ಕೋಳಿ ಫಾರ್ಮ್ಗೆ ನುಗ್ಗಿದ ಚಿರತೆ, ಸಿಕ್ಕ ಸಿಕ್ಕ ಕೋಳಿಗಳನ್ನ ಸಂತೃಪ್ತಿಯಾಗುಷ್ಟು ತಿಂದು ಪರಾರಿ
ಚಿಕನ್ ಪ್ರೀಯರ ಹೊಟ್ಟೆ ಸೇರಬೇಕಿದ್ದ ನೂರಾರು ಕೋಳಿಗಳು ಚಿರತೆಗೆ ಆಹಾರವಾಗಿರುವುದು ಒಂದೆಡೆಯಾದ್ರೆ ಮತ್ತೊಂದೆಡೆ ಪಾರ್ಮ್ ಗೆ ಮಳೆ ನೀರು ನುಗ್ಗಿ ಕೋಳಿಗಳು ಸಾವನ್ನಪ್ಪಿವೆ. ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರ, (ಜೂನ್ 03): ಕೋಳಿ ಪಾರ್ಮ್ ನ ಕೆಲವು ಕೋಳಿಗಳು ನೀರು ಪಾಲಾದ್ರೆ ಇನ್ನೂ ಕೆಲವು ಕೋಳಿಗಳು ಚಿರತೆಗೆ ಆಹಾರವಾದ ಘಟನೆ ಚಿಕ್ಕಬಳ್ಳಾಪುರ(Chikkaballapur )ತಾಲೂಕಿನ ನಂದಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ರೈತ ಲೊಕೇಶ ಎನ್ನುವವರು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಕೋಳಿ ಪಾರ್ಮ್ ನಲ್ಲಿ ಕೋಳಿ ಸಾಕಿದ್ದರು. ಇನ್ನೇನು ನಾಳೆ ಕೋಳಿ ಮಾರಾಟ ಮಾಡಬೇಕಿತ್ತು. ಅಷ್ಟರಲ್ಲೆ ನಿನ್ನೆ (ಜೂನ್ 02) ರಾತ್ರಿ ಸುರಿದ ಧಾರಾಕರ ಮಳೆಯ ನೀರು ಕೋಳಿ ಪಾರ್ಮ್ ಗೆ ನುಗ್ಗಿದೆ. ಇನ್ನೂ ಮಳೆಯಿಂದ ರಕ್ಷಿಸಿಕೊಳ್ಳಲು ಚಿರತೆಯೊಂದು ಕೋಳಿ ಪಾರ್ಮ್ ಗೆ ನುಗ್ಗಿದ್ದು, ಬಾಯಿಗೆ ಸಿಕ್ಕ ಕೋಳಿಗಳನ್ನು ಹಿಡಿದು ತಿಂದು ತೇಗಿ ಪರಾರಿಯಾಗಿದೆ. ಇದ್ರಿಂದ 600ಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿವೆ.
ಇನ್ನೂ ನಂದಿಗಿರಿಧಾಮ, ನಂದಿ, ಅಂಗಟ್ಟ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಚಿರತೆಗಳ ಆವಳಿ ಇದೆ. ನಂದಿಗಿರಿಧಾಮದ ಅರಣ್ಯದಲ್ಲಿ ಚಿರತೆಗಳ ಹಿಂಡು ಇದ್ದು ಮಳೆ ಬಂದರೆ ನಾಡಿನತ್ತ ನುಗ್ಗತ್ತಿವೆ, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ರೈತರು ಮನವಿ ಮಾಡಿದ್ದಾರೆ.
ಒಟ್ಟಿನಲ್ಲಿ ಮಳೆ ನೀರಿನ ಅವಾಂತರ ಮತ್ತೊಂದೆಡೆ ಚಿರತೆಯಿಂದ ನೂರಾರು ಕೋಳಿಗಳು ಬಲಿಯಾಗಿದ್ದು ರೈತನಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:36 pm, Mon, 3 June 24