ಕನ್ನಡಿಗರ ಪರದಾಟ, ಕಾಫಿನಾಡು ಯುವಕನಿಗೆ ಚಿತ್ರಹಿಂಸೆ -ಕಾಂಬೋಡಿಯಾದಲ್ಲಿ ಚೀನಿ ಆ್ಯಪ್‌ ಕರಾಳ ದಂಧೆ, ವಾಪಸ್ ಭಾರತಕ್ಕೆ ಕಳಿಸಲು ‌13 ಲಕ್ಷಕ್ಕೆ ಡಿಮ್ಯಾಂಡ್

Chinese app scam: ಟೂರಿಸ್ಟ್ ವೀಸಾ ಮೂಲಕ ಭಾರತೀಯರನ್ನು ಕಾಂಬೋಡಿಯಾಕ್ಕೆ ಕರೆತಂದು ಅದನ್ನು ಬಿಸಿನೆಸ್ ವೀಸಾಗೆ ಬದಲಾಯಿಸ್ತಾರೆ.. ಮುಂದೆ ಅವರನ್ನು ಒತ್ತೆಯಾಳಾಗಿರಿಸಿಕೊಂಡು, ಅವರಿಂದಲೇ ಭಾರತೀಯರಿಗೆ ಮೋಸ ಮಾಡಿಸುವ ಕೆಲಸದಲ್ಲಿ ಈ ಕುತಂತ್ರಿ ಚೀನಾ ನಿರತವಾಗಿದೆ. ವಿದೇಶದ ಕನಸು ಹೊತ್ತು ತಾಯ್ನಾಡು ಬಿಟ್ಟು ಹೋದ ಯುವಕರು ಇಂದು ಚೀನೀಯರ ಕೈವಶದಲ್ಲಿದ್ದಾರೆ! ಇನ್ನಾದ್ರೂ ರಾಜ್ಯ ಹಾಗೂ ಕೇಂದ್ರ ಸರ್ಕಾರ ಈ ಕುರಿತು ಎಚ್ಚೆತ್ತು ಚೀನಾಗೆ ತಕ್ಕ ಪಾಠ ಕಲಿಸ್ಬೇಕಿದೆ.

ಕನ್ನಡಿಗರ ಪರದಾಟ, ಕಾಫಿನಾಡು ಯುವಕನಿಗೆ ಚಿತ್ರಹಿಂಸೆ -ಕಾಂಬೋಡಿಯಾದಲ್ಲಿ ಚೀನಿ ಆ್ಯಪ್‌ ಕರಾಳ ದಂಧೆ, ವಾಪಸ್ ಭಾರತಕ್ಕೆ ಕಳಿಸಲು ‌13 ಲಕ್ಷಕ್ಕೆ ಡಿಮ್ಯಾಂಡ್
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಸಾಧು ಶ್ರೀನಾಥ್​

Updated on: Nov 01, 2023 | 9:28 AM

ಚಿಕ್ಕಮಗಳೂರು, ನವೆಂಬರ್​ 1: ಫಾರಿನಲ್ಲಿ ಕೆಲಸ, ಕೈ ತುಂಬಾ ಸಂಬಳ.. ಐಷಾರಾಮಿ ಬದುಕು ಸಾಗಿಸ್ಬೇಕು.. ತಂದೆ ತಾಯಿಯನ್ನ ಚನ್ನಾಗಿ ನೋಡ್ಕೋಬೇಕು – ಇದು ಇಂದಿನ ಯುವ ಜನತೆಯ ಕನಸು.. ಆದ್ರೆ ಹೀಗೆ ಹತ್ತಾರು ಕನಸು ಹೊತ್ತು ವಿದೇಶಕ್ಕೆ ಹೋದವರ ಕಥೆ ಏನಾಗಿದೆ ಗೊತ್ತಾ..? ಇಡೀ ರಾಜ್ಯವೇ ಬೆಚ್ಚಿಬೀಳಿಸುವ ಸುದ್ದಿಯಿದು ( money laundering scam). ಮೇಲಿನ ಫೋಟೋದಲ್ಲಿ ಕಾಣ್ತಿರೋ ಯುವಕನ (chikkamagalur youth) ಹೆಸ್ರು ಆಶೋಕ್, ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನ ಮಾಗುಂಡಿ ಸಮೀದ ಮಹಲ್ಗೋಡು ಗ್ರಾಮದ ಯುವಕ. ಬಿಕಾಂ ಓದು ಮುಗಿಸಿ ಊರಲ್ಲೇ ಕೆಲಸ ಮಾಡ್ಕೊಂಡಿದ್ದ ಈ ಯುವಕನಿಗೆ ಎನ್.ಆರ್. ಪುರ ಮೂಲದ ನಿಕ್ಷೇಪ್ ಮತ್ತು ಭರತ್ ಎನ್ನುವವರ ಪರಿಚಯವಾಗುತ್ತೆ.. ‘ನಿನಗೆ ವಿದೇಶದಲ್ಲಿ ಕೆಲಸ ಕೊಡಿಸ್ತೀವಿ 800 ಡಾಲರ್ ಸಂಬಳ ಸಿಗುತ್ತೆ’ ಅಂತ ಅಶೋಕ್ ಗೆ ಆಸೆ (Cambodia Chinese app) ಹುಟ್ಟಿಸಿದ್ದಾರೆ. ಫಾರಿನ್ ನಲ್ಲಿ ಕೆಲಸ, ಲಕ್ಷಗಟ್ಟಲೆ ಸಂಬಳ ಅಂದ್ರೆ ಯಾರು ತಾನೇ ಬೇಡ ಅಂತಾರೆ ಹೇಳಿ.. ಯುವಕರ ಬಣ್ಣ ಬಣ್ಣದ ಮಾತು ಕೇಳಿದ ಅಶೋಕ್ ಹಿಂದೆ ಮುಂದೆ ಯೋಚಿಸದೆ ಓಕೆ ಅಂದಿದ್ದಾನೆ.

ಆದ್ರೆ ಅಲ್ಲಿಗೆ ಹೋದಮೇಲೆ ಅಶೋಕ್ ಗೆ ದೊಡ್ಡ ಶಾಕ್ ಒಂದು ಕಾದಿತ್ತು. ತಾನು ಅದೊಂದು ದೊಡ್ಡ ಜಾಲದೊಳಗೆ ಸಿಕ್ಕಿಹಾಕ್ಕೊಂಡಿದ್ದೀನಿ ಅನ್ನೋ ಅರಿವಾಗಿತ್ತು.. ತಿಂಗಳು ಕಳೆದಂತೆ ಚಿತ್ರಹಿಂಸೆಗಳು ಶುರುವಾಗಿತ್ತು.‌. ಹೇಗಾದ್ರೂ ಮಾಡಿ ನನ್ನನ್ನು ಭಾರತಕ್ಕೆ ವಾಪಸ್​ ಕರೆಸಿಕೊಳ್ಳಿ ಅಂತ ಚೀರಾಡೋಕೆ ಶುರು ಮಾಡಿದ್ದ.. ಅಶೋಕನ ಪರಿಸ್ಥಿತಿ ಕಂಡ ಇಡೀ ಕುಟುಂಬ ಕಣ್ಣೀರಿನಲ್ಲಿ ಕೈತೊಳೀತಿದೆ..

ಕ್ರೌನ್ ಕೆಸಿನೋ ಎಂಬ ಕಂಪೆನಿಯಲ್ಲಿ ಕೆಲಸಕ್ಕೆ ನೀವು ಆಯ್ಕೆಯಾಗಿದ್ದೀರಾ, ತಕ್ಷಣವೇ ನೀವು ಕಾಂಬೋಡಿಯಾಗೆ ಬರಬೇಕು, ತಿಂಗಳಿಗೆ 800 ಡಾಲರ್ ಸಂಬಳ ಎಂಬ ಆಫರ್ ಲೆಟರ್ ಒಂದು ಕಳೆದ ಮೂರು ತಿಂಗಳ ಹಿಂದೆ ಅಶೋಕ್ ಕೈ ಸೇರಿತ್ತು. ಇದನ್ನು ನಂಬಿಕೊಂಡು ಕಾಂಬೋಡಿಯಾಕ್ಕೆ ಹೋದ ಆಶೋಕ್ ಗೆ ಅಲ್ಲಿ ದೊಡ್ಡ ಶಾಕ್ ಕಾದಿತ್ತು.. ಅಲ್ಲಿ ಆತನಿಗೆ ಇದ್ದ ಕೆಲಸವೇ ಬೇರೆ ಆಗಿತ್ತು. ಕಳೆದ ಎರಡು ವರ್ಷದಿಂದ ನಮ್ಮ ಸ್ನೇಹಿತರ, ಪರಿಚಯ ಇರುವವರ ಫೇಸ್ಬುಕ್, ಇನ್ಸ್ಟಾಗ್ರಾಂ ಅಕೌಂಟ್ ಹ್ಯಾಕ್ ಆಗಿ, ನನಗೆ ಎಮರ್ಜೆನ್ಸಿ ಇದೆ, ಹಣ ಹಾಕಿ ಎಂಬ ಮೆಸೇಜ್ ಗಳು ಬರ್ತಿದ್ದಿದ್ದು ನಿಮಗೆ ನೆನಪಿರಬಹುದೇನೋ..

ಯಸ್ ಅದೆಲ್ಲಾ ಮಾಡ್ತಿದ್ದಿದ್ದು ಇದೇ ಕಾಂಬೋಡಿಯಾ ಮೂಲದ ಚೀನಿ ಆ್ಯಪ್ ಗ್ಯಾಂಗ್.. ಅದಕ್ಕೆ ಬಳಸಿಕೊಳ್ತಿದ್ದಿದ್ದು ಇದೇ ಭಾರತೀಯ ಮೂಲದ ಅಮಾಯಕ ಯುವಕರನ್ನ.. ಟೂರಿಸ್ಟ್ ವೀಸಾ ಮೂಲಕ ಭಾರತೀಯರನ್ನು ಕರೆತಂದು ಅದನ್ನು ಬಿಸಿನೆಸ್ ವೀಸಾಗೆ ಬದಲಾಯಿಸ್ತಾರೆ.. ಅಲ್ಲಿಂದ ಒಂದು ವರ್ಷ ಕೆಲಸಕ್ಕೆ ತೆರಳಿದ ಈ ಯುವಕರನ್ನ ಬಂಧಿಯಾಗಿಸ್ತಾರೆ. 800 ಡಾಲರ್ ಸಂಬಳದ ಆಸೆ ಹುಟ್ಟಿಸಿ ಭಾರತೀಯ ಅಮಾಯಕ ಯುವಕರನ್ನು ಕರೆದುಕೊಂಡು ಹೋಗ್ತಾರೆ.. ಅಲ್ಲಿ ಅವರನ್ನು ಒತ್ತೆಯಾಳಾಗಿರಿಸಿಕೊಂಡು ಅವರಿಂದಲೇ ಭಾರತೀಯರಿಗೆ ಮೋಸ ಮಾಡಿಸುವ ಕೆಲಸಕ್ಕೆ ಈ ಕುತಂತ್ರಿ ಚೀನಾ ಮುಂದಾಗಿದೆ.

ಸದ್ಯ ಕಾಂಬೋಡಿಯಾದಲ್ಲಿ ಸಿಲುಕಿಕೊಂಡಿರೋ ಯುವಕ ಅಶೋಕ್ ತನ್ನನ್ನು ಭಾರತಕ್ಕೆ ಕರೆತರುವಂತೆ ಮನವಿ ಮಾಡ್ತಿದ್ದಾನೆ. ಪ್ರತಿದಿನ ನರಕ ಯಾತನೆ ಅನುಭವಿಸ್ತಿದ್ದಾನೆ. ಅಶೋಕ್ ಭಾರತಕ್ಕೆ ತೆರಳಬೇಕು ಎಂದಿದಕ್ಕೆ ಆತನ ಕುಟುಂಬಕ್ಕೆ 13 ಲಕ್ಷ ರೂಪಾಯಿ ಕೊಡುವಂತೆ ಡಿಮ್ಯಾಂಡ್ ಮಾಡಿದ್ದಾರೆ. ಕತ್ತಲೆ ಕೋಣೆಯಲ್ಲಿ ಕೂಡಿಟ್ಟು ಆತನಿಗೆ ಕರೆಂಟ್ ಶಾಕ್ ಕೊಡ್ತಿದೆಯಂತೆ..

ಕೊಪ್ಪ ಮೂಲದ ಯುವಕನೊಬ್ಬ ತಾನು ಕಾಂಬೋಡಿಯಾದಲ್ಲಿ ಸಿಲುಕಿಕೊಂಡಿರೋದಾಗಿ ಬಾಳೆಹೊನ್ನೂರಿನ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ.. ಆತ ಹೇಳಿದ ವಿಷಯಗಳು ಅಕ್ಷರಶಃ ಪೊಲೀಸರನ್ನೇ ದಿಗ್ಭ್ರಮೆಗೊಳಗಾಗುವಂತೆ ಮಾಡಿದೆ. ವಿದೇಶದ ಕನಸು ಹೊತ್ತು ತಾಯ್ನಾಡು ಬಿಟ್ಟು ಹೋದ ಯುವಕರು ಇಂದು ಚೀನೀಯರ ಕೈವಶದಲ್ಲಿದ್ದಾರೆ! ಪ್ರತಿನಿತ್ಯ ಯುವಕರಿಗೆ ಡೇಟಿಂಗ್ ಆ್ಯಪ್ ಗಳ ಮೂಲಕ ಮೆಸೇಜ್ ಮಾಡಿ ಹಣ ಕೀಳುವ ಟಾರ್ಗೆಟ್ ಗಳನ್ನು ನೀಡಲಾಗ್ತಿವೆಯಂತೆ.. ದಿನದ ಟಾರ್ಗೆಟ್ ರೀಚ್ ಮಾಡದಿದ್ರೆ ಫೈನ್ ಕೂಡ ಹಾಕಲಾಗುತ್ತಂತೆ.. ಚೀನೀಯರ ಚಿತ್ರಹಿಂಸೆ ಸಹಿಕೊಳ್ಳೋ ಇವ್ರಿಗೆ ತಿಂಗಳ ಕೊನೆಯಲ್ಲಿ ಸಿಕ್ತಿರೋದು ಮಾತ್ರ ಕೇವಲ 15 ಸಾವಿರ ರೂ ಸಂಬಳ.

ಕಾಂಬೋಡಿಯಾದಲ್ಲಿ ಸಿಲುಕಿಕೊಂಡಿರೋ ಯುವಕ ಆಶೋಕನ ತಂದೆ ಈಗಾಗಲೇ ಬಾಳೆಹೊನ್ನೂರು ಪೊಲೀಸರಿಗೆ ತಮ್ಮ ಮಗನನ್ನು ಕರೆಸಿಕೊಡುವಂತೆ ಮನವಿ ಮಾಡಿದ್ದಾರೆ. ಪ್ರಕರಣದ ಗಂಭೀರತೆ ಅರಿತ ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮ್ಟೆ, ಕೊಪ್ಪ DySP ಅನಿಲ್ ಕುಮಾರ್, ಎನ್ ಆರ್ ಪುರ ಇನ್ಸ್ಪೆಕ್ಟರ್ ಗುರು, ಬಾಳೆಹೊನ್ನೂರು PSI ದಿಲೀಪ್, ಈ ಕುರಿತಂತೆ ಸಂಬಂಧಪಟ್ಟವರ ಗಮನಕ್ಕೆ ತರೋ ಪ್ರಯತ್ನ ಮಾಡಿದ್ದಾರೆ. ಇನ್ನಾದ್ರೂ ರಾಜ್ಯ ಹಾಗೂ ಕೇಂದ್ರ ಸರ್ಕಾರ ಈ ಕುರಿತು ಎಚ್ಚೆತ್ತು ಚೀನಾಗೆ ತಕ್ಕ ಪಾಠ ಕಲಿಸ್ಬೇಕಿದೆ.. ಅಲ್ಲಿರುವ ಭಾರತೀಯ ಯುವಕರನ್ನ ಮರಳಿ ಕರೆತರಬೇಕಿದೆ‌‌.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
ಮ್ಯಾಕ್ಸ್ ಸಿನಿಮಾ ಬಗ್ಗೆ ಪ್ರಾಮಾಣಿಕ ವಿಮರ್ಶೆ ತಿಳಿಸಿದ ಯಶ್ ಅಭಿಮಾನಿಗಳು
ಮ್ಯಾಕ್ಸ್ ಸಿನಿಮಾ ಬಗ್ಗೆ ಪ್ರಾಮಾಣಿಕ ವಿಮರ್ಶೆ ತಿಳಿಸಿದ ಯಶ್ ಅಭಿಮಾನಿಗಳು