ಟಿಕೆಟ್ಗಾಗಿ ಪ್ರಯತ್ನಿಸಿಲ್ಲ, ನೀಡಿದರೆ ಚಿಕ್ಕಬಳ್ಳಾಪುರವನ್ನು ಅಭಿವೃದ್ಧಿ ಶಿಖರಕ್ಕೆ ಒಯ್ಯುತ್ತೇನೆ: ಡಾ ಕೆ ಸುಧಾಕರ್, ಮಾಜಿ ಶಾಸಕ
ಕಳೆದ 15 ವರ್ಷಗಳಿಂದ ಚಿಕ್ಕಬಳ್ಳಾಪುರದ ಅಭಿವೃದ್ಧಿಗಾಗಿ ತಾನು ಅಪಾರವಾಗಿ ಶ್ರಮಿಸಿರುವುದಾಗಿ ಹೇಳುವ ಸುಧಾಕರ್, ಅದೆಲ್ಲವನ್ನು ಜನ ನೆನಪಿಸಿಕೊಳ್ಳುತ್ತಿದ್ದಾರೆ ಮತ್ತು ಕಳೆದ ಒಂದು ವರ್ಷದ ಅವಧಿಯಲ್ಲಿ ಅಂದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಚಿಕ್ಕಬಳ್ಳಾಪುರ ಅಭಿವೃದ್ಧಿ ಶೂನ್ಯವಾಗಿದೆ. ಹಾಗಾಗಿ ತನಗೊಂದು ಅವಕಾವನ್ನು ನೀಡಿದರೆ ಚಿಕ್ಕಬಳ್ಳಾಪುರವನ್ನು ಪುನಃ ಪ್ರಗತಿ ಪಥಕ್ಕೆ ತರುವುದಾಗಿ ಹೇಳಿದರು.
ಚಿಕ್ಕಬಳ್ಳಾಪುರ: ಮಾಜಿ ಶಾಸಕ ಡಾ ಕೆ ಸುಧಾಕರ್ (Dr K Sudhakar) ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ (Chikkaballapura constituency) ಸ್ಪರ್ಧಿಸಲು ಟಿಕೆಟ್ ಗಾಗಿ ಪ್ರಯತ್ನಿಸುತ್ತಿಲ್ಲವಾದರೂ ಕಳೆದ 3-4 ವರ್ಷಗಲ್ಲಿ ತಾನು ಪಕ್ಷದ ಸಂಘಟನೆ ಮಾಡಿದ್ದನ್ನು ಗಮದಲ್ಲಿಟ್ಟುಕೊಂಡು ಟಿಕೆಟ್ ನೀಡಿದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (PM Narendra Modi) ಹೆಗಲಿಗೆ ಹೆಗಲು ನೀಡಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದರು. ಪಕ್ಷದ ಟಿಕೆಟ್ ಸಿಕ್ಕಿದ್ದೇಯಾದರೆ, ಚಿಕ್ಕಬಳ್ಳಾಪುರದ ಸರ್ವಾಂಗೀಣ ಅಭಿವೃದ್ಧಿ ಮಾಡಿ ಕ್ಷೇತ್ರಕ್ಕೆ ಅಂತರಾಷ್ಟ್ರೀಯ ಮನ್ನಣೆ ದಕ್ಕುವಂತೆ ಮಾಡುವುದಾಗಿ ಸುಧಾಕರ್ ಹೇಳಿದರು. ಈ ಬಾರಿ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿಯಾಗಿರುವುದರಿಂದ ಬಿಜೆಪಿಗೆ ಸುಲಭ ಜಯ ದಕ್ಕುವಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು. ಕಳೆದ 15 ವರ್ಷಗಳಿಂದ ಚಿಕ್ಕಬಳ್ಳಾಪುರದ ಅಭಿವೃದ್ಧಿಗಾಗಿ ತಾನು ಅಪಾರವಾಗಿ ಶ್ರಮಿಸಿರುವುದಾಗಿ ಹೇಳುವ ಸುಧಾಕರ್, ಅದೆಲ್ಲವನ್ನು ಜನ ನೆನಪಿಸಿಕೊಳ್ಳುತ್ತಿದ್ದಾರೆ ಮತ್ತು ಕಳೆದ ಒಂದು ವರ್ಷದ ಅವಧಿಯಲ್ಲಿ ಅಂದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಚಿಕ್ಕಬಳ್ಳಾಪುರ ಅಭಿವೃದ್ಧಿ ಶೂನ್ಯವಾಗಿದೆ. ಹಾಗಾಗಿ ತನಗೊಂದು ಅವಕಾವನ್ನು ನೀಡಿದರೆ ಚಿಕ್ಕಬಳ್ಳಾಪುರವನ್ನು ಪುನಃ ಪ್ರಗತಿ ಪಥಕ್ಕೆ ತರುವುದಾಗಿ ಡಾ ಕೆ ಸುಧಾಕರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಲೋಕಸಭಾ ಚುನಾವಣೆ ಹೊತ್ತಲ್ಲೇ ರಾಜೀನಾಮೆ ನೀಡಿದ ಕೇಂದ್ರ ಚುನಾವಣಾ ಆಯುಕ್ತ ಅರುಣ್ ಗೋಯಲ್