ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಒಂದೇ ಕುಟುಂಬದ 7 ಜನರಿಗೆ ಕೊರೊನಾ ಪಾಸಿಟಿವ್

80 ವರ್ಷದ ವ್ಯಕ್ತಿಗೆ ಕೊಮಾರ್ಬಿಡಿಟಿ ಹಿನ್ನೆಲೆ ಸ್ಕ್ಯಾನಿಂಗ್ ಮಾಡಿಸುವ ವೇಳೆ ಟೆಸ್ಟ್ ಮಾಡಿಸಿದ್ದು ಕೊರೊನಾ ಸೋಂಕು ತಗುಲಿರುವುದು ಸಾಬೀತಾಗಿದೆ. ಬಳಿಕ ಸೋಂಕಿತ ವೃದ್ಧನನ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಕೊರೊನಾ ಟೆಸ್ಟ್ಗೆ ಒಳಪಡಿಸಿದಾಗ ಅವರಲ್ಲಿಯೂ ಸೋಂಕು ಕಂಡು ಬಂದಿದೆ.

ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಒಂದೇ ಕುಟುಂಬದ 7 ಜನರಿಗೆ ಕೊರೊನಾ ಪಾಸಿಟಿವ್
ಪ್ರಾತಿನಿಧಿಕ ಚಿತ್ರ
Updated By: ಆಯೇಷಾ ಬಾನು

Updated on: Dec 24, 2021 | 1:28 PM

ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಮೇಲೂರು ಗ್ರಾಮದ ಒಂದೇ ಕುಟುಂಬದ 7 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 80 ವರ್ಷದ ತಂದೆ, 46 ವರ್ಷದ ಮಗ, 35 ವರ್ಷದ ಸೊಸೆ, 9 ವರ್ಷದ ವಿದ್ಯಾರ್ಥಿ, 55 ವರ್ಷದ ಮಹಿಳೆ, 11 ವರ್ಷದ ವಿದ್ಯಾರ್ಥಿ ಸೇರಿದಂತೆ ಒಂದೇ ಕುಟುಂಬದ 7 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

80 ವರ್ಷದ ವ್ಯಕ್ತಿಗೆ ಕೊಮಾರ್ಬಿಡಿಟಿ ಹಿನ್ನೆಲೆ ಸ್ಕ್ಯಾನಿಂಗ್ ಮಾಡಿಸುವ ವೇಳೆ ಟೆಸ್ಟ್ ಮಾಡಿಸಿದ್ದು ಕೊರೊನಾ ಸೋಂಕು ತಗುಲಿರುವುದು ಸಾಬೀತಾಗಿದೆ. ಬಳಿಕ ಸೋಂಕಿತ ವೃದ್ಧನನ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಕೊರೊನಾ ಟೆಸ್ಟ್ಗೆ ಒಳಪಡಿಸಿದಾಗ ಅವರಲ್ಲಿಯೂ ಸೋಂಕು ಕಂಡು ಬಂದಿದೆ. ಸದ್ಯ ಕೊರೊನಾ ಸೋಂಕಿತ 80 ವರ್ಷದ ವ್ಯಕ್ತಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಲ್ಲದೆ ವಿದ್ಯಾರ್ಥಿಗೂ ಪಾಸಿಟಿವ್ ಬಂದಿದ್ದು ವಿದ್ಯಾರ್ಥಿ ಓದುತ್ತಿದ್ದ ಶಾಲೆಗೂ ಮಾಹಿತಿ ನೀಡಲಾಗಿದೆ. ಕ್ರಿಸ್ಮಸ್ ರಜೆ ಹಿನ್ನಲೆ ಇನ್ನಿತರ ವಿದ್ಯಾರ್ಥಿಗಳಿಗೆ ಕೊರೊನಾ ಆತಂಕವಿಲ್ಲವೆಂದು ಶಿಡ್ಲಘಟ್ಟ ಟಿ.ಹೆಚ್.ಓ ವೆಂಕಟೇಶಮೂರ್ತಿ ಮಾಹಿತಿ ನೀಡಿದ್ದಾರೆ.

ವಿದೇಶದಿಂದ ಬೆಂಗಳೂರಿಗೆ ಬಂದ ಮತ್ತೆ ನಾಲ್ವರಿಗೆ ಕೊರೊನಾ
ಲಂಡನ್, ಕೀನ್ಯಾ, ಬ್ರಿಟನ್‌ನಿಂದ ಬೆಂಗಳೂರಿಗೆ ಬಂದ ನಾಲ್ವರಿಗೆ ಸೋಂಕು ತಗುಲಿದೆ. ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಟೆಸ್ಟ್ ವೇಳೆ ಸೋಂಕು ದೃಢಪಟ್ಟಿದೆ. 25 ವರ್ಷದ ಮಹಿಳೆ, 59 ವರ್ಷದ ಪುರುಷ, 53 ವರ್ಷದ ವ್ಯಕ್ತಿ, 15 ವರ್ಷದ ಬಾಲಕಿಗೆ ಕೊರೊನಾ ಸೋಂಕು ತಗುಲಿದೆ. ಸದ್ಯ ಕೊರೊನಾ ಸೋಂಕಿತರಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಐಸೋಲೇಷನ್ ಮಾಡಲಾಗಿದೆ.

ಇದನ್ನೂ ಓದಿ: Anil Kapoor Birthday: ಪಕ್ಕಾ ಫ್ಯಾಮಿಲಿ ಮ್ಯಾನ್ ಅನಿಲ್ ಕಪೂರ್; 65ನೇ ವಸಂತಕ್ಕೆ ಕಾಲಿಟ್ಟ ನಟನ ಅಪರೂಪದ ಚಿತ್ರಗಳು ಇಲ್ಲಿವೆ

Published On - 1:20 pm, Fri, 24 December 21