ಭಟ್ಟರಿಂದ ‘ಬಡವ ರಾಸ್ಕಲ್’ ‘ಟಗರು ಪಲ್ಯ’ ಪಡೆದುಕೊಂಡಿದ್ದೇಗೆ ಡಾಲಿ ಧನಂಜಯ್
Daali Dhananjay: ಡಾಲಿ ಧನಂಜಯ್ ನಿರ್ಮಾಣ ಮಾಡಿ ನಟಿಸಿರುವ ‘ಬಡವ ರಾಸ್ಕಲ್’ ಹಾಗೂ ನಾಗಭೂಷಣ್ ನಟಿಸಿರುವ ‘ಟಗರು ಪಲ್ಯ’ ಸಿನಿಮಾಗಳಿಗೂ ಯೋಗರಾಜ್ ಭಟ್ಟರಿಗೂ ನೇರ ಸಂಬಂಧವಿದೆ.
ಡಾಲಿ ಧನಂಜಯ್ (Daali Dhananjay) ನಿರ್ಮಾಣ ಮಾಡಿರುವ ‘ಬಡವ ರಾಸ್ಕಲ್’ ಹಾಗೂ ‘ಟಗರು ಪಲ್ಯ’ ಸಿನಿಮಾಗಳೆರಡೂ ಹಿಟ್ ಆಗಿವೆ. ‘ಬಡವ ರಾಸ್ಕಲ್’ ಸಿನಿಮಾದಲ್ಲಿ ಸ್ವತಃ ಧನಂಜಯ್ ನಾಯಕನಾಗಿ ನಟಿಸಿದ್ದಾರೆ. ‘ಟಗರು ಪಲ್ಯ’ ಸಿನಿಮಾಕ್ಕೆ ನಾಗಭೂಷಣ ನಾಯಕ. ಅಂದಹಾಗೆ ಈ ಎರಡೂ ಸಿನಿಮಾಗಳಿಗೂ ನಿರ್ದೇಶಕ ಯೋಗರಾಜ್ ಭಟ್ಟರಿಗೂ ನೇರ ಸಂಬಂಧವಿದೆ. ‘ಬಡವ ರಾಸ್ಕಲ್’ ಟೈಟಲ್ ಭಟ್ಟರ ಬಳಿ ಇತ್ತಂತೆ. ಅದನ್ನು ಭಟ್ಟರ ಹಿಂದೆ ಬಿದ್ದು ಪಡೆದುಕೊಂಡರಂತೆ ಡಾಲಿ ಧನಂಜಯ್. ಅದಾದ ಬಳಿಕ ‘ಟಗರು ಪಲ್ಯ’ ಸಿನಿಮಾದ ಚಿತ್ರಕತೆ ಸಹ ಭಟ್ಟರ ಬಳಿಯೇ ಇತ್ತಂತೆ. ‘ಸರ್, ನಾವೇನೋ ಬಡವರ ಮಕ್ಳು ಏನೋ ಮಾಡ್ಕೊತೀವಿ ಕೊಡಿ’ ಅಂತ ಹೇಳಿ ಅದನ್ನು ಪಡೆದುಕೊಂಡು ಸಿನಿಮಾ ಮಾಡಿದರಂತೆ ಡಾಲಿ, ಅದೂ ಸಹ ಸೂಪರ್ ಹಿಟ್. ಭಟ್ಟರಿಂದ ಎಷ್ಟೇ ಬಗೆದುಕೊಂಡರೂ ಸಹ ಅವರು ಖಾಲಿ ಆಗುವುದಿಲ್ಲ ಎಂಬುದಕ್ಕೆ ಇದೇ ಉದಾಹರಣೆ ಎಂದರು ಡಾಲಿ ಧನಂಜಯ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ