ಕ್ರಿಶ್ಚಿಯನ್ನರು ಹೆಚ್ಚಿನ ಸಂಖ್ಯೆಯಲ್ಲಿರುವ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ನಾನು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ: ಸಾಧು ಕೋಕಿಲ
ತಾನ್ಯಾವತ್ತೂ ಜನರನ್ನು ತಾರತಮ್ಮ ಭಾವದಿಂದ ನೋಡಿದವನಲ್ಲ, ಎಲ್ಲ ವರ್ಗದವರನ್ನು ಸಮಾನವಾಗಿ ನೋಡುತ್ತೇನೆ ಎಂದು ಹೇಳುವ ಸಾಧು ಕೋಕಿಲ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಸುಮಾರು 15 ಲಕ್ಷ ಜನ ಕ್ರಿಶ್ಚಿಯನ್ ಸಮುದಾಯದವರಿರುವುದರಿಂದ ಗೆಲ್ಲುವ ಅವಕಾಶ ಚೆನ್ನಾಗಿದೆ ಎನ್ನುತ್ತಾರೆ.
ಬೆಂಗಳೂರು: ರಾಜ್ಯದ ಕೆಲ ಪ್ರಮುಖ ಕಾಂಗ್ರೆಸ್ ನಾಯಕರೊಂದಿಗೆ ಸ್ಯಾಂಡಲ್ ವುಡ್ ನಟ, ನಿರ್ಮಾಪಕ-ನಿರ್ದೇಶಕ, ಸಂಗೀತ ನಿರ್ದೇಶಕ ಮತ್ತು ಕಮೆಡಿಯನ್ ಸಾಧು ಕೋಕಿಲ (Sadhu Kokila) ಪದೇಪದೆ ಕಾಣಿಸಿಕೊಳ್ಳುತ್ತಿದ್ದಾಗಲೇ ಇಂಥದೊಂದು ಸಂಶಯ ಕನ್ನಡಿಗರನ್ನು ಕಾಡಲಾರಂಭಿಸಿತ್ತು. ಬೆಂಗಳೂರಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಅವರು ಸಂಶಯವನ್ನು ನಿವಾರಿಸಿದ್ದಾರೆ. ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ (Bengaluru Central LS seat) ತಾನು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯೆಂದು (ticket aspirant) ಅವರು ಹೇಳುತ್ತಾರೆ. ಅವರು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರರು ಅಂತ ಬಹಳಷ್ಟು ಜನಕ್ಕೆ ಇವತ್ತೇ ಗೊತ್ತಾಗಿರಬಹುದು. ಅಂದಹಾಗೆ ಅವರ ಅಸಲಿ ಹೆಸರು ಸಹಾಯಶೀಲನ್ ಶಾದ್ರಕ್. ತಾನೊಬ್ಬ ಕಲಾವಿದನಾಗಿರುವರಿಂದ ಎಲ್ಲ ಎಲ್ಲ ಸಮುದಾಯಗಳ ಜನ ತನ್ನನ್ನು ಇಷ್ಟಪಡುತ್ತಾರೆ, ತಾನ್ಯಾವತ್ತೂ ಜನರನ್ನು ತಾರತಮ್ಮ ಭಾವದಿಂದ ನೋಡಿದವನಲ್ಲ, ಎಲ್ಲ ವರ್ಗದವರನ್ನು ಸಮಾನವಾಗಿ ನೋಡುತ್ತೇನೆ ಎಂದು ಹೇಳುವ ಸಾಧು ಕೋಕಿಲ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಸುಮಾರು 15 ಲಕ್ಷ ಜನ ಕ್ರಿಶ್ಚಿಯನ್ ಸಮುದಾಯದವರಿರುವುದರಿಂದ ಗೆಲ್ಲುವ ಅವಕಾಶ ಚೆನ್ನಾಗಿದೆ ಎನ್ನುತ್ತಾರೆ.
ಚಾಮರಾಜಪೇಟೆ ಮತ್ತು ಶಿವಾಜಿನಗರದಲ್ಲಿರುವ ಕ್ರೈಸ್ತರೆಲ್ಲ ತನಗೆ ಟಿಕೆಟ್ ನೀಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ, ಒಂದು ವೇಳೆ ಟಿಕೆಟ್ ಸಿಕ್ಕರೆ ಖಂಡಿತ ಗೆಲ್ತೀನಿ ಅನ್ನುವ ಕೋಕಿಲ, ಟಿಕೆಟ್ ಆಕಾಂಕ್ಷಿಯಾಗಿರುವುದು ನಿಜವಾದರೂ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದು ಹೇಳುತ್ತಾರೆ
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ‘ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್’; ಕೈ ಪಕ್ಷದ ಪರ ಸಾಧು ಕೋಕಿಲ ಅಬ್ಬರದ ಪ್ರಚಾರ