‘ನಮ್ಮನೆ ದೇವ್ರು ಆಂಜನೇಯ..’: ಜಮೀರ್ ಎದುರು ಡೈಲಾಗ್ ಹೊಡೆದ ಸಾಧು ಕೋಕಿಲ, ದರ್ಶನ್
ನಟ ದರ್ಶನ್ ಅವರಿಗೆ ಇರುವ ಅಭಿಮಾನಿ ಬಳಗ ದೊಡ್ಡದು. ಅವರು ಎಲ್ಲಿಯೇ ಹೋದರೂ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ವೇದಿಕೆ ಏರಿದರೆ ಡೈಲಾಗ್ ಹೊಡೆಯುವಂತೆ ಫ್ಯಾನ್ಸ್ ಒತ್ತಾಯಿಸುತ್ತಾರೆ. ಹಂಪಿ ಉತ್ಸವದಲ್ಲೂ ಅವರು ಡೈಲಾಗ್ ಹೇಳಿದ್ದಾರೆ. ‘ಮಚ್ಚು ಎರಡು ದಪ ಕೆಂಪಾಗುತ್ತೆ..’ ಎಂದು ಅವರು ‘ಕಾಟೇರ’ ಸಿನಿಮಾದ ಮಾಸ್ ಡೈಲಾಗ್ ಹೊಡೆದು ಮನರಂಜನೆ ನೀಡಿದ್ದಾರೆ.
ಅದ್ದೂರಿಯಾಗಿ ನಡೆಯುತ್ತಿರುವ ಹಂಪಿ ಉತ್ಸವದಲ್ಲಿ (Hampi Utsava) ಎರಡನೇ ದಿನ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೆ. ‘ಚಾಲೆಂಜಿಂಗ್ ಸ್ಟಾರ್’ ದರ್ಶನ್, ನಟ, ನಿರ್ದೇಶಕ, ಸಂಗೀತ ಸಂಯೋಜಕ ಸಾಧು ಕೋಕಿಲ (Sadhu Kokila) ಅವರು ವೇದಿಕೆ ಹಂಚಿಕೊಂಡಿದ್ದಾರೆ. ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕೂಡ ಭಾಗಿ ಆಗಿದ್ದಾರೆ. ಈ ವೇಳೆ ವೇದಿಕೆಯಲ್ಲಿ ಸಾಧು ಕೋಕಿಲ ಮತ್ತು ದರ್ಶನ್ (Darshan) ಅವರು ಡೈಲಾಗ್ ಹೊಡೆದರು. ‘ನಮ್ ಮನೆ ದೇವ್ರು ಆಂಜನೇಯ. ಎತ್ತಿದ್ರೆ ಗದೆ, ಇಳಿಸಿದ್ರೆ ವದೆ’ ಎಂದು ಅವರು ಡೈಲಾಗ್ ಹೇಳಿದರು. ಜಮೀರ್ ಅವರ ಕೋರಿಕೆ ಮೇಲೆ ದರ್ಶನ್ ಅವರು ‘ಕಾಟೇರ’ ಸಿನಿಮಾದ ಡೈಲಾಗ್ ಕೂಡ ಹೊಡೆದರು. ‘ನಮ್ಮ ಅಣ್ಣ (ಜಮೀರ್) ಯಾವತ್ತೂ ಏನೂ ಕೇಳಿಲ್ಲ. ಆದರೂ ಅವರಿಗೋಸ್ಕರ ಒಂದೇ ಒಂದು ಡೈಲಾಗ್. ನನಗೆ ಡೈಲಾಗ್ ಹೇಳೋಕೆ ಬರಲ್ಲ. ಅದು ತುಂಬ ಕಷ್ಟ. ಯಾಕೆಂದರೆ ಈಗತಾನೆ ಕಲಿಯುತ್ತಿದ್ದೇವೆ’ ಎಂದು ತಮಾಷೆ ಮಾಡಿದರು ದರ್ಶನ್. ಆ ಬಳಿಕ ಅವರು ಹೇಳಿದ ‘ಕಾಟೇರ’ ಸಿನಿಮಾದ ಡೈಲಾಗ್ ಕೇಳಿ ಅಭಿಮಾನಿಗಳು ಎಂಜಾಯ್ ಮಾಡಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ