಿಬಿದ್ದಿದ್ದಾಳೆ. ಇವನ ಸಹವಾಸವೇ ಸಾಕು ಎಂದು ಕೈಮುಗಿದಿದ್ದಾಳೆ.

ಘಟನೆ ಏನು?

ಚಿಕ್ಕಬಳ್ಳಾಪುರ ನಗರದ ಗಂಗನಮಿದ್ದೆ ಬಡಾವಣೆಯ ನಿವಾಸಿ, ಪೇಂಟ್​​ ಕೆಲಸಗಾರ ಸಂದೀಪ್ ಎನ್ನುವ ವ್ಯಕ್ತಿ ಚಿಕ್ಕಬಳ್ಳಾಪುರ ನಗರದ ಕಂದವಾರ ಬಡಾವಣೆಯ ಶ್ರೀಮಂತ ಕುಟುಂಬದ 18 ವರ್ಷದ ಯುವತಿಗೆ ಗಾಳ ಹಾಕಿದ್ದ. ಆಕೆಯ ಜೊತೆ ಎರಡು ದಿನಗಳ ಹಿಂದೆ ಎಸ್ಕೇಪ್ ಆಗಿದ್ದ ಈತ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ದೇವಸ್ಥಾನವೊಂದರಲ್ಲಿ ಆಕೆಗೆ ತಾಳಿಯನ್ನೂ ಕಟ್ಟಿದ್ದ. ಬಳಿಕ ಈ ಜೋಡಿ ಕಾರಿನಲ್ಲಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾಗ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ಯುತಿಯ ಪೋಷಕರು ಇವರ ಕಾರನ್ನು ಅಡ್ಡಗಟ್ಟಿದ್ದರು.  ಮಹಿಳಾ ಠಾಣೆಗೆ ಮಗಳು ಮತ್ತು ಆಕೆಯ ಪ್ರಿಯಕರನನ್ನು ನೇರವಾಗಿ ಕರೆದುಕೊಂಡು ಬಂದಿದ್ದರು. ತಾವು ಮದುವೆ ಮಾಡಿಕೊಂಡಿದ್ದು ತಮ್ಮ ಪಾಡಿಗೆ ತಮ್ಮನ್ನು ಬಿಡುವಂತೆ ಈ ವೇಳೆ ಜೋಡಿ ಪೊಲೀಸರನ್ನು ಕೇಳಿಕೊಂಡಿತ್ತು. ಅಷ್ಟರಲ್ಲಿ ಸಂದೀಪ್​​ನ ಒಂದೊಂದೇ ಪ್ರೇಮ ಪ್ರಕರಣಗಳು ಬಯಲಾಗಿವೆ.

ಇದನ್ನೂ ಓದಿ: ಹುಟ್ಟಿಸಿದ ಮಗನ ಬಲಿ ಪಡೆದ ತಂದೆ; ಅಪ್ಪನ ಚಟಕ್ಕೆ ಹೋಯ್ತು ಪುತ್ರನ ಪ್ರಾಣಪಕ್ಷಿ

20024ರಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ನಾಯನಹಳ್ಳಿ ಗ್ರಾಮದ ಅಪ್ರಾಪ್ರ ಬಾಲಕಿಯನ್ನು ಪ್ರೀತಿಸಿದ್ದ ಸಂದೀಪ್ ಆಕೆಯನ್ನು ಮದುವೆ ಮಾಡಿಕೊಂಡಿದ್ದ. ಪ್ರಶಾಂತ್ ನಗರದಲ್ಲಿ ಮತ್ತೊರ್ವ ಮಹಿಳೆಯಗೆ ವಂಚನೆ ಮಾಡಿದ್ದು, ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಪೋಕ್ಸೋ ಪ್ರಕರಣ ಕೂಡ ದಾಖಲಾಗಿರೋದು ಗೊತ್ತಾಗಿದೆ. ಇವುಗಳ ಜೊತೆಗೆ ಸಾಕ್ಷಿ ಎಂಬಂತೆ ಸಂದೀಪ್​​ನಿಂದ ಹಿಂದೆ ಮೋಸ ಹೋಗಿರುವ ಅಪ್ರಾಪ್ತೆಯೇ ಠಾಣೆಗೆ ಬಂದು ಆತನ ಇತಿಹಾಸ ಬಿಚ್ಚಿಟ್ಟಿದ್ದಾಳೆ. ಹೀಗಾಗಿ ಪ್ರಿಯಕರ ಕಟ್ಟಿದ್ದ ತಾಳಿಯನ್ನು ಕಿತ್ತು ಬಿಸಾಕಿ ಆತನಿಗೆ ಗುಡ್​​ ಬೈ ಹೇಳಿ ಯುವತಿ ತಂದೆ-ತಾಯಿ ಜೊತೆ ಮನೆಗೆ ಹೋದ ಪ್ರಸಂಗ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 8:11 am, Tue, 6 January 26

Follow Us
Bheemappa Patil
Bheemappa Patil

ಚಿಕ್ಕಬಳ್ಳಾಪುರ ಎಂಬ ಸುಂದರ ಊರು ನನಗೆ ಸುಂದರವಾದ ಬದುಕನ್ನು ಕಟ್ಟಿಕೊಟ್ಟಿದೆ. 18 ವರ್ಷಗಳಿಂದ ಹಗಲುರಾತ್ರಿ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಜನ ಸೇವೆಯಲ್ಲಿದ್ದೇನೆ. ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಪದವಿ. ಬೆಂಗಳೂರು ವಿವಿಯಲ್ಲಿ ಬಿ.ಸಿ.ಎ ವ್ಯಾಸಂಗ. ವಿದ್ಯಾರ್ಥಿದೆಸೆಯಿಂದಲೆ ಟಿವಿ9 ಕನ್ನಡದಲ್ಲಿ ಕೆಲಸ.

Read More
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?