ಡಿಸಿಎಂ ಡಿಕೆ ಶಿವಕುಮಾರ್ ಕ್ಷೇತ್ರದಲ್ಲಿ ನಿಲ್ಲದ ಕಾಡಾನೆ ಕಾಟ! ಕಾಡಾನೆ ತುಳಿತಕ್ಕೆ ಮತ್ತೊಬ್ಬ ರೈತ ಬಲಿ

ಆತ ದೇಶಕ್ಕೆ ಅನ್ನ ಕೊಡುವ ರೈತ, ತಾನು ಬೆಳೆದ ಬೆಳೆ ಎಲ್ಲಿ ನಾಶವಗುತ್ತದೋ ಎಂಬ ಆತಂಕದಲ್ಲಿ ಕಣ ಕಾಯಲು ಮಲಗಿದ್ದ. ಆದರೆ, ಬೆಳಗಾಗುವುದರೊಳಗೆ ಕಾಡಾನೆ ತುಳಿತಕ್ಕೆ ಹೆಣವಾಗಿಬಿಟ್ಟಿದ್ದಾನೆ.

ಡಿಸಿಎಂ ಡಿಕೆ ಶಿವಕುಮಾರ್ ಕ್ಷೇತ್ರದಲ್ಲಿ ನಿಲ್ಲದ ಕಾಡಾನೆ ಕಾಟ! ಕಾಡಾನೆ ತುಳಿತಕ್ಕೆ ಮತ್ತೊಬ್ಬ ರೈತ ಬಲಿ
ಮೃತ ರೈತ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 25, 2024 | 2:56 PM

ರಾಮನಗರ, ಜ.25: ಜಿಲ್ಲೆಯ ಹೊರವಲಯ ಹಾಗೂ ಕನಕಪುರ(Kanakapura)ತಾಲೂಕು, ಈಗ ರೈತರಿಗೆ ಡೇಂಜರ್ ಸ್ಪಾಟ್ ಆಗಿ ಪರಣಿಮಿಸಿದೆ. ಕೇವಲ ಮೂರು ತಿಂಗಳ ಅಂತರದಲ್ಲಿ ಎಂಟಕ್ಕೂ ಹೆಚ್ಚು ಬಾರಿ ಕಾಡಾನೆ(wild elephant), ರೈತರ ಮೇಲೆ ಅಟ್ಯಾಕ್ ಮಾಡಿದೆ. ಈ ಹಿನ್ನಲೆ ಒಬ್ಬ ಮಹಿಳೆ ಸೇರಿದಂತೆ ಮೂರು ಜನ ರೈತರು ತಮ್ಮ ಪ್ರಾಣ ಕಳೆದುಕೊಂಡಿದ್ದು, ಇನ್ನೊಬ್ಬ ಕಾರ್ಮಿಕ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾನೆ. ಇನ್ನು ತಾನು ಬೆಳೆದ ರಾಗಿ ಬೆಳೆ ಕಣವನ್ನು ಉಳಿಸಿಕೊಳ್ಳಲು ರಾತ್ರಿ ಕಣದ ಬಳಿ ಮಲಗಿದ್ದ ಗೇರೆಹಳ್ಳಿಯ ಪುಟ್ನಂಜ‌ ಎಂಬ ರೈತ ಕೂಡ ಕಾಡಾನೆ ದಾಳಿಗೆ ತುತ್ತಾಗಿ ಬೆಳಗಾಗುವುದರೊಳಗೆ ಹೆಣವಾಗಿ ಪತ್ತೆಯಾಗಿದ್ದಾನೆ.

ಜಿಲ್ಲೆಯ ಕನಕಪುರ ತಾಲೂಕಿನ ಗೇರಹಳ್ಳಿಯ ರೈತ ಅರವತ್ತೈದು ವರ್ಷದ ಪುಟ್ನಂಜ, ತನ್ನ ಹೊಲದಲ್ಲಿ ರಾಗಿ ಬೆಳೆದಿದ್ದ. ಬರಗಾಲದ ನಡುವೆಯೂ ಅಷ್ಟೋ ಇಷ್ಟೋ ಬೆಳೆ ಆದರೂ ಬರಲಿ ಎಂದು ಕಷ್ಟಪಟ್ಟು ಒಂಚೂರು ಇಳುವರಿ ತೆಗೆದಿದ್ದ. ಈ ಹಿನ್ನಲೆ ರಾಗಿ ಕಣವನ್ನು ಗುಂಪು ಮಾಡಿ ಕಾವಲು ಕಾಯಲು ಹೊಲಕ್ಕೆ ತೆರಳಿದ್ದ. ರಾತ್ರಿ ಚಳಿ ಇರುವ ಹಿನ್ನೆಲೆ ಪ್ಲಾಸ್ಟಿಕ್​ನ್ನು ಹೊದ್ದುಕೊಂಡು ಮಲಗಿದ್ದ. ಬೆಳಗಿನ‌ ಜಾವ ಆಹಾರ ಹುಡುಕಿಕೊಂಡು ಬಂದ ಕಾಡಾನೆ, ಕಣದ ಬಳಿ ಮಲಗಿದ್ದ ಪುಟ್ನಂಜನನ್ನು ಹೊಸಕಿ ಹಾಕಿದೆ.

ಇದನ್ನೂ ಓದಿ:ಹಾಸನ: ಗ್ರಾಮೀಣ ಭಾಗದ ಜನರಿಗೆ ಉಪಟಳ ನೀಡುತ್ತಿದ್ದ ಕಾಡಾನೆ ಸೆರೆ: 3ನೇ ದಿನದ ಕಾರ್ಯಾಚರಣೆ ಯಶಸ್ವಿ

ಕಳೆದ ಹಲವು ದಿನಗಳಿಂದ ಮೂವತ್ತಕ್ಕು ಹೆಚ್ಚು ಕಾಡಾನೆಗಳು ತಮಿಳುನಾಡು ಕಡೆಯಿಂದ ಬಂದು ಕನಕಪುರ ಸುತ್ತ-ಮುತ್ತಲಿನ ಗ್ರಾಮಗಳ ಸಮೀಪ ಬೀಡು ಬಿಟ್ಟಿದ್ದು, ಸಂಜೆ ಆದರೂ ಸಾಕು ಜನ ಹೊರ ಬರಲಾರದಂತಹ ಭಯ ಶುರುವಾಗಿದೆ. ಕಳೆದ ಮೂರು ತಿಂಗಳಿನಲ್ಲಿಯೇ ಮೂರು ಜನ ರೈತರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನಲೆ ಆನೆಗಳ ದಾಳಿ ನಿಗ್ರಹಿಸುವ ನಿಟ್ಟಿನಲ್ಲಿ ಟಾಸ್ಕ್ ಫೋರ್ಸ್ ಮಾಡಿದರೂ ಕೂಡ, ಆನೆಗಳ ದಾಳಿ ದಿನ ಕಳೆದಂತೆ ಹೆಚ್ಚಾಗುತ್ತಿದೆ. ಹೀಗಾಗಿ ಶಾಶ್ವತ ಪರಿಹಾರ ಮಾಡಿಕೊಡಲು ರಾಜ್ಯ ಸರ್ಕಾರಕ್ಕೆ ರೈತರು ಆಗ್ರಹ ಮಾಡಿದ್ದಾರೆ. ಅದರಲ್ಲೂ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಂಸದ ಡಿ.ಕೆ ಸುರೇಶ್ ಹೆಚ್ಚು ಆಸಕ್ತಿ ವಹಿಸಿ ರೈತರ ಪ್ರಾಣ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ