ಹಾಸನ: ಗ್ರಾಮೀಣ ಭಾಗದ ಜನರಿಗೆ ಉಪಟಳ ನೀಡುತ್ತಿದ್ದ ಕಾಡಾನೆ ಸೆರೆ: 3ನೇ ದಿನದ ಕಾರ್ಯಾಚರಣೆ ಯಶಸ್ವಿ

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕಣದೂರು ಗ್ರಾಮೀಣ ಭಾಗದಲ್ಲಿ ಉಪಟಳ ನೀಡುತ್ತಿದ್ದ ಕಾಡಾನೆಯನ್ನು ಗುರುವಾರ ಬೇಲೂರು ತಾಲ್ಲೂಕಿನ ಕಣದೂರು ಗ್ರಾಮದಲ್ಲಿ ಸೆರೆ ಹಿಡಿಯಲಾಗಿದೆ. ಕುಮ್ಕಿ ಆನೆಗಳು ಕಾಡಾನೆಯನ್ನು ರಸ್ತೆಗೆ ಎಳೆದು ತಂದಿದ್ದಾವೆ. ಬಳಿಕ ಕ್ರೇನ್ ಮೂಲಕ ಲಾರಿಗೆ ಹತ್ತಿಸಿ ಸ್ಥಳಾಂತರ ಮಾಡಲಾಗಿದೆ. ಆನೆಯ ಅರೋಗ್ಯ ತಪಾಸಣೆ ಬಳಿಕ ಸಾಕಾನೆ ಶಿಬಿರ ಅಥವಾ‌ ಬೇರೆಡೆ ಕಾಡಿಗೆ ಬಿಡುವ ಬಗ್ಗೆ ನಿರ್ಧಾರ ಮಾಡಲಿದ್ದಾರೆ. 

ಹಾಸನ: ಗ್ರಾಮೀಣ ಭಾಗದ ಜನರಿಗೆ ಉಪಟಳ ನೀಡುತ್ತಿದ್ದ ಕಾಡಾನೆ ಸೆರೆ: 3ನೇ ದಿನದ ಕಾರ್ಯಾಚರಣೆ ಯಶಸ್ವಿ
ಕಾಡಾನೆ ಸೆರೆ
Follow us
ಮಂಜುನಾಥ ಕೆಬಿ
| Updated By: ಗಂಗಾಧರ​ ಬ. ಸಾಬೋಜಿ

Updated on:Jan 18, 2024 | 3:06 PM

ಹಾಸನ, ಜನವರಿ 18: ಪುಂಡಾನೆ ಸೆರೆ ಕಾರ್ಯಾಚರಣೆ ಮುಂದುವರೆದಿದ್ದು, ಗ್ರಾಮೀಣ ಭಾಗದಲ್ಲಿ ಉಪಟಳ ನೀಡುತ್ತಿದ್ದ ಕಾಡಾನೆ (wild elephant) ಯನ್ನು ಗುರುವಾರ ಜಿಲ್ಲೆಯ ಬೇಲೂರು ತಾಲ್ಲೂಕಿನ ಕಣದೂರು ಗ್ರಾಮದಲ್ಲಿ ಸೆರೆ ಹಿಡಿಯಲಾಗಿದೆ. ಮನೆಯ ಬಳಿ ಬಂದು ಬೈಕ್, ಆಟೋ ಜಖಂಗೊಳಿಸಿ ರೈತರ ಬೆಳೆ ಹಾಳು ಮಾಡಿ ಗಂಡಾನೆ ಉಪಟಳ ನೀಡುತ್ತಿತ್ತು. ಕಾಫಿ ತೊಟದೊಳಗೆ ಎರಡು ಕಾಡಾನೆಗಳು ಜೊತೆಯಾಗಿದ್ದು, ಕಾಡಾನೆಗಳನ್ನು ಬೇರ್ಪಡಿಸಿ ಅರವಳಿಕೆ ನೀಡಲು ವೈದ್ಯರು ಹರಸಾಹಸಪಟ್ಟಿದ್ದಾರೆ.

ನಂತರ ಸುಮಾರು ಹದಿನೆಂಟು ವರ್ಷದ ಕಾಡಾನೆಗೆ ವೈದ್ಯರು ಅರವಳಿಕೆ ಚುಚ್ಚುಮದ್ದು ನೀಡಿದ್ದು, ಕುಮ್ಕಿ ಆನೆಗಳು ಕಾಡಾನೆಯನ್ನು ರಸ್ತೆಗೆ ಎಳೆದು ತಂದಿದ್ದಾರೆ. ಬಳಿಕ ಕ್ರೇನ್ ಮೂಲಕ ಲಾರಿಗೆ ಹತ್ತಿಸಿ ಸ್ಥಳಾಂತರ ಮಾಡಲಾಗಿದೆ. ಆನೆಯ ಅರೋಗ್ಯ ತಪಾಸಣೆ ಬಳಿಕ ಸಾಕಾನೆ ಶಿಬಿರ ಅಥವಾ‌ ಬೇರೆಡೆ ಕಾಡಿಗೆ ಬಿಡುವ ಬಗ್ಗೆ ನಿರ್ಧಾರ ಮಾಡಲಿದ್ದಾರೆ.

ಇದನ್ನೂ ಓದಿ: ಹಾಸನದಲ್ಲಿ ಮತ್ತೊಂದು ಕಾಡಾನೆ ಸೆರೆ, ಮುಂದುವರೆದ ಕಾರ್ಯಾಚರಣೆ

ದಸರಾ ಆನೆ ಅರ್ಜುನ ದುರಂತ ಸಾವಿನ ಬೆನ್ನಲ್ಲೇ ಹಾಸನದಲ್ಲಿ ಕಾಡಾನೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಆದರೆ ಇತ್ತೀಚೆಗೆ ಮತ್ತೆ ಪುಂಡಾನೆ ಸೆರೆ ಕಾರ್ಯಾಚರಣೆ ಶುರುವಾಗಿತ್ತು. ಕ್ಯಾಪ್ಟನ್ ಅಭಿಮನ್ಯು, ಕರ್ನಾಟಕ ಭೀಮ, ಧನಂಜಯ, ಸುಗ್ರೀವ, ಅಶ್ವತ್ಥಾಮ, ಪ್ರಶಾಂತ್, ಹರ್ಷ, ಮಹೇಂದ್ರ ಸೇರಿದಂತೆ 8 ಆನೆಗಳು ಒಂಟಿ ಸಲಗವನ್ನ ಖೆಡ್ಡಾಗೆ ಕೆಡವಲು ಫೀಲ್ಡಿಗಿಳಿದಿವೆ.

ಅದರಂತೆ ಅರಣ್ಯ ಇಲಾಖೆ ಸಿಬ್ಬಂದಿ, ಆಲೂರು ತಾಲೂಕಿನ ಸಾರಾ ಎಸ್ಟೇಟ್‌ನಲ್ಲಿ ಬೀಡು ಬಿಟ್ಟಿತ್ತು. ಇದೇ ಎಸ್ಟೇಟ್‌ನಲ್ಲಿ ಅಡಗಿದ್ದ ಕಾಡಾನೆ, ಅಲೂರು, ಸಕಲೇಶಪುರ ಭಾಗದ ಹತ್ತಾರು ಹಳ್ಳಿಗಳಲ್ಲಿ ಸಖತ್ ಭಯ ಹುಟ್ಟಿಸಿತ್ತು. ಜಮೀನುಗಳಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿತ್ತು. ಎಲ್ಲೆಂದರಲ್ಲಿ ನುಗ್ಗಿ ಪುಂಡಾಟ ಮೆರೆದಿತ್ತು. ಜನ ರಾತ್ರಿ ಹೊತ್ತು ಓಡಾಡುವುದಕ್ಕೆ ಭಯ ಪಡುತ್ತಿದ್ದರು. ಹೀಗಾಗಿ ಮೊದಲು ಸಾರಾ ಎಸ್ಟೇಟ್‌ನಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ಶುರು ಮಾಡಲಾಗಿತ್ತು.

ಇದನ್ನೂ ಓದಿ: ಹಾಸನ: ಕಾಡಾನೆ ಸೆರೆ ಹಿಡಿದ ಅಭಿಮನ್ಯು ನೇತೃತ್ವದ ಸಾಕಾನೆಗಳ ತಂಡ

ಕಾಡಾನೆ ಕಾರ್ಯಾಚರಣೆ ಆರಂಭಿಸಿದ ಕೇವಲ 2 ಗಂಟೆಯಲ್ಲೇ ಪುಂಡಾನೆ ಸೆರೆ ಹಿಡಿಯಲಾಗಿತ್ತು. ಆದರೆ ಈ ಕಾಡಾನೆ ಸೆರೆ ಹಿಡಿಯೋದು ಕೂಡ ಸವಾಲಿನ ಕೆಲಸವಾಗಿತ್ತು. ಯಾಕಂದ್ರೆ, ಸೆರೆ ಸಿಕ್ಕಿ ಪುಂಡಾನೆಗೆ ಜಿದ್ದು ಹೆಚ್ಚಿತ್ತು. ಕೈಗೆ ಸಿಗದೇ ಆಟ ಆಡಿಸ್ತಿತ್ತು. ನಾಲ್ಕೂ ಕಡೆ ಸುತ್ತುವರಿದರೂ ಬಿಡಿಸಿಕೊಳ್ಳೋದಕ್ಕೆ ಯತ್ನಿಸಿತ್ತು. ಈ ವೇಳೆ ವನ್ಯಜೀವಿ ವೈದ್ಯರು, ಅರವಳಿಕೆ ಮದ್ದು ನೀಡ್ತಿದ್ದಂತೆ ಒಂಟಿ ಸಲಗ ಸೈಲೆಂಟ್ ಆಗಿ ಲಾಕ್ ಆಗಿತ್ತು.

30 ವರ್ಷದ ಆನೆಯನ್ನ ಸೆರೆ ಹಿಡಿದು ಮತ್ತಿಗೋಡು ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಕಾಡಾನೆ ಕಾರ್ಯಾಚರಣೆ ನೋಡೋದಕ್ಕೆ ಹತ್ತಾರು ಹಳ್ಳಿಗಳ ಜನ ಸೇರಿದ್ದರು. ಆನೆಗಳ ಫೋಟೋ, ವಿಡಿಯೋ ತೆಗೆದುಕೊಳ್ಳೋದಕ್ಕೆ ಮುಗಿ ಬಿದ್ದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:05 pm, Thu, 18 January 24

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್