
ಚಿಕ್ಕಮಗಳೂರು: ಪಾರ್ಕ್‌ನಲ್ಲಿ ಬಿಸಾಡಿದ್ದ ನವಜಾತ ಹೆಣ್ಣು ಶಿಶುವಿನ ರಕ್ಷಣೆ ಮಾಡಲಾಗಿದೆ. ಚಿಕ್ಕಮಗಳೂರಿನ ಲಕ್ಷ್ಮೀಶ ನಗರದ ಪಾರ್ಕ್‌ನಲ್ಲಿ ಒಂದು ದಿನದ ಹಸುಗೂಸನ್ನು ಹೆಣ್ಣು ಮಗು ಅನ್ನೋ ಕಾರಣಕ್ಕೆ ಪಾಪಿಗಳು ಪಾರ್ಕ್ನಲ್ಲೇ ಬಿಟ್ಟು ಹೋಗಿದ್ದಾರೆ.
ಸದ್ಯ ನವಜಾತ ಶಿಶು ಪತ್ತೆಯಾಗಿದ್ದು, ಎಸ್‌ಐ ತೇಜಸ್ವಿ, ನಗರ ಠಾಣೆ ಸಿಬ್ಬಂದಿಯಿಂದ ಮಗುವನ್ನು ರಕ್ಷಣೆ ಮಾಡಲಾಗಿದೆ. ಚಿಕ್ಕಮಗಳೂರಿನ ಹೆರಿಗೆ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.
Published On - 9:14 am, Mon, 6 January 20