ಚಿಕ್ಕಮಗಳೂರು: ರೋಡ್ ಶೋಗೆ ಗ್ರಾಮಸ್ಥರನ್ನ ಕರೆದೊಯ್ದು ಹಣ ಕೊಡದಿದ್ದಕ್ಕೆ ಮುಖಂಡನನ್ನ ಮನಸ್ಸೋ ಇಚ್ಛೆ ಥಳಿಸಿದ ಮಹಿಳೆ

|

Updated on: Apr 21, 2023 | 9:33 AM

ಗ್ರಾಮದ ಮುಖಂಡನೊಬ್ಬ ಹಣ ಕೊಡುವುದಾಗಿ ನಂಬಿಸಿ ಪಕ್ಷೇತರ ಅಭ್ಯರ್ಥಿ ಗೋಪಿಕೃಷ್ಣ ಎಂಬುವವರ ರೋಡ್ ಶೋಗೆ ಕರೆದೊಯ್ದು ಹಣ ಕೊಟ್ಟಿಲ್ಲ. ಇದೇ ಕಾರಣಕ್ಕೆ ಗ್ರಾಮದ ಮಹಿಳೆಯೊಬ್ಬರು ಆತನನ್ನ ಅಟ್ಟಾಡಿಸಿ ಹೊಡೆದಿರುವ ಘಟನೆ ತರೀಕೆರೆ ತಾಲೂಕಿನ ಪಿರಮೇನಹಳ್ಳಿಯಲ್ಲಿ ನಡೆದಿದೆ.

ಚಿಕ್ಕಮಗಳೂರು: ರೋಡ್ ಶೋಗೆ ಗ್ರಾಮಸ್ಥರನ್ನ ಕರೆದೊಯ್ದು ಹಣ ಕೊಡದಿದ್ದಕ್ಕೆ ಮುಖಂಡನನ್ನ ಮನಸ್ಸೋ ಇಚ್ಛೆ ಥಳಿಸಿದ ಮಹಿಳೆ
ಚಿಕ್ಕಮಗಳೂರು
Follow us on

ಚಿಕ್ಕಮಗಳೂರು: ವಿಧಾನಸಭೆ ಚುನಾವಣೆ(Karnataka Assembly Election)ಗೆ ಕೆಲವೇ ದಿನಗಳು ಬಾಕಿಯಿದ್ದು, ಉಭಯ ಪಕ್ಷಗಳು ಅಬ್ಬರದ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಅದರಂತೆ ಗ್ರಾಮದ ಮುಖಂಡನೊಬ್ಬ ಹಣ ಕೊಡುವುದಾಗಿ ನಂಬಿಸಿ ಪಕ್ಷೇತರ ಅಭ್ಯರ್ಥಿ ಗೋಪಿಕೃಷ್ಣ ಎಂಬುವವರ ರೋಡ್ ಶೋಗೆ ಕರೆದೊಯ್ದು ಹಣ ಕೊಟ್ಟಿಲ್ಲ. ಇದೇ ಕಾರಣಕ್ಕೆ ಗ್ರಾಮದ ಮಹಿಳೆಯೊಬ್ಬರು ಆತನನ್ನ ಅಟ್ಟಾಡಿಸಿ ಹೊಡೆದಿರುವ ಘಟನೆ ತರೀಕೆರೆ ತಾಲೂಕಿನ ಪಿರಮೇನಹಳ್ಳಿಯಲ್ಲಿ ನಡೆದಿದೆ.

ಬೈಕ್ ಮೇಲೆ ಕುಳಿತರು ಬಿಡದೆ ಮನಸ್ಸೋ ಇಚ್ಛೆ ಥಳಿಸಿದ ಮಹಿಳೆ

ಹೌದು ನಿನ್ನೆ(ಏ.20) ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಪಕ್ಷೇತರ ಅಭ್ಯರ್ಥಿ ಗೋಪಿಕೃಷ್ಣ ಎಂಬುವವರ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ರೋಡ್ ಶೋ ಮಾಡಿದ್ದು, ಗ್ರಾಮದ ಜನರಿಗೆ ಹಣ ಕೊಡುವುದಾಗಿ ಹೇಳಿ ಕರೆದುಕೊಂಡು ಹೋಗಿ ಬಳಿಕ ಹಣ ನೀಡಿಲ್ಲ.​ ಇದಕ್ಕೆ ಕೋಪಗೊಂಡ ಗ್ರಾಮಸ್ಥರು ಮುಖಂಡ ಮಂಜು ಮೇಲೆ ಹಲ್ಲೆ ಪರಸ್ಪರ ಬಡಿದಾಡಿಕೊಂಡು ಹಲ್ಲೆ ಮಾಡಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ