ಚಿಕ್ಕಮಗಳೂರು, ನವೆಂಬರ್ 4: ವಿದೇಶದ ಉದ್ಯೋಗದ ಆಸೆಗೆ ಬಿದ್ದು ಕಾಂಬೋಡಿಯಾ ದೇಶಕ್ಕೆ ಕೆಲಸಕ್ಕೆ ತೆರಳಿದ್ದ ಕಾಫಿನಾಡಿನ ಯುವಕ ಚೀನಿ ಆ್ಯಪ್ ಮಾಫಿಯಾಕ್ಕೆ ಸಿಲುಕಿ ನರಳಾಟ ಅನುಭವಿಸುತ್ತಿರುವ ಕುರಿತು ನಿರಂತರವಾಗಿ TV9 ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಭಾರತೀಯ ರಾಯಭಾರಿ ಕಚೇರಿಯ ಸಿಬ್ಬಂದಿಗಳು ಯುವಕನನ್ನ ರಕ್ಷಿಸಿದ್ದು ಭಾರತಕ್ಕೆ ವಾಪಸ್ ಕರೆತರುವ ಪ್ರಕ್ರಿಯೆ ಆರಂಭವಾಗಿದೆ.
ಚೀನಿ ಆ್ಯಪ್ ಮಾಫಿಯಾಕ್ಕೆ ಸಿಲುಕಿದ್ದ ಯುವಕ:
ಕಳೆದ ಮೂರು ತಿಂಗಳ ಹಿಂದೆ ಕಾಂಬೋಡಿಯಾ ದೇಶಕ್ಕೆ ಉದ್ಯೋಗಕ್ಕಾಗಿ ತೆರಳಿದ್ದ ಚಿಕ್ಕಮಗಳೂರು ಜಿಲ್ಲೆಯ N.R ಪುರ ತಾಲೂಕಿನ ಮಹಲ್ಗೋಡು ಗ್ರಾಮದ ಅಶೋಕ್ ಚೀನಿ ಆ್ಯಪ್ ಮಾಫಿಯಾದಲ್ಲಿ ಸಿಲುಕಿದ್ದ.ವಂಚನೆಯ ಟಾರ್ಗೆಟ್ ನೀಡುತ್ತಿದ್ದ ಚೀನಿ ಆ್ಯಪ್ ಕಂಪನಿ ಟಾರ್ಗೆಟ್ ಪೂರ್ಣ ಮಾಡದ ಹಿನ್ನೆಲೆ ಅಶೋಕ್ ಗೆ ಚಿತ್ರಹಿಂಸೆ ನೀಡಿತ್ತು. ಅಶೋಕ್ ನನ್ನ ಬಂಧನದಲ್ಲಿ ಇರಿಸಿ 13 ಲಕ್ಷ ಹಣಕ್ಕಾಗಿ ಅಶೋಕ್ ಪೋಷಕರಿಗೆ ಬೇಡಿಕೆ ಹಾಕಿತ್ತು. ಆಶೋಕ್ ನನ್ನ ವಾಪಸ್ ಭಾರತಕ್ಕೆ ಕರೆತರುವಂತೆ ಆಶೋಕ್ ಕುಟುಂಬ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡುವ ಮೂಲಕ ರಾಜ್ಯ,ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿತ್ತು.
TV9 ನಲ್ಲಿ ನಿರಂತರವಾಗಿ ಸುದ್ದಿ ಪ್ರಸಾರ:
ಕಾಫಿನಾಡಿನ ಯುವಕ ಕಾಂಬೋಡಿಯಾ ದೇಶಗಳಲ್ಲಿ ಸಿಲುಕಿರುವ ಕುರಿತು ನಿರಂತರವಾಗಿ TV9 ಸುದ್ದಿ ಪ್ರಸಾರ ಮಾಡಿತ್ತು. TV9 ನಲ್ಲಿ ಪ್ರಸಾರವಾದ ಸುದ್ದಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (shobha karandlaje) ಸ್ಪಂದಿಸಿ ಆಶೋಕ್ ನನ್ನ ರಕ್ಷಣೆ ಮಾಡುವಂತೆ ಕಾಂಬೋಡಿಯಾ ದೇಶದ ಭಾರತೀಯ ರಾಯಭಾರಿ ಕಚೇರಿಗೆ ಪತ್ರ ವ್ಯವಹಾರ ನಡೆಸುವ ಮೂಲಕ ಮನವಿ ಮಾಡಿಕೊಂಡಿತ್ತು.
ಆಶೋಕ್ ರಕ್ಷಣೆ ಮಾಡಿದ ಭಾರತೀಯ ರಾಯಭಾರಿ ಕಚೇರಿ ಸಿಬ್ಬಂದಿ:
ಕಳೆದ ಎರಡು ದಿನಗಳ ಹಿಂದೆ ಭಾರತೀಯ ರಾಯಭಾರಿ ಕಚೇರಿ ಸಿಬ್ಬಂದಿಗಳು ಕಾಂಬೋಡಿಯಾದ ವಿಯೆಟ್ನಾಂ ಬಾರ್ಡರ್ ನಲ್ಲಿರುವ ಚೀನಿ ಆ್ಯಪ್ ಕಚೇರಿಗೆ ಭೇಟಿ ನೀಡಿ ಆಶೋಕ್ ರಕ್ಷಣೆ ಮಾಡಲಾಗಿದ್ದ ಆಶೋಕ್ ಭಾರತೀಯ ರಾಯಭಾರಿ ಕಚೇರಿಯ ಸಿಬ್ಬಂದಿಗಳ ಜೊತೆಯಿದ್ದು ,ಸೋಮವಾರದ ಬಳಿಕ ಭಾರತಕ್ಕೆ ಆಶೋಕ್ ಕರೆತರಲು ಸಿದ್ದತೆ ಮಾಡಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ