ಚಿಕ್ಕಬಳ್ಳಾಪುರ: ಮೋಜು ಮಸ್ತಿಗೋಸ್ಕರ ಸಿಕ್ಕ ಸಿಕ್ಕ ಬೈಕ್ಗಳನ್ನು ಕಳ್ಳತನ(Bike Theft) ಮಾಡುತ್ತಿದ್ದ ಚಿಕ್ಕಬಳ್ಳಾಪುರ(Chikkaballapur) ಜಿಲ್ಲೆಯ ಗೌರಿಬಿದನೂರು ನಿವಾಸಿಗಳಾದ ಜಾಕ್ಸನ್(22), ಮತ್ತೊರ್ವ 17 ವರ್ಷದ ಅಪ್ರಾಪ್ತನನ್ನ ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರು ಒಂದು ಕಡೆ ಸೇರಿದ್ರೆ ಕಥೆ ಮುಗಿಯಿತು. ಎದುರಿಗೆ ಸಿಕ್ಕ ಬೈಕ್ನ್ನು ಕದ್ದು ಮಂಗಮಾಯ ಮಾಡುತ್ತಿದ್ದರು. ಅದರಲ್ಲೂ ಆಸ್ಪತ್ರೆಗೆ ಬರುವ ರೋಗಿಗಳ ಬೈಕ್ಗಳ ಮೇಲೆ ಕಣ್ಣು ಹಾಕಿದ್ದ ಇವರು ಕ್ಷಣಾರ್ಧದಲ್ಲಿ ಬೈಕ್ಗಳನ್ನು ಕದ್ದು ಎಸ್ಕೇಪ್ ಆಗ್ತಿದ್ರು. ಆದರೀಗ ಈಗ ಇಬ್ಬರು ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರ ಕೈಗೆ ಸಿಕ್ಕಿದ್ದಾರೆ.
ಇನ್ನು ಇಬ್ಬರಿಗೂ ಶೋಕಿ ಹುಚ್ಚು, ರಾತ್ರಿಯಾದ್ರೆ ಕುಡಿಯುವುದಕ್ಕೆ ಎಣ್ಣೆ, ತಿನ್ನುವುದಕ್ಕೆ ಮಾಂಸದ ಜೊತೆ ದುಶ್ಚಟಗಳು. ಕೈಯಲ್ಲಿರುವ ಕಾಸು ಕಾಲಿಯಾದ್ರೆ ಸಾಕು, ಪಾರ್ಕಿಂಗ್ನಲ್ಲಿರುವ ಬೈಕ್ಗಳನ್ನು ಕದಿಯುತ್ತಿದ್ರು. ಸದ್ಯ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಇವರಿಂದ 17 ಬೈಕ್ಗಳನ್ನು ಜಪ್ತಿ ಮಾಡಿದ್ದು, ಇನ್ನೂ ತನಿಖೆ ಮುಂದುವರೆದಿದೆ. ಇವರ ಬಳಿ ಟಿವಿಎಸ್ನಿಂದ ಬುಲೇಟ್ವರೆಗೂ ಬೈಕ್ಗಳನ್ನು ಕದ್ದಿರುವುದು ಬಯಲಾಗಿದೆ. ಇದೀಗ ಮಾಡಿದ ತಪ್ಪಿಗೆ ಇಬ್ಬರು ಚಿಕ್ಕಬಳ್ಳಾಪುರದ ಜೈಲು ಪಾಲಾಗಿದ್ದಾರೆ.
ಇದನ್ನೂ ಓದಿ:ಚಲಿಸುತ್ತಿದ್ದ ರೈಲಿನಿಂದ ಬಿದ್ದು ಇಬ್ಬರು ಬೌದ್ಧ ಬಿಕ್ಕುಗಳು ಸಾವು: ಆಯತಪ್ಪಿ ಬಿದ್ದು ಮೃತ ಶಂಕೆ
ಬೆಂಗಳೂರು-ಚೆನೈ ರಾಷ್ಟ್ರೀಯ ಹೆದ್ದಾರಿಯ ಅತ್ತಿಬೆಲೆಯಲ್ಲಿ ಘನಘೋರ ಅಪಘಾತ ಸಂಭವಿಸಿತ್ತು. ತಮಿಳುನಾಡು ಮೂಲದ ಚಾಲಕ ಕಾರ್ತಿಕೇಯನ್ ಹಾಗೂ ಕ್ಲೀನರ್ ಉದಯ್ ಕುಮಾರ್ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದು, ಅತ್ತಿಬೆಲೆಯ ಸರ್ವೀಸ್ ರಸ್ತೆಯಲ್ಲಿ ಭಯಾನಕ ಅಪಘಾತಕ್ಕೀಡಾಗಿದ್ದಾರೆ. ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರದಿಂದ ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಮಿಲ್ಕಿ ಮಿಸ್ಟ್ ಕಂಪನಿಯ ಕಂಟೈನರ್ ವಾಹನದಲ್ಲಿ ಹಾಲು, ಮೊಸರು, ಐಸ್ ಕ್ರೀಂ ಲೋಡ್ ಮಾಡಿಕೊಂಡ ಚಾಲಕ ಕಾರ್ತಿಕೇಯನ್ ಹಾಗೂ ಕ್ಲೀನರ್ ಉದಯ್ ಕುಮಾರ್ , ತಮಿಳುನಾಡಿನ ಹೊಸೂರಿಗೆ ತಲುಪಬೇಕಿತ್ತು. ಆದರೆ ಮಾರ್ಗ ಮಧ್ಯೆ ದುರ್ಘಟನೆಗೀಡಾಗಿ ಕೊನೆಯುಸಿರೆಳೆದಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ