ಫೆಬ್ರವರಿ ತಿಂಗಳು ಬಂದರೆ ಸಾಕು, ಪ್ರೇಮಿಗಳ ಮನದಲ್ಲಿ ಅದೇನೊ ತವಕ- ಅದೇನೊ ಪುಳಕ. ವಿದೇಶಗಳಲ್ಲಿ ಪ್ರೇಮಿಗಳ ದಿನಾಚರಣೆಗೂ ಮುನ್ನ ಆಚರಿಸುವ ರೋಸ್ ಡೇ, ಪ್ರೋಪೋಸ್ ಡೇ, ಟೆಡ್ಡಿ ಡೇ, ಚಾಕಲೇಟ್ ಡೇ, ಪ್ರಾಮಿಸ್ ಡೇ, ಹಗ್ ಡೇ, ಕಿಸ್ ಡೇ ಸೇರಿದಂತೆ ನಾನಾ ದಿನಾಚರಣೆಗಳನ್ನು (Valentines Day 2022) ಆಚರಿಸ್ತಾರೆ. ಇದೆಲ್ಲದರ ಪರಿಣಾಮ ಈಗ ತರಹೇವಾರಿ ಗುಲಾಬಿ ಹೂ ಬೆಳೆದ ರೈತರಿಗೆ Chikkaballapur floriculturist) ಭಾರಿ ಡಿಮ್ಯಾಂಡ್ ಬಂದಿದೆ. ಇದ್ರಿಂದ ವರ್ತಕರು ರೈತರ ಹೂದೋಟಗಳಿಗೆ ನುಗ್ಗಿ ಕೇಳಿದಷ್ಟು ಹಣ ನೀಡಿ ಗುಲಾಬಿ ಖರೀದಿ ಮಾಡ್ತಿದ್ದಾರೆ. ಈ ಕುರಿತು ಒಂದು ವರದಿ (Rose).
ತಾಜಾ ತಾಜಾ ತಾಜ್ ಮಹಲ್ ರೋಜ್!
ಕಲರ್ ಕಲರ್ ರೋಸ್ ಗಳನ್ನು ನೋಡಿದರೆ… ಕೈಗೆ ರೆಡ್ ರೋಜ್ ತೆಗೆದುಕೊಂಡು ಗರ್ಲ್ ಫ್ರೆಂಡ್ ತುಟಿಗೆ ಚುಂಬಿಸಬೇಕು, ಕೈಯಲ್ಲಿ ಗುಲಾಬಿ ಹಿಡಿದು ಐ ಲವ್ ಯೂ ಚಿನ್ನೂ ಅಂತ ರೋಮ್ಯಾನ್ಸ್ ಮಾಡಬೇಕು ಅನಿಸುತ್ತೆ… ಇಂಥ ಕಲರ್ ಪುಲ್ ವೈಯಾರದ ಹೂಗಳನ್ನು ಬೆಳೆದ ರೈತರಿಗೆ ಈಗ ಭಾರಿ ಡಿಮ್ಯಾಂಡ್ ಬಂದಿದೆ. ಇಂದು ಫೆಬ್ರವರಿ 14 ರಂದು ಪ್ರೇಮಿಗಳ ದಿನಾಚರಣೆ ಹಿನ್ನೆಲೆ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಗುಲಾಬಿಗೆ ಭಾರಿ ಬೇಡಿಕೆಯಿದೆ.
ಇದ್ರಿಂದ ಚಿಕ್ಕಬಳ್ಳಾಪುರ ತಾಲೂಕಿನ ರಾಮಚಂದ್ರ ಹೊಸೂರು ಗ್ರಾಮದ ರೈತ ರವಿಕುಮಾರ್ ಎನ್ನುವವರು ಒಂದು ಎಕರೆ ಗ್ರೀನ್ ಹೌಸ್ ನಲ್ಲಿ ನಾಲ್ಕು ಕಲರ್ ಗುಲಾಬಿ ಹೂ ಬೆಳೆದಿದ್ದಾರೆ. ಅದರಲ್ಲಿ ತಾಜ್ ಮಹಲ್ ತಳಿಯ ರೆಡ್ ರೋಸ್ ಹೂವಿಗೆ ಇದ್ದಕ್ಕಿದ್ದ ಹಾಗೆ ಬೆಲೆ ದುಪ್ಪಟ್ಟು ಬಂದಿದೆ. ಇದ್ರಿಂದ ರೈತನ ಮೊಗದಲ್ಲಿ ಮಂದಹಾಸದ ಮೂಡಿದೆ.
ಇನ್ನು ಗುಲಾಬಿಯಲ್ಲಿ ಯೆಲ್ಲೋ ಹೂ, ವೈಟ್, ಪಿಂಕ್ ಸೇರಿದಂತೆ ರೆಡ್ ರೋಸ್ ಬೆಳೆಯಲಾಗಿದೆ. ಆದ್ರೆ ಪ್ರೇಮಿಗಳ ದಿನ ಕಾಲೇಜು ಹುಡುಗ ಹುಡುಗಿಯರಿಂದ ಹಿಡಿದು ದಂಪತಿವರೆಗೂ ಕೆಲವರು ರೆಡ್ ರೋಸ್ ನೀಡಿ ಐ ಲವ್ ಯೂ ಅಂತ ಹೇಳ್ತಾರೆ. ಇದ್ರಿಂದ ತಲಾ ಒಂದು ರೆಡ್ ರೋಜ್ ಗೆ ಸದ್ಯ 15 ರೂಪಾಯಿ ಯಿಂದ ಹಿಡಿದು 20 ರೂಪಾಯಿವರೆಗೂ ಮಾರಾಟವಾಗ್ತಿದೆ. ಇನ್ನು ಕೆಲವು ಗುಲಾಬಿ ವರ್ತಕರು ಈಗಾಗಲೇ.. ತೋಟಕ್ಕೆ ಬಂದು ಹೂ ಖರೀದಿ ಮಾಡಿದ್ದಾರೆ. ಕೆಲವು ವರ್ತಕರು ಮೊದಲೇ ಆರ್ಡರ್ ಕೊಟ್ಟು ಹೂ ಸರಬರಾಜು ಮಾಡುವಂತೆ ಮನವಿ ಮಾಡಿದ್ದಾರೆ. ಅಸಲಿಗೆ ಪ್ರೀತಿಯಲ್ಲಿ ಬಿದ್ದ ಹುಡುಗಿಯರು ರೆಡ್ ರೋಜ್ ಗೆ ನಾಚಿ ನೀರಾಗುವುದು ನೋಡುವುದೇ ಚೆಂದ.
ಒಟ್ನಲ್ಲಿ ಪ್ರೇಮಿಗಳ ದಿನ ಬಂದ್ರೆ ಸಾಕು, ತಾಜ್ ಮಹಲ್ ರೆಡ್ ರೋಜ್ ಬೇಕೇ ಬೇಕು, ಮುನಿದ ಪತ್ನಿಗೆ, ಸನಿಹದ ಗರ್ಲ್ ಫ್ರೆಂಡ್ ಗೆ ಪ್ರೇಮ ನಿವೇದನೆ ಮಾಡಲು ತಾಜಾ ತಾಜಾ ರೋಜ್ ಬೇಕು, ಇದ್ರಿಂದ ಪ್ರೇಮಿಗಳ ಮೊಗದಲ್ಲಿ ಪ್ರೇಮದ ಸಿಂಚನವಾದ್ರೆ ರೈತರ ಮೊಗದಲ್ಲಿ ಬೆಲೆಯ ಮಂದಹಾಸ ಮೂಡಿದೆ.
-ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ
Published On - 6:45 am, Mon, 14 February 22