AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಮಿಕ್ರಾನ್ ಸೋಂಕು​ ಪತ್ತೆಗಾಗಿ ಅಭಿವೃದ್ಧಿ ಪಡಿಸಲಾದ ದೇಶದ ಮೊದಲ ಆರ್​ಟಿ-ಪಿಸಿಆರ್​ ಕಿಟ್​ ಒಮಿಶ್ಯೂರ್​ಗೆ ಐಸಿಎಂಆರ್​ ಅನುಮೋದನೆ

ದೇಶದಲ್ಲಿ ಈಗ ಮತ್ತೆ ಕೊರೊನಾ ಕೇಸ್​ಗಳು, ಒಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿವೆ. ಕೊವಿಡ್​ 19 ಪ್ರಕರಣಗಳ ಪತ್ತೆಗಾಗಿ ಸೂಕ್ತ ತಪಾಸಣೆ ವ್ಯವಸ್ಥೆ ದೇಶಾದ್ಯಂತ ಇದ್ದರೂ, ಈ ಒಮಿಕ್ರಾನ್​ ಸೋಂಕಿನ ಪತ್ತೆ ಸ್ವಲ್ಪ ವಿಳಂಬವಾಗುತ್ತಿದೆ.

ಒಮಿಕ್ರಾನ್ ಸೋಂಕು​ ಪತ್ತೆಗಾಗಿ ಅಭಿವೃದ್ಧಿ ಪಡಿಸಲಾದ ದೇಶದ ಮೊದಲ ಆರ್​ಟಿ-ಪಿಸಿಆರ್​ ಕಿಟ್​ ಒಮಿಶ್ಯೂರ್​ಗೆ ಐಸಿಎಂಆರ್​ ಅನುಮೋದನೆ
ಸಾಂಕೇತಿಕ ಚಿತ್ರ
TV9 Web
| Updated By: Lakshmi Hegde|

Updated on:Jan 04, 2022 | 1:38 PM

Share

ಮುಂಬೈನ ಟಾಟಾ ಮೆಡಿಕಲ್ ಮತ್ತು ಡಯಾಗ್ನೋಸ್ಟಿಕ್ಸ್​ ಸಂಸ್ಥೆ (Tata Medical & Diagnostics, Mumbai) ಅಭಿವೃದ್ಧಿ ಪಡಿಸಿದ ಒಮಿಕ್ರಾನ್​ ತಪಾಸಣಾ ಕಿಟ್​​ ಒಮಿಶ್ಯೂರ್​ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಅನುಮೋದನೆ ನೀಡಿದೆ. ಇಷ್ಟು ದಿನ ನಮ್ಮ ದೇಶದಲ್ಲಿ ಒಮಿಕ್ರಾನ್​ ಸೋಂಕು (Omicron) ಪತ್ತೆ ಹಚ್ಚಲು, ಯುಎಸ್​ ಮೂಲದ ವೈಜ್ಞಾನಿಕ ಉಪಕರಣ ಕಂಪನಿ ಥರ್ಮೋ ಫಿಶರ್ ಅಭಿವೃದ್ಧಿಪಡಿಸಿದ ಕಿಟ್​​ನ್ನು ಬಳಸಲಾಗುತ್ತಿತ್ತು. ಈ ಕಿಟ್​​ ಎಸ್​ ಜೀನ್​ ಟಾರ್ಗೆಟ್ ಫೇಲ್ಯೂರ್​ ತಂತ್ರದ ಮೂಲಕ ಒಮಿಕ್ರಾನ್​ನ್ನು ಪತ್ತೆ ಹಚ್ಚುತ್ತಿದೆ.

ಭಾರತದ ಖ್ಯಾತ ಉದ್ಯಮ ಸಂಸ್ಥೆ ಟಾಟಾದ ಮೆಡಿಕಲ್ ಮತ್ತು ಡಯಾಗ್ನೋಸ್ಟಿಕ್ಸ್​ ಅಭಿವೃದ್ಧಿ ಪಡಿಸಿರುವ ಈ ಒಮಿಕ್ರಾನ್ ಆರ್​ಟಿ-ಪಿಸಿಆರ್ ತಪಾಸಣಾ ಕಿಟ್​ಗೆ ಡಿಸೆಂಬರ್​ 31ರಂದು ಐಸಿಎಂಆರ್​ ಅನುಮೋದನೆ ಕೊಟ್ಟಿದೆ. ಕಿಟ್​ ತಯಾರಕರು ನೀಡಿದ ಮಾರ್ಗದರ್ಶನದಂತೆ ಈ ಕಿಟ್ ಬಳಸಿ ಅದನ್ನು ಟೆಸ್ಟ್ ಮಾಡಿದ್ದೇವೆ. ಉಳಿದ ಬ್ಯಾಚ್​ ಟು ಬ್ಯಾಚ್​ ಸ್ಥಿರತೆಯ ಜವಾಬ್ದಾರಿ ತಯಾರಕ ಕಂಪನಿಯದ್ದೇ ಆಗಿರುತ್ತದೆ ಎಂದು ಐಸಿಎಂಆರ್ ತಿಳಿಸಿದೆ. ಟಾಟಾ ಮೆಡಿಕಲ್ಸ್, ಈ ಕಿಟ್​ ತಯಾರಿಸಿ, ಪರೀಕ್ಷೆಗಾಗಿ ಐಸಿಎಂಆರ್​ಗೆ ಕಳಿಸಿತ್ತು. ಸದ್ಯ ಈ ಕಿಟ್​ನ್ನು ಭಾರತದಲ್ಲಿ ಮಾತ್ರ ಬಳಕೆ ಮಾಡಲಾಗುತ್ತದೆ. ಹಾಗೇ, ಇದು ಭಾರತದಲ್ಲಿ ಅಭಿವೃದ್ಧಿಯಾಗಿ, ಅನುಮೋದನೆ ಪಡೆದ ಮೊದಲ ಒಮಿಕ್ರಾನ್​ ಟೆಸ್ಟ್​ ಕಿಟ್ ಆಗಿದೆ.

ದೇಶದಲ್ಲಿ ಈಗ ಮತ್ತೆ ಕೊರೊನಾ ಕೇಸ್​ಗಳು, ಒಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿವೆ. ಕೊವಿಡ್​ 19 ಪ್ರಕರಣಗಳ ಪತ್ತೆಗಾಗಿ ಸೂಕ್ತ ತಪಾಸಣೆ ವ್ಯವಸ್ಥೆ ದೇಶಾದ್ಯಂತ ಇದ್ದರೂ, ಈ ಒಮಿಕ್ರಾನ್​ ಸೋಂಕಿನ ಪತ್ತೆ ಸ್ವಲ್ಪ ವಿಳಂಬವಾಗುತ್ತಿದೆ. ಹೀಗಿರುವಾಗ ಒಮಿಶ್ಯೂರ್ ಕಿಟ್​ಗೆ ಅನುಮೋದನೆ ಸಿಕ್ಕಿದ್ದು ಸಮಾಧಾನಕರ ಸಂಗತಿಯಾಗಿದೆ. ಆದರೆ ಸಾಮಾನ್ಯ ಕೊವಿಡ್ 19 ತಪಾಸಣಾ ಕಿಟ್​ಗೆ ಹೋಲಿಸಿದರೆ ಈ ಒಮಿಕ್ರಾನ್​ ಸೋಂಕಿನ ತಪಾಸಣಾ ಕಿಟ್​ ದುಬಾರಿ ಎಂದು ಹೇಳಲಾಗಿದೆ. ಭಾರತಕ್ಕೆ ಒಮಿಕ್ರಾನ್ ಕಾಲಿಟ್ಟಾಗಿನಿಂದಲೂ ಅದರ ತಪಾಸಣೆ ಕಿಟ್​ ತಯಾರಿಕೆಯ ಕಾರ್ಯಗಳೂ ನಡೆಯುತ್ತಿವೆ. ಈ ನಿಟ್ಟಿನಲ್ಲಿ ಹಲವು ಔಷಧ ಕಂಪನಿಗಳು ಪ್ರಯತ್ನ ಮಾಡುತ್ತಲೇ ಇದ್ದವು. ಈ ಮಧ್ಯೆ ನೀವು ಅಭಿವೃದ್ಧಿ ಪಡಿಸಿದ ಒಮಿಕ್ರಾನ್​ ಪತ್ತೆ ಕಿಟ್​ಗಳನ್ನು ವಾಣಿಜ್ಯೀಕರಿಸಲು ಆಸಕ್ತಿ ಇರುವವರು ಅದನ್ನು ನಮ್ಮೆದುರು ಸಲ್ಲಿಸಿ ಎಂದು ಡಿಸೆಂಬರ್​ 17ರಂದು ಐಸಿಎಂಆರ್ ಕೂಡ ಹೇಳಿತ್ತು. ದೆಹಲಿ ಐಐಟಿ ಕೂಡ ಒಮಿಕ್ರಾನ್​ ಸೋಂಕು ಪತ್ತೆಗೆ ನಿರ್ದಿಷ್ಟ ಆರ್​ಟಿ-ಪಿಸಿಆರ್​ ವಿಧಾನವನ್ನು ಅಭಿವೃದ್ಧಿ ಪಡಿಸಿದೆ. ಆದರೆ ಅದಕ್ಕೆ ಅನುಮೋದನೆ ಸಿಕ್ಕ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಇದನ್ನೂ ಓದಿ: Video: ಉತ್ತರ ಪ್ರದೇಶದ ಕಾಂಗ್ರೆಸ್ ಮ್ಯಾರಥಾನ್‌ನಲ್ಲಿ ಕಾಲ್ತುಳಿತದಂತಹ ದೃಶ್ಯ; ಮಾಸ್ಕ್ ಇಲ್ಲದೆ ರಸ್ತೆಗಿಳಿದರು ನೂರಾರು ಮಹಿಳೆಯರು

Published On - 1:38 pm, Tue, 4 January 22

ಹುಡಾ ಅಧ್ಯಕ್ಷ ಸ್ಥಾನಕ್ಕೆ ಬೀದಿಗಿಳಿದ ಮುಸ್ಲಿಂ ಸಮುದಾಯ
ಹುಡಾ ಅಧ್ಯಕ್ಷ ಸ್ಥಾನಕ್ಕೆ ಬೀದಿಗಿಳಿದ ಮುಸ್ಲಿಂ ಸಮುದಾಯ
ಬಿಗ್ ಬಾಸ್​ಗೆ ಹೋಗೋಕೆ ಡಿ ಫ್ಯಾನ್ಸ್​ನ ಎದುರು ಹಾಕ್ಕೊಂಡ್ರಾ ಸೋನು ಶೆಟ್ಟಿ?
ಬಿಗ್ ಬಾಸ್​ಗೆ ಹೋಗೋಕೆ ಡಿ ಫ್ಯಾನ್ಸ್​ನ ಎದುರು ಹಾಕ್ಕೊಂಡ್ರಾ ಸೋನು ಶೆಟ್ಟಿ?
ಬಾಲ್ಯದಲ್ಲೇ ನಿಸ್ಸಾರ್ ಮನೆಯಲ್ಲಿ ಲಿಂಗ ತಂದಿಟ್ಟು ಪೂಜೆ ಮಾಡುತ್ತಿದ್ದನಂತೆ
ಬಾಲ್ಯದಲ್ಲೇ ನಿಸ್ಸಾರ್ ಮನೆಯಲ್ಲಿ ಲಿಂಗ ತಂದಿಟ್ಟು ಪೂಜೆ ಮಾಡುತ್ತಿದ್ದನಂತೆ
ಮೈಸೂರಿಗೆ ಹೊರಟಿದ್ದ ರೈಲಿನಿಂದ ಬೇರ್ಪಟ್ಟ 6 ಬೋಗಿಗಳು
ಮೈಸೂರಿಗೆ ಹೊರಟಿದ್ದ ರೈಲಿನಿಂದ ಬೇರ್ಪಟ್ಟ 6 ಬೋಗಿಗಳು
ಕೃತಜ್ಞ ಮಗ ಸರ್ಕಾರೀ ನೌಕರ, ಕೆಎಸ್​ಅರ್​ಟಿಸಿಯಲ್ಲಿ ಚಾಲಕ!
ಕೃತಜ್ಞ ಮಗ ಸರ್ಕಾರೀ ನೌಕರ, ಕೆಎಸ್​ಅರ್​ಟಿಸಿಯಲ್ಲಿ ಚಾಲಕ!
ವಾರಾಣಸಿಯಲ್ಲಿ ಪ್ರವಾಹ; ಮನೆ, ಅಂಗಡಿ, ಆಸ್ಪತ್ರೆಗೆ ನುಗ್ಗಿದ ಗಂಗಾ ನದಿ ನೀರು
ವಾರಾಣಸಿಯಲ್ಲಿ ಪ್ರವಾಹ; ಮನೆ, ಅಂಗಡಿ, ಆಸ್ಪತ್ರೆಗೆ ನುಗ್ಗಿದ ಗಂಗಾ ನದಿ ನೀರು
ದರ್ಶನ್ ಅಭಿಮಾನಿಗಳನ್ನು ಕೊಚ್ಚೆಗೆ ಹೋಲಿಸಿದ ಮಾಡೆಲ್ ಸೋನು
ದರ್ಶನ್ ಅಭಿಮಾನಿಗಳನ್ನು ಕೊಚ್ಚೆಗೆ ಹೋಲಿಸಿದ ಮಾಡೆಲ್ ಸೋನು
ವಿಕ್ಟೋರಿಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಿಸಿನೀರಲ್ಲ ತಣ್ಣೀರೂ ಸಿಗಲ್ಲ!
ವಿಕ್ಟೋರಿಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಿಸಿನೀರಲ್ಲ ತಣ್ಣೀರೂ ಸಿಗಲ್ಲ!
ಕೆ.ಆರ್ ಪುರ ಮೇಟ್ರೋ ಸ್ಟೇಷನ್ ಬಳಿ ಕೆಲಕಾಲ ಆತಂಕ ಸೃಷ್ಟಿದ ಸೂಟ್​​​ಕೇಸ್​
ಕೆ.ಆರ್ ಪುರ ಮೇಟ್ರೋ ಸ್ಟೇಷನ್ ಬಳಿ ಕೆಲಕಾಲ ಆತಂಕ ಸೃಷ್ಟಿದ ಸೂಟ್​​​ಕೇಸ್​
ಸೆಲ್ಫಿ, ಆಟೋಗ್ರಾಫ್​ಗಾಗಿ ಸಿರಾಜ್ ಹಿಂದೆ ಬಿದ್ದ ಫ್ಯಾನ್ಸ್
ಸೆಲ್ಫಿ, ಆಟೋಗ್ರಾಫ್​ಗಾಗಿ ಸಿರಾಜ್ ಹಿಂದೆ ಬಿದ್ದ ಫ್ಯಾನ್ಸ್