Chikmagalur: ಅಥ್ಲೆಟಿಕ್ ತರಬೇತುದಾರನಿಂದ ಕ್ರೀಡಾಪಟುವಿನ ಮೇಲೆ ಬಸ್ಸಿನಲ್ಲಿ ಲೈಂಗಿಕ ದೌರ್ಜನ್ಯ, ಕೋಚ್​ ಎಸ್ಕೇಪ್

| Updated By: ಸಾಧು ಶ್ರೀನಾಥ್​

Updated on: Feb 28, 2023 | 10:23 AM

Athletics coach: ಅಪ್ರಾಪ್ತ ವಯಸ್ಕ ಕ್ರೀಡಾಪಟುವಿನಿಂದ ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್​​ ಅವರಿಗೆ ದೂರು ಸಲ್ಲಿಕೆಯಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಕ್ರೀಡಾ ತರಬೇತುದಾರ ಭರತ್ ಎಸ್ಕೇಪ್ ಆಗಿದ್ದಾರೆ.

Chikmagalur: ಅಥ್ಲೆಟಿಕ್ ತರಬೇತುದಾರನಿಂದ ಕ್ರೀಡಾಪಟುವಿನ ಮೇಲೆ ಬಸ್ಸಿನಲ್ಲಿ ಲೈಂಗಿಕ ದೌರ್ಜನ್ಯ, ಕೋಚ್​ ಎಸ್ಕೇಪ್
ಅಥ್ಲೆಟಿಕ್ ತರಬೇತುದಾರನಿಂದ ಕ್ರೀಡಾಪಟುವಿನ ಮೇಲೆ ಬಸ್ಸಿನಲ್ಲಿ ಲೈಂಗಿಕ ದೌರ್ಜನ್ಯ, ಕೋಚ್​ ಎಸ್ಕೇಪ್
Follow us on

ಚಿಕ್ಕಮಗಳೂರು: ಅಥ್ಲೆಟಿಕ್ ತರಬೇತುದಾರನೊಬ್ಬ (Athletics Coach) ಕ್ರೀಡಾಪಟುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಹೇಯ ಘಟನೆ ನಡೆದಿದೆ. ರಾಷ್ಟ್ರೀಯ ಮಹಿಳಾ ಟ್ರಯಥ್ಲಾನ್ ಕ್ರೀಡಾ ಪಟುವಿನ ಮೇಲೆ ಲೈಂಗಿಕ ದೌರ್ಜನ್ಯ (Physical Harassment) ನಡೆದಿದೆ. ಈ ಬಗ್ಗೆ ಸಂತ್ರಸ್ಥೆ, 14 ವರ್ಷದ ರಾಷ್ಟ್ರೀಯ ಮಟ್ಟದ ಮಹಿಳಾ ಕ್ರೀಡಾ ಪಟುವಿನಿಂದ ದೂರು ನೀಡಲಾಗಿದೆ. ಜಿಲ್ಲಾ ಕ್ರೀಡಾ ಅಥ್ಲೆಟಿಕ್ಸ್ ತರಬೇತುದಾರ ಭರತ್. ಎಸ್ ಕುಕೃತ್ಯವೆಸಗಿರುವ ಕೋಚ್​ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಬಿಹಾರದ ಪಾಟ್ನಾದಲ್ಲಿ‌ ಆಯೋಜನೆ ಮಾಡಿದ್ದ ಕ್ರೀಡಾ ಕೂಟದಲ್ಲಿ ಈ ಇಬ್ಬರೂ ಭಾಗಿಯಾಗಿದ್ದಾಗ ಈ ಘಟನೆ ನಡೆದಿದೆ.

ಕ್ರೀಡಾಕೂಟ ಮುಗಿಸಿ ಬೆಂಗಳೂರಿನಿಂದ (Bangalore) ಚಿಕ್ಕಮಗಳೂರಿಗೆ (Chikmagalur) ಬಸ್ಸಿನಲ್ಲಿ ಬರುವಾಗ ಲೈಂಗಿಕ ದೌರ್ಜನ್ಯ ಕೃತ್ಯ ನಡೆದಿದೆ. ಆರೋಪಿ ಭರತ್ ಎಸ್ ಜಿಲ್ಲಾ ಯುವ ಸಬಲೀಕರಣ, ಕ್ರೀಡಾ ಇಲಾಖೆಯಯಲ್ಲಿ ಅಥ್ಲೆಟಿಕ್ಸ್ ‌ ತರಬೇತುದಾರನಾರಾಗಿದ್ದಾರೆ.

ಇದನ್ನೂ ಓದಿ:

National Games: ನ್ಯಾಷನಲ್ ಗೇಮ್ಸ್​ನಲ್ಲಿ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ದಿನಗೂಲಿ ನೌಕರನ ಮಗಳು..!

ಅಪ್ರಾಪ್ತ ವಯಸ್ಕ ಕ್ರೀಡಾಪಟುವಿನಿಂದ ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್​​ ಅವರಿಗೆ ದೂರು ಸಲ್ಲಿಕೆಯಾಗಿದೆ. ಚಿಕ್ಕಮಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಭರತ್ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಕ್ರೀಡಾ ತರಬೇತುದಾರ ಭರತ್ ಎಸ್ಕೇಪ್ ಆಗಿದ್ದಾರೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ