AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nisar Ahmed: ಚಿಕ್ಕಬಳ್ಳಾಪುರದಲ್ಲಿ ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಪುತ್ಥಳಿ ಅನಾವರಣ, ಶಿಕ್ಷಣ ಸಂಸ್ಥೆ ಉದ್ಘಾಟನೆ

ಪ್ರೋ. ಕೆಎಸ್ ನಿಸಾರ್ ಅಹಮದ್ ಅವರ ಹೆಸರಿನಲ್ಲಿ ಅವರ ಕುಟುಂಬ ಸದಸ್ಯರು ಹಾಗೂ ಸಮಾನ ಮನಸ್ಕರು ಸೇರಿ ಟ್ರಸ್ಟ್​ವೊಂದನ್ನು ರಚಿಸಿದ್ದು, ಟ್ರಸ್ಟ್​ಗೆ ರಾಜ್ಯ ಸರ್ಕಾರ ಎರಡೂವರೆ ಎಕೆರೆ ಜಮೀನು ನೀಡಿದೆ.

Nisar Ahmed: ಚಿಕ್ಕಬಳ್ಳಾಪುರದಲ್ಲಿ ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಪುತ್ಥಳಿ ಅನಾವರಣ, ಶಿಕ್ಷಣ ಸಂಸ್ಥೆ ಉದ್ಘಾಟನೆ
ನಿಸಾರ್ ಅಹಮದ್ ಪುತ್ಥಳಿಯನ್ನು ಅನಾವರಣ ಮಾಡಲಾಯಿತು
TV9 Web
| Updated By: sandhya thejappa|

Updated on:Feb 08, 2022 | 12:44 PM

Share

ಚಿಕ್ಕಬಳ್ಳಾಪುರ: ನಿತ್ಯೋತ್ಸವ ಕವಿ ಎಂದೇ ಖ್ಯಾತನಾಮರಾದ ಡಾ. ಕೆಎಸ್ ನಿಸಾರ್ ಅಹಮದ್ರವರ (Nisar Ahmed) ಪುತ್ಥಳಿಯನ್ನು (Statue) ಚಿಕ್ಕಬಳ್ಳಾಪುರ ತಾಲೂಕಿನ ಮೊಟ್ಲೋರು ಗ್ರಾಮದ ಬಳಿ ಹಚ್ಚ ಹಸಿರಿನ ಸುಂದರ ಪರಿಸರದ ಮದ್ಯೆ ಅನಾವರಣ ಮಾಡಲಾಯಿತು. ಕಂದಾಯ ಸಚಿವ ಆರ್ ಅಶೋಕ್, ಆರೋಗ್ಯ ಸಚಿವ ಡಾ. ಕೆ ಸುಧಾಕರ್, ಪೌರಾಡಳಿತ ಸಚಿವ ಎನ್ ನಾಗರಾಜ್, ಕವಿ ಬಿಆರ್ ಲಕ್ಷ್ಮಣ ರಾವ್ ಸೇರಿದಂತೆ ಗಣ್ಯರು ಆಗಮಿಸಿ ಪುತ್ಥಳಿ ಅನಾವರಣ ಮಾಡಿದರು.

ಪ್ರೋ. ಕೆಎಸ್ ನಿಸಾರ್ ಅಹಮದ್ ಅವರ ಹೆಸರಿನಲ್ಲಿ ಅವರ ಕುಟುಂಬ ಸದಸ್ಯರು ಹಾಗೂ ಸಮಾನ ಮನಸ್ಕರು ಸೇರಿ ಟ್ರಸ್ಟ್​ವೊಂದನ್ನು ರಚಿಸಿದ್ದು, ಟ್ರಸ್ಟ್​ಗೆ ರಾಜ್ಯ ಸರ್ಕಾರ ಎರಡೂವರೆ ಎಕೆರೆ ಜಮೀನು ನೀಡಿದೆ. ಟ್ರಸ್ಟ್ ಹಾಗೂ ಕೆಎಸ್ ನಿಸಾರ್ ಅಹಮದ್ ಅವರ ಹೆಸರಿನಲ್ಲಿ ನಿಸಾರ್ ಇನ್ಸ್ಟಿಟ್ಯೂಟ್ ಆಫ್ ಏಜುಕೇಷನ್ ಸಂಸ್ಥೆಯನ್ನು ನೊಂದಣಿ ಮಾಡಿದ್ದು, ನಿನ್ನೆ ಟ್ರಸ್ಟ್ ಹಾಗೂ ಶಿಕ್ಷಣ ಸಂಸ್ಥೆಯನ್ನು ಸಹ ಉದ್ಘಾಟನೆ ಮಾಡಲಾಯಿತು.

ಕವಿ ನಿಸಾರ್ ಅಹಮದ್ ಅವರು ಕನ್ನಡ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಅದರಲ್ಲೂ ಅವರ ಸಾಹಿತ್ಯ ಕನ್ನಡ ಭಾಷಾಭಿಮಾನವನ್ನು ಹೆಚ್ಚಿಸುತ್ತದೆ. ಜೊತೆಗೆ ಸಮಾಜದಲ್ಲಿ ಎಲ್ಲರೂ ಸಾಮರಸ್ಯದಿಂದ ಸಹಬಾಳ್ವೆ ನಡೆಸುವ ಸಂದೇಶಗಳನ್ನು ತಮ್ಮ ಅಮೂಲ್ಯವಾದ ಸಾಹಿತ್ಯದ ಮೂಲಕ‌ ಕೊಡುಗೆ ನೀಡಿದ್ದಾರೆ. ಅವರ ಎಷ್ಟೋ ಕವಿತೆಗಳು ಜನಪ್ರಿಯ ಭಾವಗೀತೆಗಳಾಗಿ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿವೆ. ನಿಸಾರ್ ಅಹಮದ್ ಅವರು ನಾಡು ಕಂಡ ಶ್ರೇಷ್ಠ ಕವಿಗಳಲ್ಲಿ ಒಬ್ಬರಾಗಿದ್ದು, ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಮೂಲದವರು.

ಕವಿ ನಿಸಾರ್ ಅಹಮದ್ ಸೊಸೆ ಹೇಳಿದ್ದೇನು?: ನಾಡೋಜ ಕವಿ ನಿಸಾರ್ ಅಹಮದ್ ಅವರ ಸೊಸೆ ರುಮಾನ್ ನವೀದ್ ಮಾತನಾಡಿ, ಈ ಸ್ಥಳದಲ್ಲಿ ಶಿಕ್ಷಣ ಸಂಸ್ಥೆ ಹಾಗೂ ಮ್ಯೂಸಿಯಂ ಒಂದನ್ನು ನಿರ್ಮಿಸುವ ಆಸೆ ಇದೆ. ಸರ್ಕಾರದ ಸಹಕಾರದೊಂದಿಗೆ ಮಾಡುವ ಉದ್ದೇಶವಿದೆ. ನಿಸಾರ್ ಅವರ ಹೆಸರಿನ‌ ಟ್ರಸ್ಟ್ ಮೂಲಕ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲಾಗುವುದು. ಅಲ್ಲದೇ ಹಲವು ಸೇವಾ ಕಾರ್ಯಗಳ ಜೊತೆಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಕ್ರಿಯಾಶೀಲವಾಗಿ ನಡೆಸಲಾಗುವುದು ಎಂದರು.

ವರದಿ: ಭೀಮಪ್ಪ ಪಾಟೀಲ

ಇದನ್ನೂ ಓದಿ

ಮುಸ್ಲಿಂ ವ್ಯಕ್ತಿಯ ಅಂತ್ಯ ಸಂಸ್ಕಾರದಲ್ಲಿ ಹಿಂದೂ ಧಾರ್ಮಿಕ ಆಚರಣೆ; ಹಿಜಾಬ್ ಗಲಾಟೆ ನಡುವೆ ಮಾದರಿಯಾದ ಅಂತ್ಯ ಸಂಸ್ಕಾರ

ಅಲ್ಲು ಅರ್ಜುನ್​ ಜತೆ ರನ್ನಿಂಗ್​ ರೇಸ್​ಗೆ ಇಳಿದ ಮಗಳು ಅಲ್ಲು ಅರ್ಹಾ; ವೈರಲ್​ ಆಯ್ತು ವಿಡಿಯೋ

Published On - 12:44 pm, Tue, 8 February 22

ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟಿಷ್ ಪ್ರಧಾನಿ
ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟಿಷ್ ಪ್ರಧಾನಿ