ನಂದಿ ಗಿರಿಧಾಮದ ತಪ್ಪಲಿನಲ್ಲಿತ್ತು ಪ್ರಸಿದ್ದ ಶಿವಾತ್ಮಾನಂದ ಸರಸ್ವತಿ ಸ್ವಾಮೀಜಿ ಆಶ್ರಮ, ಆದರೆ ಅಲ್ಲೀಗ ಭೂವ್ಯಾಜ್ಯ ತಲೆದೋರಿದೆ!

| Updated By: ಸಾಧು ಶ್ರೀನಾಥ್​

Updated on: Dec 16, 2022 | 6:42 PM

ಇದ್ರಿಂದ ಶ್ರೀ ಗಳ ಸಮಾಧಿ ಅಭಿವೃದ್ದಿ ಹಾಗೂ ಆಶ್ರಮದ ಅಭಿವೃದ್ದಿ ಕುಂಠಿತಗೊಂಡಿದೆ. ಸ್ವಾಮಿಜೀಯ ಭಕ್ತರು ಅನುಯಾಯಿಗಳು ಆಶ್ರಮಕ್ಕೆ ಬಾರದಂತೆ ಸ್ಥಳೀಯ ರುದ್ರಾಣಿ ಹಾಗೂ ಅವರ ಪತಿ ಶ್ಯಾಂಸುಂದರ್ ಅಡ್ಡಿ ಪಡಿಸ್ತಿದ್ದಾರೆ -ಟ್ರಸ್ಟ್ ಸದಸ್ಯರ ಆರೋಪ

ನಂದಿ ಗಿರಿಧಾಮದ ತಪ್ಪಲಿನಲ್ಲಿತ್ತು ಪ್ರಸಿದ್ದ ಶಿವಾತ್ಮಾನಂದ ಸರಸ್ವತಿ ಸ್ವಾಮೀಜಿ ಆಶ್ರಮ, ಆದರೆ ಅಲ್ಲೀಗ ಭೂವ್ಯಾಜ್ಯ ತಲೆದೋರಿದೆ!
ನಂದಿ ಗಿರಿಧಾಮದ ತಪ್ಪಲಿನಲ್ಲಿತ್ತು ಪ್ರಸಿದ್ದ ಶಿವಾತ್ಮಾನಂದ ಸರಸ್ವತಿ ಸ್ವಾಮೀಜಿ ಆಶ್ರಮ
Follow us on

ನಂದಿಗಿರಿಧಾಮದ (Nandi hills) ತಪ್ಪಲಿನಲ್ಲಿತ್ತು ಆ ಪ್ರಸಿದ್ದ ಜ್ಞಾನಾನಂದ ಆಶ್ರಮ (Shivatmananda Saraswati Ashram), ಅಲ್ಲಿ ಶ್ರೀ ಶಿವಾತ್ಮಾನಂದ ಸರಸ್ವತಿ ಸ್ವಾಮೀಜಿ ವಾಸವಾಗಿದ್ದು, 2020ರಲ್ಲಿ ಅಸ್ತಂಗತರಾಗಿದ್ರು. ಆದ್ರೆ ಈಗ ಆಶ್ರಮದ ಟ್ರಸ್ಟ್ ಹಾಗೂ ಮೂಲ ಜಮೀನು ಮಾಲಿಕರ ಮಧ್ಯೆ ವಿವಾದ (land dispute) ಉಂಟಾಗಿದ್ದು, ಆಶ್ರಮದ ಮೂಲ ಮಾಲಿಕರು ಆಶ್ರಮಕ್ಕೆ ಬೀಗ ಜಡಿದು ರಸ್ತೆ ಅಗೆದು ಹಾಕಿದ್ದಾರೆ. ಅದ್ದಕ್ಕೆ ಸ್ವಾಮಿಜೀಯ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಒಂದು ವರದಿ. ಮೇಲಿನ ಚಿತ್ರದಲ್ಲಿರುವವರು ರಾಷ್ಟ್ರಸಂತ ಖ್ಯಾತಿಯ ಶ್ರೀ ಶಿವಾತ್ಮನಂದ ಸರಸ್ವತಿ ಸ್ವಾಮೀಜಿ.. ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ನಂದಿಗಿರಿಧಾಮದ ತಪ್ಪಲಿನಲ್ಲಿರುವ ನಂದಿ ಗ್ರಾಮದ ಸಿದ್ದನಗವಿಯಲ್ಲಿ ಜ್ಞಾನಾನಂದಾಶ್ರಮ ಮಾಡಿಕೊಂಡು ಕೆಲವು ವರ್ಷಗಳ ಕಾಲ ವಾಸವಾಗಿದ್ರು. ಆದ್ರೆ ರಸ್ತೆ ಅಪಘಾತದಲ್ಲಿ 2020ರಲ್ಲಿ ಬೆಂಗಳೂರಿನಲ್ಲಿ ಮೃತಪಟ್ಟಿದ್ದು ಅವರನ್ನು ಸಿದ್ದನಗವಿಯ ಜ್ಞಾನಾನಂದಾಶ್ರಮದಲ್ಲಿ ಸಮಾಧಿ ಮಾಡಲಾಗಿತ್ತು.

ಆದ್ರೆ ಇತ್ತೀಚಿಗೆ ಆಶ್ರಮದ ಆಸ್ತಿಗಳು ಹಾಗೂ ಜಮೀನು ವಿಚಾರ ಆಶ್ರಮದ ಟ್ರಸ್ಟ್ ಹಾಗೂ ಆಶ್ರಮದ ಮೂಲ ಮಾಲಿಕರ ಮಧ್ಯೆ ವಿವಾದ ಉಂಟಾಗಿದೆ. ಇದ್ರಿಂದ ಆಶ್ರಮದ ಮೂಲ ಜಮೀನು ಮಾಲೀಕರು ಹಾಗೂ ಟ್ರಸ್ಟ್ ಸದಸ್ಯರ ಮೇಲಿನ ಕೋಪಕ್ಕೆ ಆಶ್ರಮ ಹಾಗೂ ಆಶ್ರಮದ ಗುಹೆಗಳಿಗೆ ಬೀಗ ಜಡಿದು ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಗೆದು ಹಾಕಿದ್ದಾರೆ.

ಅಸಲಿಗೆ ಶ್ರೀ ಶಿವಾತ್ಮಾನಂದ ಸರಸ್ವತಿ ಸ್ವಾಮೀಜಿ, ನಂದಿಗಿರಿಧಾಮ ತಪ್ಪಲಿನಲ್ಲಿರುವ ಸಿದ್ದನಗವಿಯಲ್ಲಿ ಸರ್ವೆ ನಂಬರ್ 129, 130,131, 132 ನಲ್ಲಿ 5 ಎಕರೆ ಜಮೀನನ್ನು, ಸ್ಥಳೀಯ ಜ್ಞಾನಾನಂದಾ ಹಾಗೂ ಅವರ ಸಂಬಂಧಿಗಳಿಂದ ಜಿ.ಪಿ.ಎ ಮಾಡಿಕೊಂಡು ಆಶ್ರಮ ನಿರ್ಮಾಣ ಮಾಡಿದ್ದರು. ಅವರ ಸಾವಿನ ನಂತರ ಅಂದು ಜಿ.ಪಿ.ಎ ಮಾಡಿಕೊಟ್ಟವರೆ ಈಗ ಯೂ ಟರ್ನ್ ಹೊಡೆದಿದ್ದಾರೆ.

ಇದ್ರಿಂದ ಶ್ರೀ ಗಳ ಸಮಾಧಿ ಅಭಿವೃದ್ದಿ ಹಾಗೂ ಆಶ್ರಮದ ಅಭಿವೃದ್ದಿ ಕುಂಠಿತಗೊಂಡಿದೆ. ಸ್ವಾಮಿಜೀಯ ಭಕ್ತರು ಅನುಯಾಯಿಗಳು ಆಶ್ರಮಕ್ಕೆ ಬಾರದಂತೆ ಸ್ಥಳೀಯ ರುದ್ರಾಣಿ ಹಾಗೂ ಅವರ ಪತಿ ಶ್ಯಾಂಸುಂದರ್ ಅಡ್ಡಿ ಪಡಿಸ್ತಿದ್ದಾರೆ ಎಂದು ಟ್ರಸ್ಟ್ ಸದಸ್ಯರು ಆರೋಪ ಮಾಡಿದ್ದಾರೆ.

ಇಂದು ಶುಕ್ರವಾರ ಶ್ರೀ ಶಿವಾತ್ಮಾನಂದ ಸರಸ್ವತಿ ಸ್ವಾಮೀಜಿಯ ಮೊದಲ ವರ್ಷದ ಪುಣ್ಯಾರಾಧನೆ ಇತ್ತು. ಇಂದು ವಿವಿಧ ಪ್ರದೇಶಗಳಿಂದ ಸ್ವಾಮಿಜೀಯ ಅನುಯಾಯಿಗಳು ಆಶ್ರಮಕ್ಕೆ ಆಗಮಿಸಿದ್ದರು. ಆದ್ರೆ ಟ್ರಸ್ಟ್ ಹಾಗೂ ಮೂಲ ಜಮೀನು ಮಾಲಿಕರ ಜಗಳ ಕಂಡು ಮರುಕ ವ್ಯಕ್ತಪಡಿಸಿದ್ದಾರೆ.

ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ