ಡಾ ಕೆ ಸುಧಾಕರ್ ವಿರುದ್ಧ ಹೆಚ್ಚಿದ ವಿರೋಧ, ನೆಲಮಂಗಲ ಮತ್ತು ಯಲಹಂಕದಲ್ಲಿ ಗೋ ಬ್ಯಾಕ್ ಸುಧಾಕರ್ ಅಭಿಯಾನ
ಸುಧಾಕರ್ ಶಾಸಕ ಮತ್ತು ಮಂತ್ರಿಯಾಗಿದ್ದಾಗ, ಯಾವ ಕೆಲಸವನ್ನೂ ಮಾಡಿಲ್ಲ, ನಮ್ಮ ಕಷ್ಟಸುಖ ವಿಚಾರಿಸಿಕೊಳ್ಳಲು ಬಂದಿಲ್ಲ ಎಂದು ಆರೋಪಿಸುತ್ತಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ಬಿಜೆಪಿ ಶಾಸಕ ಇದ್ದಾರೆ, ಇದಕ್ಕೆ ಸುಧಾಕರ್ ಅವರ ನಿಷ್ಕ್ರಿಯತೆ ಕಾರಣ ಎಂದು ಕಾರ್ಯಕರ್ತರು ಹೇಳುತ್ತಾರೆ,
ನೆಲಮಂಗಲ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ (Chikkaballapura LS Constituency) ಟಿಕೆಟ್ ಸಿಕ್ಕಿದೆ ಅಂತ ಮಾಜಿ ಸಚಿವ ಡಾ ಕೆ ಸುಧಾಕರ್ (Dr K Sudhakar) ಸಂಭ್ರಮಿಸುತ್ತಿರಬಹುದು ಆದರೆ, ಕ್ಷೇತ್ರದ ಕಾರ್ಯಕರ್ತರು (party workers) ಅವರ ಅಭ್ಯರ್ಥಿತ್ವವನ್ನು ವಿರೋಧಿಸುತ್ತಿದ್ದಾರೆ. ನೆಲಮಂಗಲ ಮತ್ತು ಯಲಹಂಕ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಮಹಿಳಾ ಮತ್ತು ಯುವ ಕಾರ್ಯಕರ್ತರು ಗೋ ಬ್ಯಾಕ್ ಸುಧಾಕರ್ ಅಭಿಯಾನವನ್ನು ಶುರುಮಾಡಿದ್ದಾರೆ. ಕೋವಿಡ್ ಸಮಯಲ್ಲಿ ರೂ. 2,400 ಕೋಟಿ ಅವ್ಯವಹಾರ ನಡೆಸಿದ ಆರೋಪ ಎದುರಿಸುತ್ತಿರುವ ಸುಧಾಕರ್ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವುದು ಬೇಡ, ಅವರ ಬದಲಿಗೆ ಯುವ ಮುಖಂಡ ಅಲೋಕ್ ವಿಶ್ವನಾಥ್ ಗೆ ಟಿಕೆಟ್ ಕೊಡಿ ಅಂತ ಮಹಿಳಾ ಕಾರ್ಯಕರ್ತೆಯರು ಹೇಳುತ್ತಿದ್ದಾರೆ. ಸುಧಾಕರ್ ಶಾಸಕ ಮತ್ತು ಮಂತ್ರಿಯಾಗಿದ್ದಾಗ, ಯಾವ ಕೆಲಸವನ್ನೂ ಮಾಡಿಲ್ಲ, ನಮ್ಮ ಕಷ್ಟಸುಖ ವಿಚಾರಿಸಿಕೊಳ್ಳಲು ಬಂದಿಲ್ಲ ಎಂದು ಆರೋಪಿಸುತ್ತಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ಬಿಜೆಪಿ ಶಾಸಕ ಇದ್ದಾರೆ, ಇದಕ್ಕೆ ಸುಧಾಕರ್ ಅವರ ನಿಷ್ಕ್ರಿಯತೆ ಕಾರಣ, ಅವರು ಅಭ್ಯರ್ಥಿಯಾಗಿ ನಮಗೆ ಬೇಡ, ಸುಧಾಕರ್ ಸ್ಪರ್ಧಿಸಿದರೆ ಬಿಜೆಪಿ ಕೆಟ್ಟ ಹೆಸರು ಬರುತ್ತದೆ ಎಂದು ಯುವಕರು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ