Sidlaghatta H Cross KRIDL Scam: ಪಂಚಾಯತ್‌ರಾಜ್ ಇಲಾಖೆಯಲ್ಲಿ ಬಯಲಾಗ್ತಿದೆ ಹಗರಣಗಳು, ಕಾಮಗಾರಿ ಮಾಡದೆಯೇ ಬಿಲ್ ಮಾಡಿ ಅವ್ಯವಹಾರ-ಭಾಗ 3

| Updated By: ಸಾಧು ಶ್ರೀನಾಥ್​

Updated on: Sep 04, 2023 | 1:26 PM

ಶಿಡ್ಲಘಟ್ಟದ ದೊನ್ನಹಳ್ಳಿ ಗ್ರಾಮದಿಂದ ಕುಂದಲಗುರ್ಕಿ ಕಡೆಗೆ 50 ಲಕ್ಷ ರೂ ವೆಚ್ಚದಲ್ಲಿ ಕಾಮಗಾರಿ ಮಾಡಿದ್ದಾಗಿ 28 ಲಕ್ಷ ರೂ ಬಿಲ್ ಡ್ರಾ ಆಗಿದೆಯಂತೆ. ಆದರೆ ನಿಗದಿತ ಸ್ಥಳದಲ್ಲಿ ಕಾಮಗಾರಿಯನ್ನೇ ಮಾಡದೇ, ಯಾರಿಗೋ ಬೇಕಾದವರ ಕೋಳಿಫಾರಂ ಬಳಿ ಕಾಂಕ್ರೀಟ್ ಹಾಕಿರುವುದು ಕಂಡುಬಂದಿದೆ! ಒಟ್ಟಿನಲ್ಲಿ ಕಾರ್ಯನಿರ್ವಾಹಕ ಅಭಿಯಂತರರಾಗಿದ್ದ ಪ್ರವೀಣ್ ಶ್ರೀಹರಿ ಹಾಗೂ ಸಹಾಯಕ ಇಂಜನಿಯರ್ ಆಗಿರುವ ಅಮೂಲ್ಯ ಇದಕ್ಕೆ ಹೊಣೆಗಾರರಾಗಿದ್ದು, ಸರ್ಕಾರಕ್ಕೆ ಉತ್ತರ ನೀಡಬೇಕಿದೆ.

Sidlaghatta H Cross KRIDL Scam: ಪಂಚಾಯತ್‌ರಾಜ್ ಇಲಾಖೆಯಲ್ಲಿ ಬಯಲಾಗ್ತಿದೆ ಹಗರಣಗಳು, ಕಾಮಗಾರಿ ಮಾಡದೆಯೇ ಬಿಲ್ ಮಾಡಿ ಅವ್ಯವಹಾರ-ಭಾಗ 3
Sidlaghatta: ಪಂಚಾಯತ್‌ರಾಜ್ ಇಲಾಖೆಯಲ್ಲಿ ಬಯಲಾಗುತ್ತಲೇ ಇವೆ ಹಗರಣಗಳು
Follow us on

ಚಿಕ್ಕಬಳ್ಳಾಪುರ, ಸೆಪ್ಟೆಂಬರ್​ 4: ಚಿಕ್ಕಬಳ್ಳಾಪುರ ಜಿಲ್ಲೆಯ (Chikkaballapur) ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2022-23ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದ ಲೆಕ್ಕಶೀರ್ಷಿಕೆ 5054ರ ಯೋಜನೆಯಡಿಯಲ್ಲಿ ಮಂಜೂರಾದ ಸುಮಾರು 20 ಕೋಟಿ ರೂಪಾಯಿಗಳ ವಿಶೇಷ ಅನುದಾನದ ಕಾಮಗಾರಿಗಳ ಅನುಷ್ಟಾನದ ಹೊಣೆ ಹೊತ್ತಿದ್ದ ಕರ್ನಾಟಕ ರೂರಲ್ ಇನ್‌ಪ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿಮಿಟೆಡ್, ಚಿಕ್ಕಬಳ್ಳಾಪುರ ಜಿಲ್ಲಾ ವಿಭಾಗದಲ್ಲಿ ಬಗೆದಷ್ಟು ಹಗರಣಗಳ ಸರಮಾಲೆ (KRIDL Scam) ಬಯಲಾಗುತ್ತಿದೆ. ಟಿವಿ-9 ಈಗಾಗಲೇ 2 ವಿಶೇಷ ವರದಿಗಳನ್ನು ಸಾರ್ವಜನಿಕರ ಮುಂದೆ ಪ್ರಕಟ ಮಾಡಿದೆ. ಅನುದಾನ ದುರ್ಬಳಕೆ, ಕಳಪೆ ಕಾಮಗಾರಿ, ಕಾಮಗಾರಿಯನ್ನೇ ಮಾಡದೇ ಬಿಲ್ ಡ್ರಾ, ನಿಗಧಿತ ಸ್ಥಳದಲ್ಲಿ ಕಾಮಗಾರಿ ಮಾಡದೇ ಹಾಗೂ ಪುನರಾವರ್ತಿತ ಕಾಮಗಾರಿಗಳನ್ನು ತೋರಿಸಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ಮೋಸ ಮಾಡಿರುವ (Corruption) ಆರೋಪ ಕೇಳಿಬಂದಿದೆ. ಇನ್ನು 2021-22ನೇ ಸಾಲಿನ ಲೆಕ್ಕಶೀರ್ಷಿಕೆ 5054 (ಕೆಆರ್‌ಐಡಿಎಲ್-21-04-2022 ಆಡಳಿತಾತ್ಮಕ ಅನುಮೋದನೆ) ರಡಿ ಚಿಕ್ಕಬಳ್ಳಾಪುರ ಜಿಲ್ಲೆ, ಶಿಡ್ಲಘಟ್ಟ ತಾಲ್ಲೂಕಿನ ಹೆಚ್.ಕ್ರಾಸ್ ಮುಖ್ಯರಸ್ತೆಯಿಂದ ಅಮರಾವತಿ ಗ್ರಾಮದವರೆಗೂ (Sidlaghatta H Cross KRIDL Scam) ಸಿ.ಸಿ.ರಸ್ತೆ ನಿರ್ಮಾಣಕ್ಕೆಂದು 40 ಲಕ್ಷ ರೂಪಾಯಿ ಬಿಲ್ ಡ್ರಾ ಮಾಡಲಾಗಿದೆ. ಆದರೆ ಹೆಚ್.ಕ್ರಾಸ್ ಮುಖ್ಯರಸ್ತೆಯಿಂದ ಅಮರಾವತಿ ಗ್ರಾಮದ ಕಡೆಗೆ ಕಾಮಗಾರಿಯನ್ನು ಮಾಡಿರುವುದು ಕಂಡುಬಂದಿಲ್ಲ.

ಎ) 2018-19ನೇ ಸಾಲಿನ ಲೆಕ್ಕಶೀರ್ಷಿಕೆ 5054 (ಕೆಆರ್‌ಐಡಿಎಲ್-19-07-2021 ಆಡಳಿತಾತ್ಮಕ ಅನುಮೋದನೆ) ರಡಿ ಚಿಕ್ಕಬಳ್ಳಾಪುರ ಜಿಲ್ಲೆ, ಶಿಡ್ಲಘಟ್ಟ ತಾಲ್ಲೂಕಿನ ಅಮರಾವತಿ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗೆಂದು 40 ಲಕ್ಷ ರೂಪಾಯಿ ಬಿಲ್ ಡ್ರಾ ಮಾಡಲಾಗಿದೆ. ಆದರೆ ಕಾಮಗಾರಿಯನ್ನು ಮಾಡಿರುವ ಬಗ್ಗೆ ಅನುಮಾನ ಮೂಡಿದೆ.

ಬಿ) 2022-23ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದ ಲೆಕ್ಕಶೀರ್ಷಿಕೆ 5054ರ ಆರ್‌ಡಿಪಿಆರ್/293/ಆರ್‌ಆರ್‌ಸಿ/2022-ಆರ್‌ಡಿಪಿಆರ್ ಯೋಜನೆಯಡಿಯಲ್ಲಿ ಶಿಡ್ಲಘಟ್ಟ ತಾಲ್ಲೂಕು, ಸಿ.ಬಿ.ರಸ್ತೆಯಿಂದ ಅಮರಾವತಿ ಗ್ರಾಮದ ಕಡೆಗೆ ಸಿ.ಸಿ.ರಸ್ತೆ ಮಾಡಿದ್ದಾಗಿ 50 ಲಕ್ಷ ಬಿಲ್ ಡ್ರಾ ಮಾಡಲಾಗಿದೆ. ಆದರೆ ನಿಗಧಿತ ಸ್ಥಳದಲ್ಲಿ ಕಾಮಗಾರಿ ಮಾಡಿಲ್ಲ.

ಸಿ) ಸಿಕೆಬಿಜಡ್‌ಪಿ-13012(13)/1/2021/2018-19, ಲೆಕ್ಕಶೀರ್ಷಿಕೆ 5054, ಶಿಡ್ಲಘಟ್ಟ ತಾಲ್ಲೂಕು, ಅಮರಾವತಿ ಗ್ರಾಮದಲ್ಲಿ ಸಿ.ಸಿ.ರಸ್ತೆ ನಿರ್ಮಾಣಕ್ಕಾಗಿ 15 ಲಕ್ಷ ರೂಪಾಯಿ ಬಿಲ್ ಡ್ರಾ ಮಾಡಲಾಗಿದೆ.
(ಎ+ಬಿ+ಸಿ ಸೇರಿ ಒಟ್ಟು 1800 ಮೀಟರ್ ಸಿ.ಸಿ.ರಸ್ತೆ ಇರಬೇಕಿತ್ತು. ಆದರೆ ಗ್ರಾಮದಲ್ಲಿ 1000 ಮೀಟರ್ ಮಾತ್ರ ಕಣ್ಣಿಗೆ ಕಾಣಿಸುತ್ತಿದೆ. ಉಳಿಕೆ 800 ಮೀಟರ್ ಕಾಮಗಾರಿಯನ್ನು ಕೆಆರ್‌ಐಡಿಎಲ್ ಇಂಜನಿಯರ್‌ಗಳು ನುಂಗಿರುವ ಬಗ್ಗೆ ಆರೋಪ ಕೇಳಿಬಂದಿದೆ.

2022-23ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದ ಲೆಕ್ಕಶೀರ್ಷಿಕೆ 5054ರ ಯೋಜನೆಯಡಿಯಲ್ಲಿ ಶಿಡ್ಲಘಟ್ಟ ತಾಲ್ಲೂಕು, ಕುಂದಲಗುರ್ಕಿಯ ಭೈಲಾಂಜನೇಯ ದೇವಾಲಯದ ಕಡೆಗೆ ಸಿ.ಸಿ.ರಸ್ತೆ ನಿರ್ಮಾಣಕ್ಕೆಂದು 50 ಲಕ್ಷ ರೂಪಾಯಿ ಬಿಲ್ ಮಾಡಲಾಗಿದ್ದು, 690 ಮೀಟರ್ ಕಾಮಗಾರಿ ಮಾಡಬೇಕಿತ್ತು ಆದರೆ 340 ಮೀಟರ್ ಕಾಮಗಾರಿಯನ್ನು ಮಾತ್ರ ಮಾಡಲಾಗಿದೆ. ಉಳಿಕೆ 350 ಮೀಟರ್ ಕಾಮಗಾರಿ ಮಾಡಿಲ್ಲವೆಂಬ ಆರೋಪ ಕೇಳಿಬಂದಿದೆ.

2022-23ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದ ಲೆಕ್ಕಶೀರ್ಷಿಕೆ 5054ರ ಯೋಜನೆಯಡಿಯಲ್ಲಿ ಶಿಡ್ಲಘಟ್ಟ ತಾಲ್ಲೂಕು, ದೊನ್ನಹಳ್ಳಿ ಗ್ರಾಮದಿಂದ ಕುಂದಲಗುರ್ಕಿ ಕಡೆಗೆ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಮಾಡಿದ್ದಾಗಿ 28 ಲಕ್ಷ ರೂಪಾಯಿ ಬಿಲ್ ಡ್ರಾ ಆಗಿದೆಯಂತೆ ಆದರೆ ನಿಗಧಿತ ಸ್ಥಳದಲ್ಲಿ ಕಾಮಗಾರಿಯನ್ನೇ ಮಾಡದೇ ಯಾರೋ ಬೇಕಾದವರ ಕೋಳಿಫಾರಂ ಬಳಿ ಕಾಂಕ್ರೀಟ್ ಹಾಕಿದ್ದು ಕಂಡುಬಂದಿದೆ.

Also read: ಚಿಕ್ಕಬಳ್ಳಾಪುರ KRIDL ನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಕಳಪೆ ಕಾಮಗಾರಿ, ಕಾಮಗಾರಿಯೇ ಮಾಡದೆ ಬಿಲ್ ಎತ್ತಿ ಭ್ರಷ್ಟಾಚಾರ ಮಾಡಿರುವ ಆರೋಪ

ಒಟ್ಟಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಕೆ.ಆರ್.ಐ.ಡಿ.ಎಲ್.ನಲ್ಲಿ ಕಾರ್ಯನಿರ್ವಾಹಕ ಅಭಿಯಂತರರಾಗಿದ್ದ ಪ್ರವೀಣ್ ಶ್ರೀಹರಿ ಹಾಗೂ ಸಹಾಯಕ ಇಂಜನಿಯರ್ ಆಗಿರುವ ಅಮೂಲ್ಯ ರವರು ಹೊಣೆಗಾರರಾಗಿದ್ದು, ಸರ್ಕಾರಕ್ಕೆ ಉತ್ತರ ನೀಡಬೇಕಿದೆ. ಇನ್ನು 2022-23ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದ ಲೆಕ್ಕಶೀರ್ಷಿಕೆ 5054ರ ಯೋಜನೆಯಡಿಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿ ಬಿಲ್ ಡ್ರಾ ಮಾಡಲು ಸಹಕರಿಸಿರುವ ಚಿಕ್ಕಬಳ್ಳಾಪುರ ಜಿಲ್ಲಾಪಂಚಾಯ್ತಿ ಅಧಿಕಾರಿಗಳು ಏನು ಮಾಡುತ್ತಿದ್ದರು. ಅಧಿಕಾರಿಗಳು ಹಾಗೂ ಇಂಜನಿಯರ್‌ಗಳ ಹಗಲು ದರೋಡೆಯ ಬಗ್ಗೆ ಸೂಕ್ತ ತನಿಖೆ ನಡೆಸಿದರೆ ಬ್ರಹ್ಮಾಂಡ ಭ್ರಷ್ಟಾಚಾರ, ಅವ್ಯವಹಾರ, ಹಗರಣ ಬಯಲಾಗಲಿದೆ.