AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

National Games: ನ್ಯಾಷನಲ್ ಗೇಮ್ಸ್​ನಲ್ಲಿ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ದಿನಗೂಲಿ ನೌಕರನ ಮಗಳು..!

National Games 2022: ಮುನಿತಾ ಪ್ರಜಾಪತಿ 2018 ರ ನಡೆದ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಎರಡನೇ ಸ್ಥಾನ ಪಡೆದರೆ, ಎರಡು ವರ್ಷಗಳ ಹಿಂದೆ ಗುವಾಹಟಿಯಲ್ಲಿ ನಡೆದ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 10 ಕಿ.ಮೀ ವೇಗದ ನಡಿಗೆಯಲ್ಲಿ ಅದ್ಭುತ ಪ್ರದರ್ಶನ ನೀಡಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು.

National Games: ನ್ಯಾಷನಲ್ ಗೇಮ್ಸ್​ನಲ್ಲಿ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ದಿನಗೂಲಿ ನೌಕರನ ಮಗಳು..!
TV9 Web
| Edited By: |

Updated on: Sep 30, 2022 | 4:33 PM

Share

ಕರೆಂಟ್ ಶಾಕ್​ನಿಂದ ಬಲಗೈ ಕಳೆದುಕೊಂಡರೂ ಕೂಲಿ ಕೆಲಸ ಬಿಡದ ತಂದೆ. ನೆರೆಹೊರೆಯವರ ಬಳಿ ಸಾಕಷ್ಟು ಸಾಲ ಮಾಡಿದ ತಾಯಿ. ಈ ಇಬ್ಬರ ಹೋರಾಟಕ್ಕೆ ಪ್ರತಿಫಲವಾಗಿ ಮಗಳು ಇದೀಗ ರಾಷ್ಟ್ರಮಟ್ಟದಲ್ಲಿ ದಾಖಲೆ ನಿರ್ಮಿಸುವ ಮೂಲಕ ತಮ್ಮ ಪೋಷಕರ ಹೋರಾಟದ ಕಥೆಯನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ. ವಾಸ್ತವವಾಗಿ ಗುಜರಾತ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ (National Games 2022) ಉತ್ತರ ಪ್ರದೇಶದ ಮುನಿತಾ ಪ್ರಜಾಪತಿ ಎಂಬ ಯುವತಿ 20 ಕಿಮೀ ಮಹಿಳೆಯರ ವೇಗದ ನಡಿಗೆಯಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ನಿನ್ನೆಯಿಂದ ಆರಂಭವಾಗಿರುವ ನ್ಯಾಷನಲ್​ ಗೇಮ್ಸ್​ನಲ್ಲಿ 20 ಕಿಮೀ ಮಹಿಳೆಯರ ವೇಗದ ನಡಿಗೆಯಲ್ಲಿ ಸ್ಪರ್ಧಿಸಿದ್ದ ಮುನಿತಾ 1 ಗಂಟೆ 38 ನಿಮಿಷ 20 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸುವುದರೊಂದಿಗೆ ಚಿನ್ನದ ಪದಕವನ್ನು ಗೆದ್ದಿದ್ದಾರೆ.

ಕರೆಂಟ್‌ ಶಾಕ್​ನಿಂದ ತಂದೆಯ ಬಲಗೈ ಕಟ್

ಚಿನ್ನದ ಪದಕ ಗೆಲ್ಲುವುದರೊಂದಿಗೆ ನ್ಯಾಷನಲ್​ ಗೇಮ್ಸ್​ನಲ್ಲಿ ದಾಖಲೆ ಬರೆದಿರುವ 21 ವರ್ಷದ ಮುನಿತಾ ಕುಟುಂಬದ ಕಥೆ ಕೇಳಿದರೆ ಎಂತಹವರಿಗೂ ಕಣ್ಣೀರು ಬರದಿರದು. ತೀರ ಬಡ ಕುಟುಂಬದಲ್ಲಿ ಜನಿಸಿದ ಮುನಿತಾ ಅವರ ತಂದೆ ಕೂಲಿ ಕೆಲಸ ಮಾಡಿ, ಕುಟುಂಬದ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಈ ಹಿಂದೆ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶದಿಂದ ಅವರ ತಂದೆ ತಮ್ಮ ಬಲಗೈಯನ್ನು ಕಳೆದುಕೊಳ್ಳಬೇಕಾಯಿತು. ಇಷ್ಟೆಲ್ಲಾ ಆದರೂ ಮಗಳ ಕನಸನ್ನು ನನಸಾಗಿಸಲು ಮುನಿತಾ ತಂದೆ ಪಟ್ಟಪಾಡು ಅಷ್ಟಿಷ್ಟಲ್ಲ.

ಕೆಲಸಕ್ಕಾಗಿ ಆಟದ ಹಿಂದೆ ಬಿದ್ದೆ

ಕುಟುಂಬದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದರಿಂದ ಮುನಿತಾಳಿಗೆ ಸಲಹೆ ನೀಡಿದ ಅವರ ಅಕ್ಕ, ಕ್ರೀಡೆಯಲ್ಲಿ ಸಾಧನೆ ಮಾಡಿದರೆ ಒಳ್ಳೆಯ ಸರ್ಕಾರಿ ಉದ್ಯೋಗವನ್ನೂ ಪಡೆಯಬಹುದು ಎಂಬ ಸಲಹೆಯನ್ನು ನೀಡಿದ್ದರಂತೆ. ಇದಾದ ನಂತರ ಮೈದಾನಕ್ಕಿಳಿದ ಮುನಿತಾ 2017 ರಲ್ಲಿ ಭೋಪಾಲ್‌ನಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಟ್ರಯಲ್ಸ್ ನೀಡಿದ್ದರು.

2 ವರ್ಷಗಳ ಹಿಂದೆಯೇ ದಾಖಲೆ

ಟ್ರಯಲ್ಸ್‌ನಲ್ಲಿ ಆಯ್ಕೆಯಾದ ನಂತರ ಮುನಿತಾ ಎಂದೂ ಹಿಂತ್ತಿರುಗಿ ನೋಡಲಿಲ್ಲ. ಮುನಿತಾ ಪ್ರಜಾಪತಿ 2018 ರ ನಡೆದ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಎರಡನೇ ಸ್ಥಾನ ಪಡೆದರೆ, ಎರಡು ವರ್ಷಗಳ ಹಿಂದೆ ಗುವಾಹಟಿಯಲ್ಲಿ ನಡೆದ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 10 ಕಿ.ಮೀ ವೇಗದ ನಡಿಗೆಯಲ್ಲಿ ಅದ್ಭುತ ಪ್ರದರ್ಶನ ನೀಡಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು.

ಮಗಳಿಗಾಗಿ ಸಾಲ ಮಾಡಿದ ತಾಯಿ

ಮುನಿತಾಳ ತಾಯಿ ತನ್ನ ಸಹೋದರಿಯರಿಂದ ಸಾಲ ಪಡೆದು 2017 ರಲ್ಲಿ ಆಕೆಯನ್ನು ಟ್ರಯಲ್ಸ್‌ಗಾಗಿ ಭೋಪಾಲ್‌ಗೆ ಕಳುಹಿಸಿದ್ದರಂತೆ. ಈ ಅವಕಾಶ ತನ್ನ ಜೀವನದ ಕೊನೆಯ ಪ್ರಯೋಗವೆಂದು ಪರಿಗಣಿಸಿದ್ದ ಮುನಿತಾ ಟ್ರಯಲ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಆಯ್ಕೆಯಾದರು. ಆ ಬಳಿಕ ಒಂದೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದ ಮುನಿತಾಗೆ ಪ್ರಾಧಿಕಾರದಿಂದ ಆಹಾರ ಮತ್ತು ಕಿಟ್‌ನ ಸೌಲಭ್ಯವೂ ದೊರೆಯಿತು.

ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?