9 ತಿಂಗಳ ನಂತರ ಮನೆಗೆ ಬಂದ ಗಂಡನನ್ನು ರೂಮ್ ನಲ್ಲಿ ಕೂಡಿಹಾಕಿದ ಪತ್ನಿ, ಅಂಥಾದ್ದೇನು ಮಾಡಿದ ಗಂಡ!?

| Updated By: ಸಾಧು ಶ್ರೀನಾಥ್​

Updated on: Apr 11, 2023 | 4:11 PM

ಗಂಡ ಹೆಂಡತಿ ಇಬ್ಬರೂ ಪರಸ್ಪರ ಪ್ರೀತಿ ವಾತ್ಯಲ್ಯ ನಂಬಿಕೆ ಕಳೆದುಕೊಂಡಿದ್ದು... ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಇದ್ರಿಂದ ದಂಪತಿಯ ಇಬ್ಬರು ಮಕ್ಕಳ ಸ್ಥಿತಿ ಅತ್ತ ದರಿ ಇತ್ತ ಪುಲಿಯಂತಾಗಿದ್ದು... ದಿಕ್ಕು ತೋಚದಂತಾಗಿದ್ದಾರೆ.

9 ತಿಂಗಳ ನಂತರ ಮನೆಗೆ ಬಂದ ಗಂಡನನ್ನು ರೂಮ್ ನಲ್ಲಿ ಕೂಡಿಹಾಕಿದ ಪತ್ನಿ, ಅಂಥಾದ್ದೇನು ಮಾಡಿದ ಗಂಡ!?
ಮನೆಗೆ ಬಂದ ಗಂಡನನ್ನು ರೂಮ್ ನಲ್ಲಿ ಕೂಡಿಹಾಕಿದ ಪತ್ನಿ
Follow us on

ಅವರಿಬ್ಬರೂ ಒಬ್ಬರನ್ನೊಬ್ಬರು ಮೆಚ್ಚಿ ಅದ್ದೂರಿಯಾಗಿ ಮದುವೆ ಮಾಡಿಕೊಂಡಿದ್ದರು. ಸುಂದರ ಸುಖೀ ಸಂಸಾರಕ್ಕೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳಿದ್ದಾರೆ. ಆದ್ರೆ ಗಂಡನ (husband) ಮೇಲೆ ಹೆಂಡತಿಗೆ (Wife) ಅನುಮಾನ- ಹೆಂಡತಿ ಮೇಲೆ ಗಂಡನಿಗೆ ಅನುಮಾನ! ಅನುಮಾನಂ ಪೆದ್ದ ರೋಗಂ ಅನ್ನೊ ಹಾಗೆ ನಿನಗೆ ಅಕ್ರಮ ಸಂಬಂಧವಿದೆ (extra marital affair) ಅಂತಾ ಅವಳು- ನಿನಗೆ ಅಕ್ರಮ ಸಂಬಂಧ ಇದೆ ಅಂತಾ ಇವನು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿ ಕೊನೆಗೆ ಸುಖ ಸಂಸಾರವನ್ನು ಹಾಳು ಮಾಡಿಕೊಂಡಿದ್ದು… ಕೆಲವು ತಿಂಗಳ ನಂತರ ಮನೆಗೆ ಬಂದ ಗಂಡನನ್ನು ಹೆಂಡತಿಯಾದವಳು ರೂಮ್ ನಲ್ಲಿ ಕೂಡಿ ಹಾಕಿ ರಂಪಾಟ ಮಾಡಿದ ಘಟನೆ ನಡೆದಿದೆ. ಅಷ್ಟಕ್ಕೂ ಅದೆಲ್ಲಿ ಅಂತೀರಾ ಈ ವರದಿ ನೋಡಿ!!

ಹೀಗೆ ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಾ…. ಸುಂದರ ಸಂಸಾರ ಹಾಳು ಮಾಡಿಕೊಂಡು ಬೀದಿಗೆ ಬಂದಿರುವುದು ಚಿಕ್ಕಬಳ್ಳಾಪುರ (chikkaballapur) ಜಿಲ್ಲೆ ಬಾಗೇಪಲ್ಲಿ ( bagepalli) ಪಟ್ಟಣದ ಏಟಿಗಡ್ಡಿಪಲ್ಲಿ ಬಡಾವಣೆಯಲ್ಲಿ. ಈಕೆಯ ಹೆಸರು ಗಂಗರಾಜೇಶ್ವರಿ, ಅವನ ಹೆಸರು ವೈ.ಎಸ್. ಮಹೇಶ. ಕೆ.ಎಸ್.ಆರ್.ಟಿ.ಸಿ ಯಲ್ಲಿ ಕಂಡಕ್ಟರ್ ಕಂ ಡ್ರೈವರ್ ಆಗಿದ್ದಾನೆ!

ಇಬ್ಬರೂ ಮದುವೆಯಾಗಿ 20 ವರ್ಷಗಳೇ ಆಗಿವೆ. ಹಣ ಆಸ್ತಿಗೆ ಏನೂ ಕಡಿಮೆಯಾಗಿಲ್ಲ. ಆದ್ರೆ ನಂಬಿಕೆ, ಪರಸ್ಪರ ಪ್ರೀತಿ, ತಿಳಿವಳಿಕೆ ಕಡಿಮೆಯಾಗಿದೆ. ಇದ್ರಿಂದ ಇಬ್ಬರ ಮಧ್ಯೆ ಅನುಮಾನದ ಭೂತ ಭೂತಾಕಾರವಾಗಿ ಬೆಳೆದುಬಿಟ್ಟಿದೆ! ನಿನಗೆ ಅಕ್ರಮ ಸಂಬಂಧ ಅಂತ ಪತ್ನಿ- ನಿನಗೂ ಅಕ್ರಮ ಸಂಬಂಧ ಅಂತ ಗಂಡ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಂಡು ಕೊನೆಗೆ ಸುಖ ಸಂಸಾರ ಹಾಳು ಮಾಡಿಕೊಂಡಿದ್ದಾರೆ.

Also Read:

ಹೆಂಡತಿ ಮಕ್ಕಳ ಬಿಟ್ಟು ನೇಣಿಗೆ ಶರಣಾದ, ವಿವಾಹಿತ ಪ್ರಿಯತಮೆಗಾಗಿ ಹುಚ್ಚನಂತಾದವ ಎದೆ ಮೇಲೆ ಆಕೆಯ ಹೆಸರು ಹಚ್ಚೆ ಹಾಕಿಸಿಕೊಂಡಿದ್ದ!

ಇನ್ನು ಮಹೇಶ, ಬಾಗೇಪಲ್ಲಿ ಕೆ.ಎಸ್.ಆರ್.ಟಿ.ಸಿ ಡಿಪೋದಲ್ಲಿ ಕೆಲಸ ಮಾಡ್ತಿದ್ದು… ಕೆಲವು ತಿಂಗಳುಗಳಿಂದ ಪತ್ನಿ ಇರುವ ಮನೆಗೆ ಹೋಗದೆ ಮಕ್ಕಳ ಮುಖವನ್ನೂ ನೋಡದೆ… ಚಿಕ್ಕಬಳ್ಳಾಪುರದಲ್ಲಿ ಪ್ರತ್ಯೇಕ ಮನೆ ಮಾಡಿಕೊಂಡಿದ್ದಾನಂತೆ! ಹೀಗಿರುವ ಪತಿರಾಯ 9 ತಿಂಗಳ ನಂತರ ಮನೆಗೆ ಬಂದ ಗಂಡನನ್ನು ಆತನ ಪತ್ನಿ ರೂಮ್ ನಲ್ಲಿ ಕೂಡಿಹಾಕಿ ಗಲಾಟೆ ಮಾಡಿದ್ದಾಳೆ.

ನಂತರ ಪೊಲೀಸರು ಆಗಮಿಸಿ ಮಹೇಶನನ್ನು ರಕ್ಷಿಸಿ ಪೊಲೀಸ್ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದಾರೆ. ಇತ್ತ ಪತ್ನಿ ಆರೋಪಕ್ಕೆ ತಿರುಗೇಟು ನೀಡಿರುವ ಆಕೆಯ ಗಂಡ… ತನ್ನ ಪತ್ನಿಯೇ ಸರಿ ಇಲ್ಲ. ಅದರಿಂದ ತನ್ನ ನೆಮ್ಮದಿ ಹಾಳು ಆಗಿದೆ, ಡೈವೋರ್ಸ್​​ಗೆ ನ್ಯಾಯಾಲಯದ ಮೊರೆ ಹೋಗಿದ್ದೇನೆ ಎಂದು ಅವಲತ್ತುಕೊಂಡಿದ್ದಾನೆ.

ಗಂಡ ಹೆಂಡತಿ ಇಬ್ಬರೂ ಪರಸ್ಪರ ಪ್ರೀತಿ ವಾತ್ಯಲ್ಯ ನಂಬಿಕೆ ಕಳೆದುಕೊಂಡಿದ್ದು… ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಇದ್ರಿಂದ ದಂಪತಿಯ ಇಬ್ಬರು ಮಕ್ಕಳ ಸ್ಥಿತಿ ಅತ್ತ ದರಿ ಇತ್ತ ಪುಲಿಯಂತಾಗಿದ್ದು… ದಿಕ್ಕು ತೋಚದಂತಾಗಿದ್ದಾರೆ.

ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:08 pm, Tue, 11 April 23