ಹಂಪಿ ಉತ್ಸವ: ಸಚಿವ ಜಮೀರ್ ಮೇಲೆ ದರ್ಶನ್ಗದೆಷ್ಟು ಪ್ರೀತಿ
Darshan Thoogudeepa: ನಟ ದರ್ಶನ್ ಹಂಪಿ ಉತ್ಸವದಲ್ಲಿ ಭಾಗಿಯಾಗಿದ್ದು ವೇದಿಕೆ ಮೇಲೆ ಮಾತನಾಡುತ್ತಾ ಸಚಿವ ಜಮೀರ್ ಅಹ್ಮದ್ ಅವರನ್ನು ಬಹುವಾಗಿ ಕೊಂಡಾಡಿದ್ದಾರೆ.
ಹಂಪಿ ಉತ್ಸವದಲ್ಲಿ ನಟ ದರ್ಶನ್ (Darshan) ಭಾಗಿಯಾಗಿದ್ದಾರೆ. ಹೊಸಪೇಟೆಯ ಉಸ್ತುವಾರಿ ಸಚಿವರಾಗಿರುವ ಜಮೀರ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ವೇದಿಕೆ ಮೇಲೆ ಮಾತನಾಡಿದ ನಟ ದರ್ಶನ್, ಜಮೀರ್ ಅಹ್ಮದ್ ಹಾಗೂ ಅವರ ಪುತ್ರ ಝುನೈದ್ ಖಾನ್ರನ್ನು ಬಹುವಾಗಿ ಕೊಂಡಾಡಿದರು. ಎಲ್ಲರೂ ನನ್ನನ್ನು ಡಿ-ಬಾಸ್ ಎನ್ನುತ್ತಾರೆ ಆದರೆ ನಾನು ಭಾಯ್ ಎಂದು ಕರೆಯುವುದು ಜಮೀರ್ ಅಹ್ಮದ್ ಅವರನ್ನು. ಅವರೊಬ್ಬ ನಿಸ್ವಾರ್ಥ ವ್ಯಕ್ತಿ. ನನ್ನನ್ನು ಎಂದಿಗೂ ಅವರು ತಮ್ಮ ವೈಯಕ್ತಿಕ ಲಾಭಕ್ಕೆ ಬಳಸಿಕೊಂಡಿಲ್ಲ. ಅದೇ ಕಾರಣಕ್ಕೆ ಅವರ ಮೇಲೆ ನನಗೆ ವಿಶೇಷ ಗೌರವ. ಅವರು ಎಲ್ಲಿಗೇ ಕರೆಯಲಿ ನಾನು ಹೋಗದೇ ಇರುವುದಿಲ್ಲ. ಜಮೀರ್ ಅಹ್ಮದ್ ಅವರಿಗಾಗಿಯೇ ನಾನು ಇಂದು ಇಲ್ಲಿಗೆ ಬಂದಿದ್ದೇನೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos