ಚಿಕ್ಕಮಗಳೂರು, (ಅಕ್ಟೋಬರ್ 25): ಹುಲಿ ಉಗುರು ಲಾಕೆಟ್ ಧರಿಸಿದ ಪ್ರಕರಣದಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಸ್ಪರ್ಧಿ ಹಳ್ಳಿಕಾರ್ ವರ್ತೂರ್ ಸಂತೋಷ್ (Bigg Boss Varthur Santhosh) ಅವರನ್ನು ಬಂಧನವಾದ ಬೆನ್ನಲ್ಲೇ ಬೆನ್ನಲ್ಲೇ ಇದೀಗ ಲಾಕೆಟ್, ಚರ್ಮ ಬಳಕೆ ಮಾಡಿದ ಆರೋಪದ ಮೇಲೆ ಎಲ್ಲರ ಫೋಟೋ ವೀಡಿಯೋಗಳು ಒಂದೊಂದಾಗಿಯೇ ಹೊರಗೆ ಬರುತ್ತಿವೆ. ಅದರಂತೆಯೇ ವಿನಯ್ ಗುರೂಜಿ (Vinay Guruji) ಅವರು ಹುಲಿ ಚರ್ಮದ ಮೇಲೆ ಕುಳಿತುಕೊಂಡಿರುವ ಫೋಟೋ ,ಮತ್ತೆ ವೈರಲ್ ಅಗಿದೆ. ಅಲ್ಲದೇ ದೂರು ದಾಖಲಾಗಿದೆ. ಇನ್ನು ಈ ಬಗ್ಗೆ ಸ್ವತಃ ವಿನಯ್ ಗುರೂಜಿ ಟಿವಿ9ಗೆ ಪ್ರತಿಕ್ರಿಯಿಸಿದ್ದು, ಅಮರೇಂದ್ರ ಕಿರೀಟಿ ಅವರು ದತ್ತಾಶ್ರಮಕ್ಕೆ ಬಂದು ಹುಲಿ ಚರ್ಮ ಕೊಟ್ಟಿದ್ದರು. ಆದ್ರೆ, ಅದನ್ನು ವಾಪಸ್ ಅರಣ್ಯ ಇಲಾಖೆಗೆ ವಾಪಸ್ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ
ಅಮರೇಂದ್ರ ಕಿರೀಟಿ ಅವರ ಬಳಿ ಇದ್ದ ಹುಲಿ ಚರ್ಮ ವಂಶ ಪಾರಂಪರ್ಯವಾಗಿ ಅವರಿಗೆ ಬಂದಿದ್ದು. ಸನ್ಯಾಸಿಗಳು ಹುಲಿ ಚರ್ಮವನ್ನ ಇಟ್ಟುಕೊಳ್ಳುತ್ತಾರೆ ಎಂದು ಹುಲಿ ಚರ್ಮ ನೀಡಿದ್ದರು. ನಾನು ಹುಲಿ ಚರ್ಮದ ಮೇಲೆ ಒಂದು ದಿನ ಕುಳಿತುಕೊಂಡಿದ್ದೆ ಅದರ ಫೋಟೋ ಕೂಡ ತೆಗೆದುಕೊಂಡಿದ್ದರು. ಆಶ್ರಮಕ್ಕೆ ಹುಲಿ ಚರ್ಮ ನೀಡುವಾಗ ಅರಣ್ಯ ಇಲಾಖೆಯಿಂದ ಅನುಮತಿ ಪಡೆದಿದ್ದರು. ಹುಲಿ ಚರ್ಮ ಮನೆಯಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದಲ್ಲ ಎಂದು ಯಾರೋ ಹೇಳಿದರಂತೆ, ಸನ್ಯಾಸಿಗಳು ಕುತ್ತುಕೊಳ್ಳುವ ವಸ್ತು ಮನೆಯಲ್ಲಿ ಇದ್ದರೆ ಸಂಸಾರಿಗಳಿಗೆ ಶ್ರೇಯಸ್ ಅಲ್ಲ ಅಂದಿದ್ರಂತೆ, ನನ್ನ ಬಳಿ ಅಮರೇಂದ್ರ ಕೇಳಿದ್ರು ಹುಲಿ ಚರ್ಮ ಏನು ಮಾಡಲಿ ಎಂದು. ಅದನ್ನ ಸರ್ಕಾರಕ್ಕೆ ನೀಡುವಂತೆ ನಾನು ಹೇಳಿದ್ದೆ. ಬಳಿಕ ಅವರು ಹುಲಿ ಚರ್ಮವನ್ನು ಅರಣ್ಯ ಇಲಾಖೆಗೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ವಿನಯ್ ಗುರೂಜಿ ಆಶ್ರಮದಲ್ಲಿದ್ದ ಹುಲಿ ಚರ್ಮದ ದಾಖಲೆಗಳ ಪ್ರತಿ TV9ಗೆ ಲಭ್ಯ, ದಾಖಲಾತಿಯಲ್ಲೇನಿದೆ?
ನಮ್ಮ ಬಳಿ ಹುಲಿ ಚರ್ಮಕ್ಕೆ ಸಂಬಂಧಿಸಿದ ದಾಖಲೆಗಳಿವೆ. ನಾವು ಕಾನೂನು ಅಡಿಯಲ್ಲಿ ಇರುವವರು. ತನಿಖೆಗೆ ಎಲ್ಲ ರೀತಿಯಾಗಿ ಸಹಕಾರ ನೀಡುತ್ತೇನೆ. ನಾನು ನನ್ನ ಪ್ರಜಾಪ್ರಭುತ್ವದಲ್ಲಿದ್ದೇನೆ. ಅವರು ಅವರ ಪ್ರಜಾಪ್ರಭುತ್ವದಲ್ಲಿದ್ದಾರೆ, ಎಲ್ಲರಿಗೂ ಇಷ್ಟ ಆಗಬೇಕು ಅಂತೇನಿಲ್ಲ. ನಾನು ನನ್ನ ಸಿದ್ಧಾಂತಗಳ ಜೊತೆ ಬದುಕುವ ಪ್ರಯತ್ನ ಮಾಡುತ್ತಿದ್ದೇನೆ. ಐದು ಜನ ದ್ವೇಷ ಮಾಡಿದ್ರೆ 500 ಜನ ಪ್ರೀತಿಸುತ್ತಾರೆ. ಇದು ಪ್ರತಿ ವ್ಯಕ್ತಿಯ ವ್ಯವಸ್ಥೆ. ಸಾಮಾಜಿಕ ರಂಗದಲ್ಲಿ ಕೆಲಸ ಮಾಡುವುದರಿಂದ ಸಮಾಜದ ನಿಂದನೆಯನ್ನ ಸಂಧ್ಯಾ ವಂದನೆಯಾಗಿ ಸ್ವೀಕರಿಸುತ್ತೇನೆ ಎಂದು ಪರೋಕ್ಷವಾಗಿ ದೂರು ನೀಡಿದವರಿಗೆ ಚಾಟಿ ಬೀಸಿದರು.
ಇನ್ನು ಹುಲಿ ಚರ್ಮ ವನ್ನು ಗೌರಿಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿಗೆ ನೀಡಿದ್ದ ಅಮರೇಂದ್ರ ಕಿರೀಟಿ ಪ್ರತಿಕ್ರಿಯಿಸಿ, ನನ್ನ ತಂದೆ ಕಾಲದಿಂದ ಮನೆಯಲ್ಲಿ ಹುಲಿ ಚರ್ಮ ಇದೆ. 1975 ರಲ್ಲಿ ಅರಣ್ಯ ಇಲಾಖೆಯಿಂದ ಚರ್ಮ ಬಳಕೆಗೆ ಅನುಮತಿ ಪಡೆದಿದ್ದೇವೆ. ಇದರ ಎಲ್ಲ ದಾಖಲೆ ನಮ್ಮ ಬಳಿ ಇದೆ. ಕೆಲವು ವರ್ಷಗಳ ಹಿಂದೆ ಈ ಹುಲಿ ಚರ್ಮ ವನ್ನು ಗೌರಿಗದ್ದೆ ಆಶ್ರಮದ ಅವಧೂತ ವಿನಯ್ ಗುರುಜೀ ಅವರಿಗೆ ಜ್ಞಾನ ಮಾಡಲು ನೀಡಿದ್ದೆ . ಅವರ ಹುಲಿ ಚರ್ಮದ ಮೇಲೆ ಕುಳಿತ ವಿಡಿಯೋ ವೈರಲ್ ಆದ ಬಳಿಕ ಹುಲಿ ಚರ್ಮವನ್ನು ಗುರೂಜಿ ನನಗೆ ವಾಪಸ್ ಕೊಟ್ಟಿದ್ದಾರೆ. ಬಳಿಕ ಅದನ್ನು ನಾನು ಕೆಲವು ತಿಂಗಳ ಹಿಂದೆ ವಾಪಸ್ ಅರಣ್ಯ ಇಲಾಖೆಗೆ ನೀಡಿರುವೆ. ಈಗ ಮತ್ತೆ ಈ ಹುಲಿ ಚರ್ಮ ವಿವಾದ ಶುರುವಾಗಿದೆ ಎಂದು ಹೇಳಿದರು.
ನಾನೇ ನನ್ನ ಸ್ವಂತ ಇಚ್ಚೆಯಿಂದ ಹುಲಿ ಚರ್ಮ ಗುರೂಜೀ ಅವರಿಗೆ ನೀಡಿದ್ದೆ. ಈ ಹುಲಿ ಚರ್ಮ ನನ್ನ ಬಳಿ ಕಾನೂನು ಬದ್ಧವಾಗಿ ಇದೆ. ಅನಗತ್ಯವಾಗಿ ಈ ಹುಲಿ ಚರ್ಮದ ಚರ್ಚೆ ನಡೆಯುತ್ತಿದೆ. ಮತ್ತೆ ವಿನಯ್ ಗುರೂಜೀ ಕುರಿತು ವಿವಾದ ಶುರುವಾಗಿದೆ. ಇದರಿಂದ ನನಗೆ ಬೇಸರ ಆಗಿದೆ . ಕೂಡಲೇ ಈ ಹುಲಿ ಚರ್ಮದ ಚರ್ಚೆಯನ್ನು ಇಲ್ಲಿಗೆ ನಿಲ್ಲಿಸಬೇಕು ಎಂದು ಮನವಿ ಮಾಡಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:21 pm, Wed, 25 October 23