ಸಂಧಾನ ಸಭೆಯಲ್ಲಿ ಸಿಎಂ, ಡಿಸಿಎಂ ಎದುರು ರಮೇಶ್ ಕುಮಾರ್, ಮುನಿಯಪ್ಪ ನಡುವೆ ಮಾತಿನ ಚಕಮಕಿ
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾಯಕರ ಮಧ್ಯೆ ಇರುವ ಧ್ವೇಷವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಶನಿವಾರ (ಮಾ.23) ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಕೋಲಾರದಲ್ಲಿ ನಡೆದ ಸಂಧಾನ ಸಭೆ ನಡೆಸಿದರು. ಸಭೆಯಲ್ಲಿ ರಮೇಶ್ ಕುಮಾರ್ ಮತ್ತು ಕೆ.ಹೆಚ್ ಮುನಿಯಪ್ಪ ಮುಖಾಮುಖಿಯಾಗಿದ್ದು, ಪರಸ್ಪರ ಕಿತ್ತಾಡಿಕೊಂಡರು.
ಕೋಲಾರ, ಮಾರ್ಚ್ 26: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಎದರು, ಮಾಜಿ ಸಭಾಪತಿ ರಮೇಶ್ ಕುಮಾರ್ (Ramesh Kumar) ಮತ್ತು ಸಚಿವ ಕೆ.ಹೆಚ್ ಮುನಿಯಪ್ಪ (KH Muniyappa) ಕಿತ್ತಾಡಿಕೊಂಡಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾಯಕರ ಮಧ್ಯೆ ಇರುವ ಧ್ವೇಷವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಶನಿವಾರ (ಮಾ.23) ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಕೋಲಾರದಲ್ಲಿ ನಡೆದ ಸಂಧಾನ ಸಭೆ ನಡೆಸಿದರು. ಸಭೆಯಲ್ಲಿ ರಮೇಶ್ ಕುಮಾರ್ ಮತ್ತು ಕೆ.ಹೆಚ್ ಮುನಿಯಪ್ಪ ಮುಖಾಮುಖಿಯಾಗಿದ್ದರು.
ಈ ಸಂಧಾನ ಸಭೆಯಲ್ಲೂ ಇಬ್ಬರು ನಾಯಕರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಇಬ್ಬರು ನಾಯಕರು ತಮ್ಮ ಹಳೆಯ ಚುನಾವಣೆಗಳ ಸೋಲಿಗೆ ಕಾರಣವೇನು ಎಂಬುವುದರ ಕುರಿತು ಪಟ್ಟಿ ಬಿಚ್ಚಿಟ್ಟರು. ತಮ್ಮ ತಮ್ಮ ಸೋಲಿಗೆ ಪರಸ್ಪರ ಆರೋಪ ಪ್ರತ್ಯಾರೋಪಗಳ ಸುರಿಮಳೆ ಗೈದರು. ವಿರೋಧಿಗಳ ಮನೆಯಲ್ಲಿ ಹೋಗಿ ಕುಳಿತಿರಲಿಲ್ವಾ ಎಂದು ಪರಸ್ಪರ ಮುನಿಯಪ್ಪ ಮತ್ತು ರಮೇಶ್ ಕುಮಾರ್ ಆರೋಪ ಮಾಡಿದರು.
ಈ ಇಬ್ಬರು ನಾಯಕರ ಕಿತ್ತಾಟ ನೋಡಿ ಕೆ.ಹೆಚ್ ಮುನಿಯಪ್ಪ ಅಳಿಯಿನಿಗೆ ಟಿಕೇಟ್ ನೀಡಲು ಸಿಎಂ ಮತ್ತು ಡಿಸಿಎಂ ಹಿಂದೇಟು ಹಾಕಿದ್ದಾರೆ ಎಂದು ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಕೋಲಾರ ಲೋಕಸಭಾ ಎಸ್‌ಸಿ ಮೀಸಲು ಕ್ಷೇತ್ರದಿಂದ ರಾಜ್ಯಸಭೆಯ ಮಾಜಿ ಸದಸ್ಯ ಡಾ.ಎಲ್ ಹನುಮಂತಯ್ಯ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಮೂಲಗಳು ಖಚಿತ ಪಡಿಸಿವೆ.
ನಾಯಕರುಗಳ ನಡುವಿನ ಮುನಿಸಿಗೆ ಕಾರಣವೇನು ?
ಅದು 2008 ರ ವಿಧಾನಸಭಾ ಚುನಾವಣೆ, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಈ ಚುನಾವಣೆಯಲ್ಲಿ ರಮೇಶ್ ಕುಮಾರ್ ಹಾಗೂ ಕೆ.ಶ್ರೀನಿವಾಸಗೌಡರ ಸೋತಿದ್ದರು. ನನ್ನ ಸೋಲಿಗೆ ಕೆಹೆಚ್ ಮುನಿಯಪ್ಪ ಅವರೇ ಕಾರಣವೆಂದು ರಮೇಶ್ ಕುಮಾರ್ ಅವರು ಮುನಿಸಿಕೊಂಡಿದ್ದಾರೆ. ಅಂದಿನಿಂದ ಶುರುವಾಗಿದ್ದು ರಮೇಶ್ ಕುಮಾರ್ ಹಾಗೂ ಕೆಹೆಚ್ ಮುನಿಯಪ್ಪ ನುಡವಿನ ಮುನಿಸು ಇನ್ನೂ ಮುಂದುವರೆದಿದೆ.
ಇದನ್ನೂ ಓದಿ: ಮೈಸೂರು ರೆಸಾರ್ಟ್ನಲ್ಲಿ ಕುಳಿತು ಸಿಎಂ ಸಿದ್ದರಾಮಯ್ಯ ಆಪರೇಷನ್ ಹಸ್ತ: ಯಡಿಯೂರಪ್ಪ ಆಪ್ತರಿಗೆ ಗಾಳ
2008ರ ವಿಧಾನಸಭಾ ಚುನಾವಣೆಯಲ್ಲಿ ಶುರುವಾದ ಮೈಮನಸ್ಸು, ಬಣ ರಾಜಕೀಯಕ್ಕೆ ತಿರುಗಿದೆ. 16 ವರ್ಷಗಳಿಂದ ಬಣ ರಾಜಕೀಯ ನಡೆದುಕೊಂಡು ಬರುತ್ತಿದೆ. 16 ವರ್ಷಗಳಿಂದ ಎರಡೂ ಬಣಗಳು ಪಕ್ಷಕ್ಕಿಂತ ತಮ್ಮ ಬಣಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿವೆ. ಕೆ.ಸಿ.ವ್ಯಾಲಿ ನೀರಾವರಿ ಯೋಜನೆ ಜಾರಿ ವಿಚಾರದಲ್ಲೂ ಯೋಜನೆಯ ಕ್ರೆಡಿಟ್ ಯಾರಿಗೆ ಅನ್ನೋ ವಿಚಾರದಲ್ಲೂ ಎರಡೂ ಗುಂಪುಗಳ ನಡುವೆ ಕಿತ್ತಾಟ ಜೋರಾಗಿತ್ತು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕೆ.ಹೆಚ್. ಮುನಿಯಪ್ಪ ಸೋಲಿಗೆ ರಮೇಶ್ ಕುಮಾರ್ ಬಣ ಬಹಿರಂಗವಾಗಿಯೇ ಕೆಲಸ ಮಾಡಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡದೆ ಹಿಂದೆ ಸರಿಯಲು ಇವರಿಬ್ಬರ ಬಣ ರಾಜಕೀಯವೇ ಕಾರಣ ಎನ್ನಬಹುದು. ದೆಹಲಿಯ ಹೈಕಮಾಂಡ್ ನಾಯಕರಿಂದ ಹಿಡಿದು ರಾಜ್ಯ ನಾಯಕರ ವರಗೆ ಎಷ್ಟೇ ಪ್ರಯತ್ನಿಸಿದರೂ ಬಣ ರಾಜಕೀಯ ಶಮನವಾಗುತ್ತಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:41 am, Tue, 26 March 24