ವಿಧಾನಸೌಧದಲ್ಲಿ ಸಾಧು ಕೋಕಿಲ ಮಾತು ಕೇಳಿ ಗಾಬರಿಯಾದ ಮಂಡಳಿ ಅಧ್ಯಕ್ಷರು; ಅಂಥದ್ದೇನಾಯ್ತು?
ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿ ಸಾಧುಕೋಕಿಲ ಅವರು ನೇಮಕ ಆಗಿದ್ದಾರೆ. 15ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಅವರ ಮಾತು ಕೇಳಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ಎಂ ಸುರೇಶ್ ಅವರಿಗೆ ಒಂದು ಕ್ಷಣ ಗಾಬರಿ ಆಗಿದೆ. ಯಾಕೆ? ಈ ವಿಡಿಯೋದಲ್ಲಿದೆ ಉತ್ತರ..
15ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ (15th BIFFES) ಯಶಸ್ವಿಯಾಗಿ ನಡೆದಿದೆ. ಒಂದು ವಾರಗಳ ಕಾಲ ನಡೆದ ಈ ಚಿತ್ರೋತ್ಸವದಲ್ಲಿ ದೇಶ-ವಿದೇಶದ ನೂರಾರು ಸಿನಿಮಾಗಳು ಪ್ರದರ್ಶನ ಕಂಡಿವೆ. ಇಂದು (ಮಾರ್ಚ್ 7) ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಸಮಾರೋಪ ಸಮಾರಂಭ ನಡೆದಿದೆ. ಇದರಲ್ಲಿ ಕನ್ನಡ ಚಿತ್ರರಂಗದ ಅನೇಕರು ಭಾಗಿದ್ದಾರೆ. ವೇದಿಕೆಯಲ್ಲಿ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ (Sadhu Kokila) ಅವರು ಮಾತನಾಡಿದ್ದಾರೆ. ಅವರ ಮಾತು ಕೇಳಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ಎಂ ಸುರೇಶ್ ಅವರಿಗೆ ಗಾಬರಿ ಆಗಿದೆ. ಕಾರಣ ಇಷ್ಟೇ.. ಇತ್ತೀಚೆಗೆ ಸಾಧು ಕೋಕಿಲ ಅವರು ಕರ್ನಾಟಕ ಚಲನಚಿತ್ರ ಅಕಾಡೆಮಿ (Karnataka Chalanachitra Academy) ಅಧ್ಯಕ್ಷರಾಗಿ ನೇಮಕ ಆಗಿದ್ದಾರೆ. ‘ನಾನು ಅಕಾಡೆಮಿ ಅಧ್ಯಕ್ಷನಾಗಿದ್ದೇನೆ’ ಎಂದು ಹೇಳುವ ಬದಲು ಬಾಯ್ತಪ್ಪಿನಿಂದ ‘ವಾಣಿಜ್ಯ ಮಂಡಳಿಯ ಅಧ್ಯಕ್ಷನಾಗಿದ್ದೇನೆ’ ಎಂದು ಹೇಳಿದರು. ಬಳಿಕ ವೇದಿಕೆಯಲ್ಲಿದ್ದ ಮಂಡಳಿ ಅಧ್ಯಕ್ಷ ಎನ್ಎಂ ಸುರೇಶ್ ಕಡೆ ತಿರುಗಿ ನೋಡಿದ ಸಾಧು ಕೋಕಿಲ ಅವರು ‘ಕ್ಷಮಿಸಿ ಸರ್.. ವಾಣಿಜ್ಯ ಮಂಡಳಿ ಅಧ್ಯಕ್ಷರು ಇಲ್ಲೇ ಇದ್ದಾರೆ. ಅವರು ಗಾಬರಿಯಾಗಿ ಬೆವತುಬಿಟ್ಟರು’ ಎಂದರು. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.