22 ವರ್ಷಗಳ ನಂತರ ತಾಯಿ ಮಡಿಲು ಸೇರಿದ ಮಗಳು; ಮೂಡಿಗೆರೆಯಲ್ಲಿ ನಡೆದ ಮನಕಲಕುವ ದೃಶ್ಯ ನೋಡಿ

ಅಂಜಲಿ 9ನೇ ವಯಸ್ಸಿನಲ್ಲಿ ಕಾಣೆಯಾಗಿದ್ದರು. ಆದರೆ ತಂದೆ- ತಾಯಿ ಮಗಳು ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರಲಿಲ್ಲ ಎಂದು ತಿಳಿದುಬಂದಿದೆ. ನಾಲ್ಕು ವರ್ಷಗಳ ಹಿಂದೆ ಅಂಜಲಿ ತಂದೆ ಮೃತಪಟ್ಟಿದ್ದು, ಆಕೆಯ ತಾಯಿ ಮಾಹಿತಿ ನೀಡಿದ್ದಾರೆ.

22 ವರ್ಷಗಳ ನಂತರ ತಾಯಿ ಮಡಿಲು ಸೇರಿದ ಮಗಳು; ಮೂಡಿಗೆರೆಯಲ್ಲಿ ನಡೆದ ಮನಕಲಕುವ ದೃಶ್ಯ ನೋಡಿ
ತಾಯಿ, ಮಗಳು ಪರಸ್ಪರ ತಬ್ಬಿ ಕಣ್ಣೀರಿಟ್ಟಿದ್ದಾರೆ
Edited By:

Updated on: Jan 04, 2022 | 4:39 PM

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುದ್ರೆಮನೆ ಗ್ರಾಮದಲ್ಲೊಂದು ಮನಕಲಕುವ ಘಟನೆ ನಡೆದಿದೆ. 22 ವರ್ಷಗಳ ನಂತರ ಮಗಳು ತಾಯಿಯ ಮಡಿಲು ಸೇರಿದ್ದಾಳೆ. 9ನೇ ವಯಸ್ಸಲ್ಲಿ ನಾಪತ್ತೆಯಾಗಿದ್ದ ಮಗಳು ಅಂಜಲಿ, ಕೇರಳದಲ್ಲಿ ಮನೆ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು. ಕೇರಳದ ನೆಲ್ಲಮಣಿಯ ಸಾಜಿ ಜತೆ ವಿವಾಹವಾಗಿದ್ದಾರೆ. ಕಳೆದ 3 ವರ್ಷದಿಂದ ಅಂಜಲಿ ತಾಯಿಗಾಗಿ ಹುಡುಕಾಟ ನಡೆಸಿದ್ದಾರೆ. ಮೂಡಿಗೆರೆ ಸುತ್ತಮುತ್ತ ತಾಯಿಗಾಗಿ ಹುಡುಕಾಡಿದ್ದಾರೆ. ಕೊನೆಗೂ ಮೂಡಿಗೆರೆಯ ಮುದ್ರೆಮನೆಯಲ್ಲಿ ತಾಯಿ ಪತ್ತೆಯಾಗಿದ್ದು,ಭೇಟಿಯಾಗುತ್ತಿದ್ದಂತೆ ತಾಯಿ, ಮಗಳು ಪರಸ್ಪರ ತಬ್ಬಿ ಕಣ್ಣೀರಿಟ್ಟಿದ್ದಾರೆ.

ಅಂಜಲಿ 9ನೇ ವಯಸ್ಸಿನಲ್ಲಿ ಕಾಣೆಯಾಗಿದ್ದರು. ಆದರೆ ತಂದೆ- ತಾಯಿ ಮಗಳು ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರಲಿಲ್ಲ ಎಂದು ತಿಳಿದುಬಂದಿದೆ. ನಾಲ್ಕು ವರ್ಷಗಳ ಹಿಂದೆ ಅಂಜಲಿ ತಂದೆ ಮೃತಪಟ್ಟಿದ್ದು, ಆಕೆಯ ತಾಯಿ ಮಾಹಿತಿ ನೀಡಿದ್ದಾರೆ. ತಾಯಿ ಕಣ್ಣಿಗೆ ಬೀಳುತ್ತಿದ್ದಂತೆ ಅಂಜಲಿ ಓಡಿ ಹೋಗಿ ಅಪ್ಪಿಕೊಂಡಿದ್ದಾರೆ. ಹೆತ್ತವ್ವನನ್ನು ಕಂಡ ಖುಷಿಯಲ್ಲಿ ಮಗಳು ಮತ್ತು ಕಾಣೆಯಾಗಿದ್ದ ಮಗಳನ್ನ ಕಂಡ ತಾಯಿ ಒಬ್ಬೊರನ್ನು ಗಟ್ಟಿಯಾಗಿ ತಬ್ಬಿ ಕಣ್ಣೀರಿಟ್ಟಿದ್ದಾರೆ. ತಾಯಿ ಮಗಳ ಈ ದೃಶ್ಯ ಮನಕಲಕುವಂತಿದೆ.

ಇದನ್ನೂ ಓದಿ

Blackberry Shutdown: ಇಂದಿನಿಂದ ಕಾರ್ಯನಿರ್ವಹಿಸಲ್ಲ ಈ ಫೋನ್: ಕರೆ, ಎಸ್​ಎಮ್​ಎಸ್​ ಎಲ್ಲವೂ ಬಂದ್

ಒಮಿಕ್ರಾನ್ ಸೋಂಕು​ ಪತ್ತೆಗಾಗಿ ಅಭಿವೃದ್ಧಿ ಪಡಿಸಲಾದ ದೇಶದ ಮೊದಲ ಆರ್​ಟಿ-ಪಿಸಿಆರ್​ ಕಿಟ್​ ಒಮಿಶ್ಯೂರ್​ಗೆ ಐಸಿಎಂಆರ್​ ಅನುಮೋದನೆ

Published On - 2:46 pm, Tue, 4 January 22