AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಿಯಕರನ ಜೊತೆಗಿದ್ದಾಗಲೇ ವಿವಾಹಿತ ಪ್ರಿಯತಮೆ ಅನುಮಾನಾಸ್ಪದ ಸಾವು!

ಪ್ರಿಯಕರನ ಜೊತೆಗಿದ್ದಾಗಲೇ ವಿವಾಹಿತ ಪ್ರಿಯತಮೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಹಿಳೆಗೆ ಈಗಾಗಲೇ ಒಂದು ಮದುವೆಯಾಗಿ ಮಗು ಸಹ ಇದೆ. ಆದ್ರೆ, ಕೆಲ ಕಾರಣಾಂತರಗಳಿಂದ ಗಂಡನನನ್ನು ತೊರೆದು ಪ್ರಿಯಕರ ಜತೆ ಸೇರಿಕೊಂಡಿದ್ದು, ಇದೀಗ ಅನುಮಾಸ್ಪದವಾಗಿ ಸಾವು ಕಂಡಿದ್ದಾಳೆ. ಇನ್ನು ಮೃತ ಮಹಿಳೆ 8 ತಿಂಗಳು ಗರ್ಭಿಣಿಯಾಗಿದ್ದಳು ಎಂದು ತಿಳಿದುಬಂದಿದೆ.

ಪ್ರಿಯಕರನ ಜೊತೆಗಿದ್ದಾಗಲೇ ವಿವಾಹಿತ ಪ್ರಿಯತಮೆ ಅನುಮಾನಾಸ್ಪದ ಸಾವು!
ಅನುಷಾ, ಪವನ್
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on: Jan 05, 2025 | 2:38 PM

Share

ಚಿಕ್ಕಬಳ್ಳಾಪುರ, (ಜನವರಿ 05): ಪ್ರಿಯಕರನ ಜೊತೆಯಲ್ಲಿದ್ದ 8 ತಿಂಗಳ ಗರ್ಭಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಗುಂತಪನಹಳ್ಳಿ (Guntapanahalli) ಗ್ರಾಮದ ಬಳಿ ನಡೆದಿದೆ. ಚಿಕ್ಕಬಳ್ಳಾಪುರದ ಬಾಪೂಜಿನಗರದ ನಿವಾಸಿ ಅನುಷಾ ಅನುಮಾನಾಸ್ಪದವಾಗಿ ಮೃತಪಟ್ಟ ಗರ್ಭಿಣಿ. ಪ್ರಿಯಕರ ಪವನ್, ವಿವಾಹಿತ ಪ್ರಿಯತಮೆ ಅನುಷಾ ಕೊಲ್ಲಲು ಪ್ರಯತ್ನಿಸಿದ್ದ. ಗರ್ಭಿಣಿ ಅನುಷಾಗೆ ಮೊದಲು ವಿಷ ಕುಡಿಸಿ ಕೊಲ್ಲಲು ಯತ್ನಿಸಿದ್ದ. ವಿಷ ಕುಡಿದರೂ ಸಹ ಅನುಷಾ ಬದುಕಿದ್ದಳು. ಆದ್ರೆ, ಇದೀಗ ಅನುಷಾ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಹೊಸಕೋಟೆ ಮೂಲದ ವ್ಯಕ್ತಿಯೊಂದಿಗೆ 08 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಒಂದು ಹೆಣ್ಣು ಮಗು ಸಹ ಇತ್ತು. ಆದರೆ ಗಂಡನಿಗೆ ಪ್ಯಾರಾಲಿಸಿಸ್ ಆದ ನಂತರ ಗಂಡನನ್ನು ತೊರದು ತವರು ಮನೆಗೆ ಬಂದು ವಾಸವಾಗಿದ್ದಳು. ಆಗ ಕೂಲಿ ಮಾಡುತ್ತಿದ್ದ ಅನುಷಾಳಿಗೆ ಗುಂತಪನಹಳ್ಳಿ ಗ್ರಾಮದ ಪವನ್ ಪರಿಚಯವಾಗಿ ಇಬ್ಬರ ನಡುವೆ ದೈಹಿಕ ಸಂಪರ್ಕ ಬೆಳೆದು ಗರ್ಭಿಣಿ ಸಹ ಆಗಿದ್ದಾಳೆ. ಇದರಿಂದ ತನ್ನನ್ನ ಮದುವೆಯಾಗುವಂತೆ ಅನುಷಾ ಒತ್ತಾಯಿಸಿ ಪವನ್ ಮನೆಯವರಿಗೆ ವಿಷಯ ತಿಳಿಸಿದ್ದಾಳೆ. ಬೇರೆ ಬೇರೆ ಜಾತಿ ಎರಡನೇ ಮದುವೆ ಅಂತ ಪವನ್ ಮನೆಯವರು ಇಬ್ಬರಿಗೂ ಬೈದು ಮನೆಗೆ ಕರೆದುಕೊಂಡಿಲ್ಲ.

ಇದನ್ನೂ ಓದಿ: ಹೆಂಡ್ತಿ ಆರೋಗ್ಯ ವಿಚಾರಿಸಲು ಬಂದಿದ್ದ ಯುವತಿ ಮೇಲೆ ಬಿತ್ತು ಕಣ್ಣು, ಹೊಡೆದು ಕೊಂದ ಪೋಷಕರು

15 ದಿನಗಳ ಹಿಂದೆ ಸಹ ಪವನ್ ಊಟದ ಜೊತೆ ಇಲಿ ಪಾಷಾಣ ತಿನ್ನಿಸಿ ಕೊಲೆ ಮಾಡಲು ಯತ್ನಿಸಿದ್ದ ಎಂದು ಆಕೆ ಆರೋಪಿಸಿದ್ದಳು. ಪೊಲೀಸ್ ಠಾಣೆಗೆ ಪವನ್ ವಿರುದ್ಧ ದೂರು ನೀಡಿದ್ದಳು. ತದನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದು ಇಬ್ಬರು ಸಹ ಜೊತೆಯಾಗಿದ್ದರು. ಆದ್ರೆಮ ಕಳೆದ ರಾತ್ರಿ ಗುಂತಪನಹಳ್ಳಿ ಗ್ರಾಮದ ಬಳಿ ಹೊಂಗೆ ಮರದಡಿ ಮದ್ಯಪಾನ ಮಾಡಿ ಮಲಗಿದ್ದರಂತೆ. ಬೆಳಗ್ಗೆ ಎದ್ದು ನೋಡಿದಾಗ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪ್ರಿಯಕರ ಪವನ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಇನ್ನೂ ಪೊಲೀಸರು ಪ್ರಿಯಕರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ