Chikkaballapura Gelatin Blast: ಚಿಕ್ಕಬಳ್ಳಾಪುರ ಕ್ವಾರಿ ಮಾಲೀಕನಿಗೆ ಇದೆ ಭಾರೀ ರಾಜಕೀಯ ನಂಟು! ರೈಲ್ವೇ ಕೇಂದ್ರ ಸಮಿತಿಗೆ ನೇಮಕ ಮಾಡಿದ್ದು ಸ್ಥಳೀಯ ಸಂಸದ

| Updated By: ಆಯೇಷಾ ಬಾನು

Updated on: Feb 23, 2021 | 11:50 AM

Chikkaballapura Gelatin Blast: ಜಿಲೆಟಿನ್ ಸ್ಪೋಟ ದುರಂತಕ್ಕೆ ಕಾರಣವಾಗಿರುವ ಭ್ರಮರವಾಸಿನಿ ಕ್ರಷರ್ ಹಾಗೂ ಕ್ವಾರಿಯ ಮಾಲೀಕ ನಾಗರಾಜ್, ಚಿಕ್ಕಬಳ್ಳಾಪುರದ ಬಿಜೆಪಿ ಸಂಸದ ಬಿ.ಎನ್. ಬಚ್ಚೇಗೌಡ ಆಪ್ತ. ಈ ಸಂಸದರ ಶಿಫಾರಸು ಮೇರೆಗೆ ನಾಗರಾಜ್, ರೈಲ್ವೆ ಇಲಾಖೆಯ ಸಮಿತಿಯೊಂದಿಗೆ ನೇಮಕಗೊಂಡಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

Chikkaballapura Gelatin Blast: ಚಿಕ್ಕಬಳ್ಳಾಪುರ ಕ್ವಾರಿ ಮಾಲೀಕನಿಗೆ ಇದೆ ಭಾರೀ ರಾಜಕೀಯ ನಂಟು! ರೈಲ್ವೇ ಕೇಂದ್ರ ಸಮಿತಿಗೆ ನೇಮಕ ಮಾಡಿದ್ದು ಸ್ಥಳೀಯ ಸಂಸದ
ಕ್ವಾರಿಯ ಮಾಲೀಕ ನಾಗರಾಜ್ ಮತ್ತು ಚಿಕ್ಕಬಳ್ಳಾಪುರದ ಬಿಜೆಪಿ ಸಂಸದ ಬಿ.ಎನ್. ಬಚ್ಚೇಗೌಡ
Follow us on

ಚಿಕ್ಕಬಳ್ಳಾಪುರ: ಕಲ್ಲು ಗಣಿಗಾರಿಕೆಗಾಗಿ ಸಂಗ್ರಹಿಸಿದ ಜಿಲೆಟಿನ್​ ಕಟ್ಟಿಗಳು ಸ್ಪೋಟ ಪ್ರಕರಣಗಳಿಗೆ ಕೊನೆಮೊದಲು ಇಲ್ಲದಂತಾಗಿದೆ. ಶಿವಮೊಗ್ಗ ಸ್ಫೋಟದಿಂದ ರಾಜ್ಯ ಸರ್ಕಾರ ಎಚ್ಚೆತ್ತಂತೆ ಕಾಣುತ್ತಿಲ್ಲ. ಬದಲಿಗೆ ಆಡಳಿತಾರೂಢ ಬಿಜೆಪಿ ಪಕ್ಷದ ನಾಯಕರೇ ಕಲ್ಲು ಗಣಿಗಾರಿಕೆ ಮಾಲೀಕರನ್ನು ಪೋಷಿಸುತ್ತಿರುವುದು ಬೆಳಕಿಗೆ ಬಂದಿದೆ. ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್​ Mandikal ಹೋಬಳಿಯ ಹಿರೇನಾಗವಲ್ಲಿ ಬಳಿ ನಿನ್ನೆ ನಡುರಾತ್ರಿ ಸಂಭವಿಸಿರುವ ಜಿಲೆಟಿನ್ ಸ್ಪೋಟ ದುರಂತಕ್ಕೆ ಕಾರಣವಾಗಿರುವ ಭ್ರಮರವಾಸಿನಿ ಕ್ರಷರ್ ಹಾಗೂ ಕ್ವಾರಿಯ ಮಾಲೀಕ ನಾಗರಾಜ್ ರಾಜಕೀಯ ಪ್ರಭಾವ ಹೊಂದಿರುವ ವ್ಯಕ್ತಿ. ಇವರು ರೈಲ್ವೆ ಗ್ರಾಹಕರ ಸಲಹಾ ಸಮಿತಿಗೆ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಸದರಿ ನಾಗರಾಜ್, ಚಿಕ್ಕಬಳ್ಳಾಪುರದ ಬಿಜೆಪಿ ಸಂಸದ ಬಿ.ಎನ್. ಬಚ್ಚೇಗೌಡ ಆಪ್ತ. ಈ ಸಂಸದರ ಶಿಫಾರಸು ಮೇರೆಗೆ ನಾಗರಾಜ್, ರೈಲ್ವೆ ಇಲಾಖೆಯ ಸಮಿತಿಯೊಂದಿಗೆ ನೇಮಕಗೊಂಡಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

ಚಿಕ್ಕಬಳ್ಳಾಪುರದ ಹಿರೇನಾಗವೇಲಿ ಬಳಿ ಜಿಲೆಟಿನ್ ಸ್ಫೋಟ ಪ್ರಕರಣದ ಬಳಿಕ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಡವಾಗಿ ಎಚ್ಚೆತ್ತಿದ್ದಾರೆ. ಉನ್ನತಾಧಿಕಾರಿಗಳನ್ನು ಏನು ನಡೆಯುತ್ತಿದೆ ನಿಮ್ಮ ಅಧೀನದಲ್ಲಿ? ನೀವೆಲ್ಲಾ ಏನು ಮಾಡ್ತಿದ್ದೀರಿ ಎಂದು ಮಾತುಮಾತಿನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಧಿಕಾರಿಗಳಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕ್ಲಾಸ್​ 

ಹಿರೇನಾಗವಲ್ಲಿ ಕಲ್ಲು ಕ್ರಶರ್ ಸಮೀಪ ಸ್ಪೋಟಕಗಳ ಸ್ಪೋಟ ಪ್ರಕರಣದ ಸಮ್ಮುಖದಲ್ಲಿ ಅಧಿಕಾರಿಗಳಿಗೆ ಗೃಹ ಸಚಿವರು ಫುಲ್ ಡ್ರಿಲ್ ಮಾಡಿದ್ದಾರೆ. ಘಟನಾ ಸ್ಥಳ ಪರಿಶೀಲನೆ ವೇಳೆ ಸಚಿವ ಬೊಮ್ಮಾಯಿ ಫುಲ್ ಗರಂ ಆಗಿದ್ದಾರೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಬಸವರಾಜ್ ಬೊಮ್ಮಾಯಿ ವಾರ್ನಿಂಗ್​ಗೆ ಬೆವರಿದ ಅಧಿಕಾರಿಗಳು

ಶಿವಮೊಗ್ಗ ಬ್ಲಾಸ್ಟ್ ನಂತರ ಮುನ್ನೆಚ್ಚರಿಕೆಗೆ ತಿಳಿಸಲಾಗಿತ್ತು. ನೀವೇನು ಕಣ್ಮುಚ್ಚಿ ಕುಳಿತ್ತಿದ್ದೀರಾ? ಎಫ್​ಐಆರ್ ಆದ ಮೇಲೂ ಯಾಕೆ ಕ್ರಷರ್ ಮಾಲೀಕ ಅರೆಸ್ಟ್ ಆಗಿಲ್ಲ ಎಂದು ಸುಮಾರು ಒಂದು ಗಂಟೆ ಕಾಲ ಜಿಲ್ಲಾಧಿಕಾರಿ ಲತಾ, ಜಿಲ್ಲಾ ಪೊಲೀಸ್ ವರಿಷ್ಠ ಮಿಥುನ್ ಕುಮಾರ್ ಅವರ ಕಾರ್ಯ ವೈಖರಿಯನ್ನು ಹೋಂ ಮಿನಿಸ್ಟರ್ ಬ್ಲಾಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: Chikkaballapura Gelatin Blast | ಶಿವಮೊಗ್ಗ ಸ್ಫೋಟ ಮಾಸುವ ಮುನ್ನವೇ ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್ ಸ್ಫೋಟ, ಐವರ ಸಾವು

Chikkaballapura Gelatin Blast | ಪ್ರಧಾನಿ, ಮುಖ್ಯಮಂತ್ರಿ, ಗಣಿ ಸಚಿವ ಟ್ವೀಟ್ ಮಾಡಿ ಸ್ಫೋಟದ ಬಗ್ಗೆ ಏನಂದ್ರು?

Published On - 11:45 am, Tue, 23 February 21