ಚಿಕ್ಕಮಗಳೂರಿಗೆ ಎಂಟ್ರಿಕೊಟ್ಟ 30 ಕಾಡಾನೆಗಳ ಹಿಂಡು; ಸ್ಥಳಕ್ಕೆ ಅರಣ್ಯಾಧಿಕಾರಿಗಳು ದೌಡು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 27, 2024 | 8:27 PM

ಚಿಕ್ಕಮಗಳೂರು ತಾಲೂಕಿನ ಕೆಆರ್ ಪೇಟೆ ಗ್ರಾಮದಲ್ಲಿ ಬರೊಬ್ಬರಿ 30 ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಸ್ಥಳಕ್ಕೆ ಚಿಕ್ಕಮಗಳೂರು(Chikmagalur) ಅರಣ್ಯ ಇಲಾಖೆಯ ಸಿಬ್ಬಂದಿಗಳು ದೌಡಾಯಿಸಿದ್ದಾರೆ. ಇದು ಜನ ವಸತಿ ಪ್ರದೇಶದಿಂದ ಕೂಗಳತೆ ದೂರದಲ್ಲಿರುವುದರಿಂದ ಜನರು ಭಯಭೀತರಾಗಿದ್ದಾರೆ.

ಚಿಕ್ಕಮಗಳೂರಿಗೆ ಎಂಟ್ರಿಕೊಟ್ಟ 30 ಕಾಡಾನೆಗಳ ಹಿಂಡು; ಸ್ಥಳಕ್ಕೆ ಅರಣ್ಯಾಧಿಕಾರಿಗಳು ದೌಡು
ಚಿಕ್ಕಮಗಳೂರಿಗೆ ಆನೆಗಳ ಎಂಟ್ರಿ
Follow us on

ಚಿಕ್ಕಮಗಳೂರು, ಜ.27: ಕಾಫಿನಾಡಿಗೆ ಬೀಟಮ್ಮ ಅಂಡ್ ಗ್ಯಾಂಗ್ ಎಂಟ್ರಿ ಕೊಟ್ಟಿದೆ. ಚಿಕ್ಕಮಗಳೂರು ತಾಲೂಕಿನ ಕೆಆರ್ ಪೇಟೆ ಗ್ರಾಮದಲ್ಲಿ ಬರೊಬ್ಬರಿ 30 ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಸ್ಥಳಕ್ಕೆ ಚಿಕ್ಕಮಗಳೂರು(Chikmagalur) ಅರಣ್ಯ ಇಲಾಖೆಯ ಸಿಬ್ಬಂದಿಗಳು ದೌಡಾಯಿಸಿದ್ದಾರೆ. ಇದು ಜನ ವಸತಿ ಪ್ರದೇಶದಿಂದ ಕೂಗಳತೆ ದೂರದಲ್ಲಿರುವುದರಿಂದ ಜನರು ಭಯಭೀತರಾಗಿದ್ದಾರೆ. ಇನ್ನು ಇದರ ಜೊತೆಯೇ  ಹಂತಕ ಭೀಮ ಆನೆ ಸೇರಿಕೊಂಡಿದೆ. ಈಗಾಗಲೇ ಬೇಲೂರಿನಲ್ಲಿ ದಾಂಧಲೆ ಎಬ್ಬಿಸಿದ್ದ ಬೀಟಮ್ಮ ಅಂಡ್ ಗ್ಯಾಂಗ್. ಬೇಲೂರು ಮಾರ್ಗವಾಗಿಯೇ KR ಪೇಟೆ ಗ್ರಾಮಕ್ಕೆ ಆಗಮಿಸಿದೆ.

ಗಜೇಂದ್ರಗಡ ಗುಡ್ಡದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ

ಗದಗ: ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಕುಂಟೋಜಿ ಗುಡ್ಡದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ. ಬೆಣಚಮಟ್ಟಿ ಕ್ರಾಸ್ ಸಮೀಪದಲ್ಲಿ ಇರುವ ವಸ್ತಿ ಮನೆಗಳ ಸುತ್ತಲೂ ಚಿರತೆ ಕುರುಹುಗಳು ಪತ್ತೆಯಾಗಿದ್ದು, ಚಿಕ್ಕ ಮಕ್ಕಳು, ಮಹಿಳೆಯರು ಸೇರಿದಂತೆ ಅನೇಕ ಕುಟುಂಬಗಳು ಇಲ್ಲಿಯೇ ವಾಸವಾಗಿವೆ. ಇದೀಗ ಚಿರತೆ ಕಂಡು ಅಡವಿ ವಸ್ತಿ ಜನರು ಕಂಗಾಲಾಗಿದ್ದಾರೆ. ಇನ್ನು ಇವರುಗಳ ಜೊತೆಯೇ ಕುರಿಗಳ ಹಿಂಡು, ದನದ ಹಿಂಡು ಹಾಗೂ ಟಗರಿನ ಸಾಕಾಣಿಕೆ ಮತ್ತು ನಾಯಿಗಳು ಇವೆ.

ಇದನ್ನೂ ಓದಿ:‘ಡಿಸಿಎಂ ಡಿಕೆ ಶಿವಕುಮಾರ್ ಕ್ಷೇತ್ರದಲ್ಲಿ ನಿಲ್ಲದ ಕಾಡಾನೆ ಕಾಟ: ಗೇರಹಳ್ಳಿಯಲ್ಲಿ ಆನೆ ದಾಳಿಗೆ ರೈತ ಬಲಿ

ಇದೀಗ ಚಿರತೆ ಶಬ್ದಕ್ಕೆ ಕುರಿಗಳು, ನಾಯಿಗಳು ಹಾಗೂ ದನ-ಕರುಗಳು ಕಿರುಚಲು ಆರಂಭಿಸಿವೆ. ಆಗ ಮನೆಯಿಂದ ಹೊರಗೆ ಬಂದು ನೋಡಿದಾಗ ಚಿರತೆ ಕಂಡಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಇಲ್ಲಿನ ವಾಸಿಗಳು ಮನೆ ಬಿಟ್ಟು ಹೊರಗಡೆ ಬರಲು ಭಯ ಪಡುವಂತಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಅನಾಹುತ ಸಂಭವಿಸುವ ಮೊದಲೇ ಎಚ್ಚೆತ್ತಕೊಳ್ಳಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ