ಚಿಕ್ಕಮಗಳೂರು: ಶೃಂಗೇರಿ ಶಾರದಾ ಮಠಕ್ಕೆ ನೂತನ ಆಡಳಿತಾಧಿಕಾರಿ ನೇಮಕ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 25, 2024 | 3:44 PM

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾ ಮಠಕ್ಕೆ ನೂತನ ಆಡಳಿತಾಧಿಕಾರಿಯಾಗಿ ಪಿ.ಎ.ಮುರಳಿ ನೇಮಕ ಮಾಡಲಾಗಿದೆ. ಶೃಂಗೇರಿ ಹಿರಿಯ ಜಗದ್ಗುರು ಭಾರತೀ ತೀರ್ಥ ಶ್ರೀಗಳಿಂದ ಮುರುಳಿ ಅವರ ನೇಮಕ ಮಾಡಲಾಗಿದೆ. 1986 ರಲ್ಲಿ ಶೃಂಗೇರಿ ಜಗದ್ಗುರು ಅಭಿನವ ವಿದ್ಯಾತೀರ್ಥ ಶ್ರೀಗಳಿಂದ ಗೌರಿ ಶಂಕರ್​ ಅವರು ಮಠದ ಆಡಳಿತಾಧಿಕಾರಿಯಾಗಿ ಈ ಹಿಂದೆ ನೇಮಕಗೊಂಡಿದ್ದರು.

ಚಿಕ್ಕಮಗಳೂರು: ಶೃಂಗೇರಿ ಶಾರದಾ ಮಠಕ್ಕೆ ನೂತನ ಆಡಳಿತಾಧಿಕಾರಿ ನೇಮಕ
ಶೃಂಗೇರಿ ಶಾರದಾ ಮಠ
Follow us on

ಚಿಕ್ಕಮಗಳೂರು, ಜನವರಿ 25: ಜಿಲ್ಲೆಯ ಶೃಂಗೇರಿ ಶಾರದಾ ಮಠ (Sringeri Sharada Mutt) ಕ್ಕೆ ನೂತನ ಆಡಳಿತಾಧಿಕಾರಿಯಾಗಿ ಪಿ.ಎ.ಮುರಳಿ ನೇಮಕ ಮಾಡಲಾಗಿದೆ. ಶೃಂಗೇರಿ ಹಿರಿಯ ಜಗದ್ಗುರು ಭಾರತೀ ತೀರ್ಥ ಶ್ರೀಗಳಿಂದ ಮುರುಳಿ ಅವರ ನೇಮಕ ಮಾಡಲಾಗಿದೆ. 1986 ರಲ್ಲಿ ಶೃಂಗೇರಿ ಜಗದ್ಗುರು ಅಭಿನವ ವಿದ್ಯಾತೀರ್ಥ ಶ್ರೀಗಳಿಂದ ಗೌರಿ ಶಂಕರ್​ ಅವರು ಮಠದ ಆಡಳಿತಾಧಿಕಾರಿಯಾಗಿ ಈ ಹಿಂದೆ ನೇಮಕಗೊಂಡಿದ್ದರು. 38 ವರ್ಷ ಗೌರಿ ಶಂಕರ್ ಅವರು ಮಠದ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಮುರುಳಿ ಅವರಿಗೆ ಮುಖ್ಯ ಸಲಹೆಗಾರರಾಗಿ ಗೌರಿ ಶಂಕರ್ ಅವರು ಮುಂದುವರೆಯಲಿದ್ದಾರೆ. ಫೆಬ್ರವರಿ 12ಕ್ಕೆ ಮಠದಲ್ಲಿ ಗೌರಿ ಶಂಕರ್​ಗೆ ಅಭಿನಂದನಾ ಸಮಾರಂಭ ನಡೆಯಲಿದೆ.

ಫೆಬ್ರವರಿ 12ಕ್ಕೆ ಕಿರಿಯ ಶ್ರೀ ವಿಧುಶೇಖರ ಶ್ರೀಗಳು ಸನ್ಯಾಸ ಸ್ವೀಕರಿಸಿ 9 ವರ್ಷ. ಹೀಗಾಗಿ ಈ ದಿನದಂದು ಗೌರಿ ಶಂಕರ್ ಸಮರ್ಪಿತ ಸೇವೆಗೆ ಅಭಿನಂದನಾ ಸಮಾರಂಭ ಕೂಡ ನಡೆಯಲಿದೆ.

ಶೃಂಗೇರಿ ಶಾರದಾಮಠದಲ್ಲಿದೆ ಅಯೋಧ್ಯೆ ರಾಮಮಂದಿರ ಪ್ರತಿಕೃತಿ

ಅಯೋಧ್ಯೆಯ ರಾಮ ಮಂದಿರ ಪುನರ್ ಪ್ರತಿಷ್ಠಾಪನಾ ವಿಚಾರವಾಗಿ ಇತ್ತೀಚೆಗೆ ಶಂಕರರ ನಾಲ್ಕು ಪೀಠಗಳಲ್ಲಿ ಮೂರು ಪೀಠಗಳು ಹೋಗೋದಿಲ್ಲ ಅನ್ನೋದನ್ನ ಸ್ಪಷ್ಟಪಡಿಸಿದ್ದರು. ಆದರೆ ಶಂಕರಚಾರ್ಯರು ಸ್ಥಾಪಿಸಿದ ಮೊದಲ ಮಠ ಶೃಂಗೇರಿಯ ಮಠ ಯಾವುದೇ ಸ್ಪಷ್ಟ ಸಂದೇಶ ನೀಡದ ಕಾರಣ ರಾಮ ಮಂದಿರ ಟ್ರಸ್ಟ್ ಹಾಗೂ ಭಕ್ತರಲ್ಲೂ ತೀವ್ರ ಕುತೂಹಲ ಮೂಡಿಸಿತ್ತು.

ಶೃಂಗೇರಿ ಮಠದ ಗುರುವತ್ರಯರು ಅಯೋಧ್ಯೆಗೆ ಹೋಗದಿರೋದನ್ನ ಸ್ಪಷ್ಟಪಡಿಸಿದ್ದು ಮಠದ ಪರವಾಗಿ ಆಡಳಿತಾಧಿಕಾರಿ ಅಯೋಧ್ಯೆಗೆ ತೆರಳಿದ್ದಿರು. ಅಲ್ಲಿಗೆ ಶಂಕರ ಮಠದ ನಾಲ್ಕು ಮಠಗಳು ರಾಮಲಲ್ಲನ ಕಾರ್ಯಕ್ರಮದಿಂದ ದೂರ ಉಳಿದಂತಾಗಿತ್ತು.

ಇದನ್ನೂ ಓದಿ: ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯಲ್ಲಿ ಶೃಂಗೇರಿ ಶ್ರೀ ಬದಲಿಗೆ ಮಠದ ಆಡಳಿತಾಧಿಕಾರಿ ಭಾಗಿ

ಹರಿ ಅಂದರೆ ಮಹಾವಿಷ್ಟು. ವಿಷ್ಣುವಿನ 7ನೇ ಅವತಾರವೇ ಶ್ರೀರಾಮನ ಅವತಾರ. ಶಂಕರಾಚಾರ್ಯರು ಕೂಡ ಶ್ರೀರಾಮನ ಪರಮಭಕ್ತರಾಗಿದ್ದರು. ಶ್ರೀರಾಮನ ಮೇಲೆ ಭಕ್ತಿ-ಭಾವ ಹೊಂದಿದ್ದ ಶಂಕರರು ಸ್ತೋತ್ರಗಳನ್ನ ರಚಿಸಿ ರಾಮನಿಗೆ ಸಮರ್ಪಿಸಿದ್ದಾರೆ. ಅಷ್ಟೇ ಅಲ್ಲದೇ, ಶಂಕರರು ಸ್ಥಾಪಿಸಿದ್ದ ಪೀಠಗಳಲ್ಲಿ ಶ್ರೀರಾಮನ ಆರಾಧನೆ ನಿರಂತರವಾಗಿರಬೇಕೆಂದು ಶಂಕರರೇ ಆದೇಶಿಸಿದ್ದಾರೆ. ಶಂಕರರು ಸ್ಥಾಪಿಸಿದ ಎಲ್ಲಾ ಮಠಗಳಲ್ಲೂ ಶ್ರೀರಾಮಮಂದಿರವಿದೆ. ಶಂಕರ ಪರಂಪರೆಯ ಎಲ್ಲಾ ಮಠಗಳು ಶ್ರೀರಾಮನನ್ನ ಆರಾಧಿಸಿಕೊಂಡು ಬರುತ್ತಿವೆ ಎಂದು ಸ್ಪಷ್ಟನೆ ನೀಡಿದ್ದರು.

ಶ್ರೀರಾಮ ಭಾರತೀಯರ ದೇವರು. ನಮ್ಮ ರಾಮ ನಮ್ಮ ಹೆಮ್ಮೆ. ದೇಶದ ಹೆಗ್ಗುರುತು. ಅಸ್ಮಿತೆ. ಅಯೋಧ್ಯೆಯಲ್ಲಿ ಶ್ರೀರಾಮನ ಪುರಾತನ ದೇಗುಲವಿತ್ತು. ಆದರೆ, ವಿದೇಶಿ ಆಕ್ರಮಣದಿಂದ ಅದು ನಾಶವಾಗಿತ್ತು. ಆದರೆ, 500 ವರ್ಷದ ತ್ಯಾಗ, ಹೋರಾಟ, ಸಮರ್ಪಣಾ ಮನೋಭಾವದಿಂದ ಅದೇ ಸ್ಥಳದಲ್ಲಿ ದೇಗುಲ ನಿರ್ಮಾಣ ನಮ್ಮ ಹೆಮ್ಮೆ ಎಂದು ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:29 pm, Thu, 25 January 24