ಚಿಕ್ಕಬಳ್ಳಾಪುರದಿಂದ ಶಿಡ್ಲಘಟ್ಟಕ್ಕೆ ಹೊರಟಿದ್ದ ಸರ್ಕಾರಿ ಬಸ್ಸಿನಲ್ಲಿ ನಾಗರಹಾವು ಪ್ರತ್ಯಕ್ಷ! ಬೆಚ್ಚಿ ಬಿದ್ದ ಪ್ರಯಾಣಿಕರು

| Updated By: ಸಾಧು ಶ್ರೀನಾಥ್​

Updated on: Aug 27, 2022 | 6:05 PM

ನಾಗರಹಾವು ಅಷ್ಟೊತ್ತಿಗೆ ಭಯಗೊಂಡು ಬಸ್ಸಿನಲ್ಲಿರುವ ಸಂದುಗಳಲ್ಲಿ ತೂರಿಕೊಂಡಿತ್ತು, ಸ್ಥಳಕ್ಕೆ ಬಂದ ಉರುಗ ತಜ್ಞ ಪೃಥ್ವಿರಾಜ್ ಬಸ್ಸಿನ ಇಂಚಿಂಚೂ ಹುಡುಕಾಡಿ... ಕೊನೆಗೆ ಬಸ್ಸಿನ ಇಂಜಿನ್ ಮುಂಭಾಗ ಹಾವನ್ನು ಪತ್ತೆ ಹಚ್ಚಿ, ಅದನ್ನು ರಕ್ಷಣೆ ಮಾಡಿ ಕಾಡಿಗೆ ಅಟ್ಟಿದರು.

ಚಿಕ್ಕಬಳ್ಳಾಪುರದಿಂದ ಶಿಡ್ಲಘಟ್ಟಕ್ಕೆ ಹೊರಟಿದ್ದ ಸರ್ಕಾರಿ ಬಸ್ಸಿನಲ್ಲಿ ನಾಗರಹಾವು ಪ್ರತ್ಯಕ್ಷ! ಬೆಚ್ಚಿ ಬಿದ್ದ ಪ್ರಯಾಣಿಕರು
ಚಿಕ್ಕಬಳ್ಳಾಪುರದಿಂದ ಶಿಡ್ಲಘಟ್ಟಕ್ಕೆ ಹೊರಟಿದ್ದ ಸರ್ಕಾರಿ ಬಸ್ಸಿನಲ್ಲಿ ನಾಗರಹಾವು ಪ್ರತ್ಯಕ್ಷ! ಬೆಚ್ಚಿ ಬಿದ್ದ ಪ್ರಯಾಣಿಕರು!
Follow us on

ಪ್ರಯಾಣಿಕರೊಂದಿಗೆ ಸಂಚರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಇದ್ದಕ್ಕಿದ್ದಂತೆ ಮಾರುದ್ದದ ನಾಗರ ಹಾವೊಂದು ಪ್ರತ್ಯಕ್ಷವಾಗಿ, ಕಣ್ಮುಂದೆ ಹೆಡೆ ಎತ್ತಿ ಬುಸುಗುಟ್ಟಿದ್ರೆ… ಹೇಗಿರುತ್ತೇ…? ಸದ್ಯ ಕನಸಿನಲ್ಲೂ ಇಂತಹ ದೃಶ್ಯ ಬರೋದುಬೇಡಪ್ಪಾ ಅನ್ನುವವರಿಗೆ ಇದು ಕನಸಿನಲ್ಲಿ ಅಲ್ಲ ನಿಜ ಜೀವನದಲ್ಲಿಯೇ ನಡೆದಿದೆ ಎಂದು ಹೇಳಿದರೆ ಹೇಗಿರುತ್ತೆ? ಈ ವರದಿ ನೋಡಿ!!

ಹಾವು (Snake) ಕಾಣಿಸಿಕೊಂಡಿದ್ದೇ ತಡ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ಲಿಸಿ… ಉರಗ ತಜ್ಞರನ್ನು ಕರೆಸಿ… ಆತಂಕ-ಭಯದಿಂದಲೇ… ಬಸ್ಸಿನಲ್ಲಿ ಹಾವಿಗಾಗಿ ಹುಡುಕಾಟ ನಡೆಸಿರುವುದು ಚಿಕ್ಕಬಳ್ಳಾಪುರ (Chikkaballapur) ನಗರದಲ್ಲಿ. ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಬಸ್ಸೊಂದು ಪ್ರಯಾಣಿಕರನ್ನು ಹತ್ತಿಸಿಕೊಂಡು ಶಿಡ್ಲಘಟ್ಟ ಪಟ್ಟಣಕ್ಕೆ ಹೊರಟಿತ್ತು. ಮಧ್ಯೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಶಿಡ್ಲಘಟ್ಟ (Sidlaghatta) ರಸ್ತೆಯ ಮಿನಿ ಬಸ್ ನಿಲ್ದಾಣದ ಬಳಿ ಬಸ್ ನಿಲ್ಲುತ್ತಿದ್ದಂತೆ… ಬಸ್ಸಿನಲ್ಲಿ ಮಾರುದ್ದ ನಾಗರ ಹಾವೊಂದು ಪ್ರತ್ಯಕ್ಷವಾಗಿ ಹೆಡೆ ಎತ್ತಿತ್ತು. ಇದನ್ನು ಕಂಡ ಪ್ರಯಾಣಿಕರು ಕಿರುಚಾಡುತ್ತಲೆ… ನಾಮುಂದು ತಾಮುಂದು ಅಂತ ಒಬ್ಬರ ಮೇಲೊಬ್ಬರು ಬಿದ್ದು ಬಸ್ಸಿನಿಂದ ಇಳಿಯಲು ಯತ್ನಿಸಿದರು. ತಕ್ಷಣ ಬಸ್ ಚಾಲಕ ಬಸ್ ನಿಲ್ಲಿಸಿ ಉರುಗ ತಜ್ಞ ಪೃಥ್ವಿರಾಜ್ ರನ್ನು ಕರೆಸಿ ಹಾವನ್ನು ರಕ್ಷಣೆ ಮಾಡಿಸಿದ್ದಾರೆ; ಜೊತೆಗೆ ಪ್ರಯಾಣಿಕರನ್ನೂ!

ಇನ್ನು ನಾಗರಹಾವು ಅಷ್ಟೊತ್ತಿಗೆ ಭಯಗೊಂಡು ಬಸ್ಸಿನಲ್ಲಿರುವ ತೂತುಗಳಲ್ಲಿ ತೂರಿಕೊಂಡಿತ್ತು, ಸ್ಥಳಕ್ಕೆ ಬಂದ ಉರುಗ ತಜ್ಞ ಪೃಥ್ವಿರಾಜ್ ಬಸ್ಸಿನ ಇಂಚಿಂಚೂ ಹುಡುಕಾಡಿ… ಕೊನೆಗೆ ಬಸ್ಸಿನ ಇಂಜಿನ್ ಮುಂಭಾಗ ಹಾವನ್ನು ಪತ್ತೆ ಹಚ್ಚಿ, ಅದನ್ನು ರಕ್ಷಣೆ ಮಾಡಿ ಕಾಡಿಗೆ ಅಟ್ಟಿದರು. ಪೃಥ್ವಿರಾಜ್ ಹಾವು ಹಿಡಿದ ನಂತರವೇ ಬಸ್ಸಿನಲ್ಲಿದ್ದ ಕಂಡಕ್ಟರ್ ನಿಟ್ಟುಸಿರು ಬಿಟ್ಟಿದ್ದು! ಕನಸಿನಲ್ಲಿ ಕಾಣಬಹುದಾದ ದೃಶ್ಯವೊಂದು ಕಣ್ಮುಂದೆ ಸಾಕ್ಷಾತ್​ ಪ್ರತ್ಯಕ್ಷವಾಗಿ ಬಸ್ ಪ್ರಯಾಣಿಕರೂ ಭಯ ಭೀತರಾಗಿದ್ದರು ಅನ್ನೀ.

– ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ