ಚಿಕ್ಕಮಗಳೂರು: ಭದ್ರಾ ನದಿಯಲ್ಲಿ ಕೊಚ್ಚಿಹೋಗಿದ್ದ ಬೆಂಗಳೂರಿನ ವೈದ್ಯ ರುದ್ರೇಶ್ ಮೃತದೇಹ ಪತ್ತೆಯಾಗಿದೆ. ನಾಲ್ಕು ದಿನದ ಬಳಿಕ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹಳುವಳ್ಳಿ ಬಳಿ ದೇಹ ಪತ್ತೆಯಾಗಿದೆ.
ತನ್ನ ಸ್ನೇಹಿತರ ಜೊತೆಗೂಡಿ ಜಿಲ್ಲೆಯ ಕಳಸ ಪಟ್ಟಣಕ್ಕೆ ಬಂದಿದ್ದ ರುದ್ರೇಶ್ ಕಳೆದ ಭಾನುವಾರ ಪೋಟೋ ತೆಗೆಯುವ ವೇಳೆ ಕಾಲುಜಾರಿ ಭದ್ರಾ ನದಿಯಲ್ಲಿ ಕೊಚ್ಚಿ ಹೋಗಿದ್ರು. ಅಂದಿನಿಂದಲೂ SDRF ಪಡೆ, ಅಗ್ನಿಶಾಮಕದಳದ ಸಿಬ್ಬಂದಿ, ನುರಿತ ಮುಳುಗು ತಜ್ಞರು, ಶೌರ್ಯ ವಿಪತ್ತು ಪಡೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ಮೂಲಕ ನೀರುಪಾಲಾಗಿದ್ದ ರುದ್ರೇಶ್ ಹುಡುಕಾಟ ನಡೆಸುತಿದ್ದರು.
ಇನ್ನು ವಿಚಾರ ತಿಳಿದು ಭಾನುವಾರ ಸಂಜೆಯೇ ಬೆಂಗಳೂರಿನಿಂದ ಕಳಸಕ್ಕೆ ಆಗಮಿಸಿದ್ದ ರುದ್ರೇಶ್ ತಂದೆ, ಶ್ರೀಧರ್ ಭದ್ರಾ ನದಿ ತೀರದಲ್ಲಿಯೇ ಬೀಡುಬಿಟ್ಟಿದ್ದು. ನನ್ನ ಮಗನ ಮೃತದೇಹವನ್ನಾದ್ರೂ ಹುಡುಕಿಕೊಡಿ ಅಂತಾ ಮನವಿ ಮಾಡಿಕೊಂಡಿದ್ದರು. ಒಬ್ಬ ಮಗನಾಗಿ ತಂದೆಯ ಅಂತ್ಯ ಸಂಸ್ಕಾರವನ್ನ ಮಾಡ್ಬೇಕು, ಆದ್ರೆ ನನಗೆ ಮಗನ ಅಂತ್ಯ ಸಂಸ್ಕಾರ ನೆರವೇರಿಸೋ ಪರಿಸ್ಥಿತಿ ಬಂದೋದಾಗಿದೆ. ಆದ್ರೂ ಪರವಾಗಿಲ್ಲ, ಗಟ್ಟಿ ಮನಸ್ಸು ಮಾಡಿಕೊಂಡಿದ್ದೇನೆ, ಹೇಗಾದ್ರೂ ಮಾಡಿ ಕೊಚ್ಚಿ ಹೋಗಿರುವ ಮಗನ ಮೃತದೇಹ ಹುಡಕಿಕೊಡಿ ಅಂತಾ ಭದ್ರಾ ನದಿ ತೀರದಲ್ಲಿ ತಂದೆ ಶ್ರೀಧರ್ ಅಂಗಲಾಚಿದ್ದರು. ಸದ್ಯ ಇಂದು ಮೃತದೇಹ ಪತ್ತೆಯಾಗಿದೆ.
ಇದನ್ನೂ ಓದಿ: ಹೇಗಾದ್ರೂ ಮಾಡಿ ನನ್ನ ಮಗನ ಮೃತದೇಹ ಹುಡುಕಿಕೊಡಿ -ಟಿವಿ9 ಕ್ಯಾಮರಾ ಮುಂದೆ ಕಣ್ಣೀರಿಟ್ಟ ತಂದೆ