ವರದಕ್ಷಿಣೆ ಕಿರುಕುಳಕ್ಕೆ ಯುವತಿ ಬಲಿ?: ಮೃತಳ ಪೋಷಕರಿಂದ ಗಂಭೀರ ಆರೋಪ

Updated By: ಪ್ರಸನ್ನ ಹೆಗಡೆ

Updated on: Nov 02, 2025 | 7:47 AM

ಚಿಕ್ಕಮಗಳೂರು ಮೂಲದ ಗೃಹಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಪತಿ ಶರತ್‌ ಹಾಗೂ ಕುಟುಂಬಸ್ಥರ ವಿರುದ್ಧ ವಿಷಪ್ರಾಶನ ಮತ್ತು ವರದಕ್ಷಿಣೆ ಕಿರುಕುಳದ ಗಂಭೀರ ಆರೋಪ ಕೇಳಿಬಂದಿದೆ. ಘಟನೆ ಸಂಬಂಧ ಪತಿ ಶರತ್‌ ಮತ್ತು ಮಾವ ಸುಧಾಕರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಕುರಿತು ಎನ್.ಆರ್. ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಿವಮೊಗ್ಗ, ಅಕ್ಟೋಬರ್​ 31: ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಎನ್.ಆರ್.ಪುರ ಮೂಲದ ಗೃಹಿಣಿ ಮೃತಪಟ್ಟಿದ್ದು, ಪತಿ ಮನೆಯವರೇ ಕೀಟನಾಶಕ ಕೊಟ್ಟು ಮಗಳನ್ನ ಕೊಲೆ (Murder) ಮಾಡಿದ್ದಾರೆ ಎಂದು ಮಹಿಳೆಯ ಪೋಷಕರು ಆರೋಪಿಸಿದ್ದಾರೆ. ಚಿಕಿತ್ಸೆ ಫಲಿಸದೆ ಗೃಹಿಣಿ ಪೂಜಾ(30) ಇಹಲೋಕ ತ್ಯಜಿಸಿದ್ದು, ಇವರಿಗೆ ಎನ್.ಆರ್.ಪುರ ತಾಲೂಕಿನ ಮಾವಿನಕೆರೆ ಶೆಟ್ಟಿಕೊಪ್ಪದ ನಿವಾಸಿ ಶರತ್​ ಎಂಬವರ ಜೊತೆ 3 ವರ್ಷದ ಹಿಂದೆ ವಿವಾಹವಾಗಿತ್ತು. ಶರತ್​-ಪೂಜಾ ದಂಪತಿಗೆ ಎರಡು ವರ್ಷದ ಗಂಡು ಮಗುವೂ ಇದ್ದು, ವರದಕ್ಷಿಣಿಗಾಗಿ ಪೂಜಾ ಮೇಲೆ ಹಲ್ಲೆ ನಡೆಸಲಾಗುತ್ತಿತ್ತು. ಪತಿ ಶರತ್, ಮಾವ ಸುಧಾಕರ್​​, ಅತ್ತೆ ರಾಧಾ ಹಾಗೂ ಶರತ್​​​​ ಸಹೋದರಿ ಶಬರಿ ಹಿಂಸೆ ನೀಡುತ್ತಿದ್ದ ಬಗ್ಗೆ ಮಗಳು ಹೇಳಿಕೊಂಡಿದ್ದಳು ಎಂದು ಪೋಷಕರು ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ಪೂಜಾ ಪತಿ ಶರತ್ ಹಾಗೂ ಮಾವ ಸುಧಾಕರ್​​ರನ್ನ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.

 

 

 

Published on: Oct 31, 2025 01:11 PM