FIFA World Cup 2022: ಕೋವಿಡ್ ಲಸಿಕೆ ಕಡ್ಡಾಯವಲ್ಲ; ಫುಟ್ಬಾಲ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಫಿಫಾ
FIFA World Cup 2022: ಕತಾರ್ ಮೊದಲ ಬಾರಿಗೆ ಫುಟ್ಬಾಲ್ ವಿಶ್ವಕಪ್ ಅನ್ನು ಆಯೋಜಿಸುತ್ತಿದ್ದು, 32 ತಂಡಗಳನ್ನು ಹೊಂದಿರುವ ವಿಶ್ವದ ಅತ್ಯಂತ ಪ್ರಸಿದ್ಧ ಪಂದ್ಯಾವಳಿ ನವೆಂಬರ್ 20 ರಿಂದ ಪ್ರಾರಂಭವಾಗಲಿದೆ.
ಈ ವರ್ಷ ಕ್ರೀಡಾ ಜಗತ್ತಿನಲ್ಲಿ ಎರಡು ದೊಡ್ಡ ಕ್ರೀಡೆಗಳು ಸತತ ಎರಡು ತಿಂಗಳುಗಳ ಅಂತರದಲ್ಲಿ ನಡೆಯಲಿವೆ. ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ T20 ವಿಶ್ವಕಪ್ (T20 World Cup) ನಡೆಯಲಿದ್ದರೆ, ಕೆಲವು ದಿನಗಳ ನಂತರ ಫುಟ್ಬಾಲ್ ವಿಶ್ವಕಪ್ ಆರಂಭವಾಗಲಿದೆ. FIFA ಪುರುಷರ ವಿಶ್ವಕಪ್ 2022 (FIFA World Cup 2022) ಈ ವರ್ಷ ನವೆಂಬರ್-ಡಿಸೆಂಬರ್‌ನಲ್ಲಿ ಅರಬ್ ದೇಶವಾದ ಕತಾರ್‌ನಲ್ಲಿ ನಡೆಯಲಿದೆ. ಇದಕ್ಕೆ ಕತಾರ್ ಕೂಡ ಸಕಲ ಸಿದ್ದತೆ ಮಾಡಿಕೊಂಡಿದೆ. ಆದರೆ ವಿಶ್ವಕಪ್ ಆರಂಭಕ್ಕೂ ಮುನ್ನ ಫುಟ್ಬಾಲ್ ಅಭಿಮಾನಿಗಳಲ್ಲಿ ಕಾಡುತ್ತಿದ್ದ ಆತಂಕಕ್ಕೆ ಫಿಫಾ ತೆರೆ ಎಳೆದಿದೆ. ಅದೆನೆಂದರೆ, ಈ ಹಿಂದೆ ಇದ್ದ ಕೊರೊನಾ ನಿಯಮಗಳನ್ನು ಸಡಿಲಿಸಿರುವ ಫಿಫಾ, ವಿಶ್ವಕಪ್ ವೀಕ್ಷಿಸಲು ಕತಾರ್‌ಗೆ ಬರುವ ಅಭಿಮಾನಿಗಳಿಗೆ ಕೋವಿಡ್ ಲಸಿಕೆ ಕಡ್ಡಾಯವಲ್ಲ ಎಂದು ಆದೇಶ ಹೊರಡಿಸಿದೆ.
ಲಸಿಕೆ ಇಲ್ಲ, ನೆಗೆಟಿವ್ ವರದಿ ಕಡ್ಡಾಯ..
ವಿಶ್ವಕಪ್‌ನಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಯಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಕತಾರ್ ಸರ್ಕಾರ ಸೆಪ್ಟೆಂಬರ್ 29 ರ ಗುರುವಾರ ಪ್ರಕಟಿಸಿದೆ. ಆದಾಗ್ಯೂ, ಈ ಅದ್ಭುತ ಪಂದ್ಯಾವಳಿಯನ್ನು ವೀಕ್ಷಿಸಲು ಬರುವ ಅಭಿಮಾನಿಗಳಿಗೆ ಲಸಿಕೆ ಕಡ್ಡಾಯವಲ್ಲ. ಆದರೆ ದೇಶವನ್ನು ಪ್ರವೇಶಿಸುವ ಮೊದಲು, ಅವರ ಕೊರೊನಾ ಪರೀಕ್ಷಾ ವರದಿಯು ನೆಗೆಟಿವ್ ಇರಬೇಕು. ಜೊತೆಗೆ ಆ ವರದಿಯನ್ನು ಸಹ ತೋರಿಸಬೇಕು ಎಂದು ತಾಕೀತು ಮಾಡಿದೆ.
ಕತಾರ್ ಮೊದಲ ಬಾರಿಗೆ ಫುಟ್ಬಾಲ್ ವಿಶ್ವಕಪ್ ಅನ್ನು ಆಯೋಜಿಸುತ್ತಿದ್ದು, 32 ತಂಡಗಳನ್ನು ಹೊಂದಿರುವ ವಿಶ್ವದ ಅತ್ಯಂತ ಪ್ರಸಿದ್ಧ ಪಂದ್ಯಾವಳಿ ನವೆಂಬರ್ 20 ರಿಂದ ಪ್ರಾರಂಭವಾಗಲಿದೆ. ಈ ಪಂದ್ಯಗಳು 29 ದಿನಗಳ ಕಾಲ ನಡೆಯಲಿವೆ. ಕತಾರ್ ಸರ್ಕಾರ ಮತ್ತು FIFA ಈ ಈವೆಂಟ್ ಅನ್ನು ಭರ್ಜರಿಯಾಗಿ ನಡೆಸಲು ಪ್ಲಾನ್ ರೂಪಿಸಿದ್ದು, ಕೊರೊನಾ ನಿಯಮಗಳನ್ನಿಟ್ಟುಕೊಂಡು ಅಭಿಮಾನಿಗಳ ಮೇಲೆ ಹೆಚ್ಚು ಕಠಿಣ ನಿರ್ಬಂಧಗಳನ್ನು ವಿಧಿಸದಿರುವ ತೀರ್ಮಾಕ್ಕೆ ಬಂದಿವೆ.
BROADCAST RIGHTS
Concerns. Many Qatari hotels & smaller establishments are choosing NOT to broadcast WC games in bar areas as beIN subscriptions cost too much! Already worried about having enough places to watch games & now there are fewer. Hotel rooms/apartments same problem.
— The FSA (@WeAreTheFSA) September 22, 2022
ಸರ್ಕಾರಿ ಆ್ಯಪ್‌ನಲ್ಲಿ ಗ್ರೀನ್ ಮಾರ್ಕ್ ಅಗತ್ಯ
ಆದಾಗ್ಯೂ, ಕೆಲವು ಸೂಚನೆಗಳನ್ನು ಅಭಿಮಾನಿಗಳು ಪಾಲಿಸಲೇಬೇಕಾಗಿದ್ದು, ಇದರ ಅಡಿಯಲ್ಲಿ, 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಅಭಿಮಾನಿಗಳು ತಮ್ಮ ಚಟುವಟಿಕೆಗಳು ಮತ್ತು ಆರೋಗ್ಯ ಸ್ಥಿತಿಯನ್ನು ಟ್ರ್ಯಾಕ್ ಮಾಡುವ ಅಧಿಕೃತ ಫೋನ್ ಅಪ್ಲಿಕೇಶನ್ ಎಥೆರಾಜ್ ಅನ್ನು ತಮ್ಮ ಮೊಬೈಲ್ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲೇಬೇಕು. ಜೊತೆಗೆ ಒಳಾಂಗಣ ಕ್ರೀಡೆಗಳನ್ನು ವೀಕ್ಷಿಸಲು ಬರುವ ಅಭಿಮಾನಿಗಳಿಗೆ ತಮ್ಮ ಮೊಬೈಲ್ನಲ್ಲಿ ಇನ್ಸ್ಟಾಲ್ ಮಾಡಿಕೊಂಡ ಅಪ್ಲಿಕೇಶನ್ನಲ್ಲಿ ಗ್ರೀನ್ ಸಿಗ್ನಲ್ ಬಂದರೆ ಮಾತ್ರ ಒಳಗೆ ಬರುವ ಅವಕಾಶ ಇರುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.
ಆದರೆ, ಕೊರೊನಾ ಪರಿಸ್ಥಿತಿ ನಿಯಂತ್ರಣಕ್ಕೆ ಬಂದರೆ, ಈಗ ಸೂಚಿಸಿರುವ ನಿಯಮಗಳನ್ನು ಬದಲಾಯಿಸಬಹುದು ಎಂದು ಸಂಘಟಕರು ಹೇಳಿದ್ದಾರೆ. ಸಾರ್ವಜನಿಕ ಸಾರಿಗೆಯನ್ನು ಬಳಸುವಾಗ ಅಭಿಮಾನಿಗಳು ಮಾಸ್ಕ್ ಧರಿಸಲು ಸಹ ಆದೇಶಿಸಲಾಗಿದೆ. ವೀಕ್ಷಕರು ಸೋಂಕಿಗೆ ಒಳಗಾಗಿದ್ದರೆ, ಅವರು ಸರ್ಕಾರದ ನಿಯಮಗಳ ಪ್ರಕಾರ ಕ್ವಾರಂಟೈನ್ ಆಗಬೇಕು ಎಂದು ಸಂಘಟಕರು ಎಚ್ಚರಿಸಿದ್ದಾರೆ.
?? A thread on the Qatar World Cup ??
The FSA’s @WeAreFreeLions & @WeAreFSACymru Fans’ Embassy teams were out in Qatar recently.
Subjects covered:
Accommodation Alcohol Broadcast Covid Crime & customs Drugs Food Fan zones LGBT+ Stadiums Temperatures Transport Travel insurance pic.twitter.com/s5GQPi2o5H
— The FSA (@WeAreTheFSA) September 22, 2022
29 ದಿನಗಳು, 32 ತಂಡಗಳು..
ಹಲವು ವಿವಾದಗಳ ನಡುವೆಯೂ ನವೆಂಬರ್ 20 ರಿಂದ ಕತಾರ್‌ನಲ್ಲಿ ಟೂರ್ನಿ ಆರಂಭವಾಗಲಿದೆ. ಇದು ಡಿಸೆಂಬರ್ 18 ರವರೆಗೆ ಮುಂದುವರಿಯಲಿದೆ. 29 ದಿನಗಳ ಈ ಕಾರ್ಯಕ್ರಮದಲ್ಲಿ 32 ದೇಶಗಳ ತಂಡಗಳು ಭಾಗವಹಿಸುತ್ತಿವೆ. ಸಾಮಾನ್ಯವಾಗಿ FIFA ವಿಶ್ವಕಪ್ ಯಾವಾಗಲೂ ಜೂನ್-ಜುಲೈ ತಿಂಗಳುಗಳಲ್ಲಿ ನಡೆಯುತ್ತದೆ. ಆದರೆ ಈ ತಿಂಗಳುಗಳಲ್ಲಿ ಕತಾರ್‌ನಲ್ಲಿ ಬಿಸಿಲು ಹೆಚ್ಚಾಗಿರುವುದರಿಂದ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ವಿಶ್ವಕಪ್ ಆಯೋಜಿಸಲು ನಿರ್ಧರಿಸಲಾಗಿದೆ.
Published On - 3:48 pm, Fri, 30 September 22