ಚಿಕ್ಕಬಳ್ಳಾಪುರ: ಟ್ರಕ್ಕಿಂಗ್​ಗೆ ಹೋಗಿ ಅರಣ್ಯದಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳ ರಕ್ಷಣೆ

ಟ್ರಕ್ಕಿಂಗ್​ಗೆ ಹೋಗಿ ದಾರಿ ತಪ್ಪಿದ್ದ ಇಬ್ಬರು ಸಂಶೋಧನಾ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗಿದೆ. ಜಿಲ್ಲೆ ದಂಡಿಗಾನಹಳ್ಳಿ ಜಲಾಶಯದ ಬಳಿಯ ಅರಣ್ಯದಲ್ಲಿ ಟ್ರಕ್ಕಿಂಗ್​ಗೆ ಹೋಗಿದ್ದ ವಿದ್ಯಾರ್ಥಿಗಳು ನೆಟ್​ವರ್ಕ್​, ದಾರಿ ಸಿಗದೇ ಇಡೀ ರಾತ್ರಿ ಅರಣ್ಯದಲ್ಲಿ ಪರದಾಡಿದ್ದಾರೆ.

ಚಿಕ್ಕಬಳ್ಳಾಪುರ: ಟ್ರಕ್ಕಿಂಗ್​ಗೆ ಹೋಗಿ ಅರಣ್ಯದಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳ ರಕ್ಷಣೆ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Dec 04, 2023 | 12:34 PM

ಚಿಕ್ಕಬಳ್ಳಾಪುರ, (ಡಿಸೆಂಬರ್ 04): ಟ್ರಕ್ಕಿಂಗ್​ಗೆ  ಹೋಗಿ ಜಿಲ್ಲೆ ದಂಡಿಗಾನಹಳ್ಳಿ ಜಲಾಶಯದ ಬಳಿಯ ಅರಣ್ಯದಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು(Students) ರಕ್ಷಣೆ ಮಾಡಲಾಗಿದೆ. ನಿನ್ನೆ (ಡಿಸೆಂಬರ್ 03) ದಂಡಿಗಾನಹಳ್ಳಿ ಜಲಾಶಯಕ್ಕೆ ತೆರಳಿದ್ದ ಬೆಂಗಳೂರಿನ (Bengaluru) ಜೆ.ಎನ್​.ಸಿ.ಆರ್​ ಕಾಲೇಜಿನಕೃಷ್ಣತಿವಾರಿ, ಶಂಭಂ ಎನ್ನುವ ವಿದ್ಯಾರ್ಥಿಗಳು ನೆಟ್​ವರ್ಕ್​ ಸಿಗದೇ, ದಾರಿ ಕಾಣದೇ ರಾತ್ರಿ ಇಡೀ ಅರಣ್ಯದಲ್ಲಿ ಕಳೆದಿದ್ದು, ಕೊನೆಗೆ ಇಂದು(ಡಿಸೆಂಬರ್ 04) ಬೆಳಗಿನ ಜಾವ 4 ಗಂಟೆಗೆ ವಿದ್ಯಾರ್ಥಿಗಳನ್ನು ಅಗ್ನಿ ಶಾಮಕ ದಳ ಹಾಗು ಪೊಲೀಸರು ಸೇರಿಕೊಮಡು ರಕ್ಷಣೆ ಮಾಡಿದ್ದಾರೆ.

ದಂಡಿಗಾನಹಳ್ಳಿ ಜಲಾಶಯಕ್ಕೆ ತೆರಳಿದ್ದ ಕೃಷ್ಣತಿವಾರಿ, ಶಂಭಂ ಅಲ್ಲಿಂದ ಅರಣ್ಯದಲ್ಲಿ ಅಕ್ರಮವಾಗಿ ಟ್ರಕ್ಕಿಂಗ್​ಗೆ ತೆರಳಿದ್ದರು. ಬಳಿಕ ದಾರಿ ಗೊತ್ತಾಗದೇ ರಾತ್ರಿಯಿಡೀ ಕಾಡಿನ ಮಧ್ಯೆ ಪರದಾಡಿದ್ದು, ಅಗ್ನಿಶಾಮಕದಳ, ಪೊಲೀಸರು, ಸ್ಥಳೀಯರು ರಾತ್ರಿಯಿಡಿ ಹುಡುಕಾಡಿದ್ದಾರೆ. ಸದ್ಯ ಬೆಳಗಿನ ಜಾವ 4 ಗಂಟೆ ವೇಳೆಗೆ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗಿದೆ.

ಈ ಹಿಂದೆಯೂ ಸಹ ಇದೇ ರೀತಿಯ ಘಟನೆಗಳು ನಡೆದಿವೆ. ಟ್ರಕ್ಕಿಂಗ್​ ಹೋದ ಯುವಕರು ದಾರಿ ತಪ್ಪಿ ಪರದಾಡಿದ್ದು, ಬಳಿಕ ಪೊಲೀಸರು ಪತ್ತೆ ಮಾಡಿ ರಕ್ಷಿಸಿದ ಉದಾಹಣರಣೆಗಳು ಇವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್