ಮುಸ್ಲಿಮರಿಂದ ದೇಶದಲ್ಲಿ ಭಯೋತ್ಪಾಕ ಚಟುವಟಿಕೆಗಳು ನಡೆಯುತ್ತಿವೆ: ಡಾ.ಪ್ರಭಾಕರ್ ಭಟ್ ಕಲ್ಲಡ್ಕ

| Updated By: Rakesh Nayak Manchi

Updated on: Oct 23, 2022 | 6:37 PM

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥ ಸಂಚಲನ ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದು, ಎಡಪಂಥೀಯರ ವಿರುದ್ಧ ಡಾ.ಪ್ರಭಾಕರ್ ಭಟ್ ವಾಗ್ದಾಳಿ ನಡೆಸಿದರು.

ಮುಸ್ಲಿಮರಿಂದ ದೇಶದಲ್ಲಿ ಭಯೋತ್ಪಾಕ ಚಟುವಟಿಕೆಗಳು ನಡೆಯುತ್ತಿವೆ: ಡಾ.ಪ್ರಭಾಕರ್ ಭಟ್ ಕಲ್ಲಡ್ಕ
ಡಾ.ಪ್ರಭಾಕರ್ ಭಟ್ ಕಲ್ಲಡ್ಕ
Follow us on

ಚಿಕ್ಕಬಳ್ಳಾಪುರ: ಎಡಪಂಥೀಯರು ದೇಶದಲ್ಲಿ ವಿಕೃತಿ ನಿರ್ಮಾಣ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ಡಾ.ಪ್ರಭಾಕರ್ ಭಟ್ ಕಲ್ಲಡ್ಕ (Dr. Prabhakar Bhat Kalladka) ವಾಗ್ದಾಳಿ ನಡೆಸಿದರು. ಇದೇ ವೇಳೆ ಕಾಂತಾರ ಸಿನಿಮಾ (Kantara Film)ದ ವಿಚಾರದಲ್ಲಿ ಚಕಾರ ಎತ್ತಿದ ನಟ ಚೇತನ್ (Chethan Ahimsa) ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನ (RSS March) ಕಾರ್ಯಕ್ರಮದಲ್ಲಿ ಬಾಗಿಯಾಗಿ ಬಾಷಣ ಮಾಡಿದ ಕಲ್ಲಡ್ಕ ಭಟ್, ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯದಲ್ಲಿ ವಿಕೃತಿ ಪ್ರಚಾರ ಮಾಡುತ್ತಿದ್ದಾರೆ. ಮುಸ್ಲಿಮರು ಪಾಕಿಸ್ತಾನದ ಬಗ್ಗೆ ಯೋಚನೆ ಮಾಡುತ್ತಾರೆ. ಆದರೆ ಸಾಮಾನ್ಯ ಮುಸ್ಲಿಮರು ಕೂಡ ಆ ಮಾನಸಿಕತೆ ಬೆಳೆಯುತ್ತಿದೆ ಎಂದ ಅವರು, ಮುಸ್ಲಿಮರಲ್ಲಿಯೂ ದೇಶ ಭಕ್ತ ಅಧಿಕಾರಿಗಳು, ನ್ಯಾಯವಾದಿಗಳು ಇದ್ದಾರೆ ಎಂದರು.

ದೇಶದಲ್ಲಿ ಕುಟುಂಬ ನಿಯಂತ್ರಣ ಯೋಜನೆಯನ್ನು ಹಿಂದೂಗಳು ಮಾತ್ರ ನಿರ್ವಹಿಸುತ್ತಿದ್ದಾರೆ. ಆದರೆ ಮುಸ್ಲಿಮರಿಂದ ದೇಶದಲ್ಲಿ ಭಯೋತ್ಪಾಕ ಚಟುವಟಿಕೆಗಳು ನಡೆಯುತ್ತಿದೆ. ಅದಾಗ್ಯೂ ಕೆಲವರು ಹಿಂದೂ ಸಂಘಟನೆಗಳನ್ನು ಕೋಮುವಾದಿ ಎಂದು ಆರೋಪ ಮಾಡುತ್ತಿದ್ದಾರೆ. ಪ್ರಪಂಚದಲ್ಲಿ ಎಲ್ಲಾ ಧರ್ಮಗಳ ಜೊತೆ ಸಹಬಾಳ್ವೆ ನಡೆಸುತ್ತಿದ್ದಾರೆ ಎಂದರೆ ಅದು ಹಿಂದೂಗಳು ಮಾತ್ರ ಎಂದರು. ಮತಾಂತರ ಎಂದರೆ ಅದೊಂದು ಗಂಡಾಂತರ. ನಮ್ಮಲ್ಲಿ ಜಾತಿ ಜಾತಿಗಳ ಮದ್ಯೆ ಗೊಂದಲಗಳು ಇವೆ. ಅಸ್ಪಶೃತೆ ಪಾಪವಲ್ಲವೆಂದರೆ ದೇಶದಲ್ಲಿ ಯಾವುದೇ ಪಾಪವಿಲ್ಲ. ಈ ಹಿಂದೆ ಬಲತ್ಕಾರ, ಮೋಸ ವಂಚನೆಯಿಂದ ಮತಾಂತರ ಮಾಡುತ್ತಿದ್ದರು. ಆದರೆ ಈಗ ಮೊದಲಿನಂತೆ ಮಾಡುವಂತಿಲ್ಲ ಎಂದರು.

ಶಾಲೆಗೆ ಬರಬೇಕು ಅಂದರೆ ಶಾಲೆಯ ನೀತಿ ನಿಯಮಗಳನ್ನು ಪಾಲಿಸಬೇಕು. ಹಿಜಾಬ್ ಧರಿಸಿದರೆ ಅದು ಶಾಲೆಯನ್ನು ಎರಡು ವಿಭಾಗ ಮಾಡಿದಂತೆ. ಬೆಳೆಯುವ ಮಕ್ಕಳಲ್ಲಿ ವಿಷ ಬಿಜ ಬಿತ್ತುವ ಕೆಲಸವಾಗುತ್ತಿದೆ. ಈಗ ಹಿಜಾಬ್ ಬೇಕು ಎನ್ನುವವರು ಮುಂದೆ ಪ್ರತ್ಯೇಕ ತರಗತಿಯ ಬಗ್ಗೆ ಬೇಡಿಕೆ ಇಡುತ್ತಾರೆ. ಅಲ್ಪಸಂಖ್ಯಾತರ ಉನ್ನತಿಗೆ ಬೇಕಾದ ಸೌಕರ್ಯಗಳನ್ನು ನೀಡೋಣ. ಆದರೆ ಅಲ್ಪ ಸಂಖ್ಯಾತರನ್ನು ಹಿಂದೂಗಳ ವಿರುದ್ದ ಎತ್ತಿಕಟ್ಟುವ ಕೆಸಲ ನಡೆಯುತ್ತಿದೆ ಎಂದು ಆರೋಪಿಸಿದರು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:37 pm, Sun, 23 October 22