ಚಾರ್ಮಾಡಿ ಘಾಟ್​ನ ಆಲೇಖಾನ್ ಬಳಿ ತೈಲ ಸಾಗಿಸುತ್ತಿದ್ದ ಲಾರಿ ಪಲ್ಟಿ; ಆತಂಕದ ವಾತಾವರಣ ಸೃಷ್ಟಿ

TV9 Digital Desk

| Edited By: guruganesh bhat

Updated on:Sep 25, 2021 | 11:05 PM

ಬಣಕಲ್ ಠಾಣೆಯ ಪೋಲಿಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾರಂಭಿಸಿದ್ದಾರೆ.

ಚಾರ್ಮಾಡಿ ಘಾಟ್​ನ ಆಲೇಖಾನ್ ಬಳಿ ತೈಲ ಸಾಗಿಸುತ್ತಿದ್ದ ಲಾರಿ ಪಲ್ಟಿ; ಆತಂಕದ ವಾತಾವರಣ ಸೃಷ್ಟಿ
ಅಪಘಾತಕ್ಕೀಡಾದ ಲಾರಿ

ಚಿಕ್ಕಮಗಳೂರು: ಚಾರ್ಮಾಡಿ ಘಾಟ್​ನ ಆಲೇಖಾನ್ ಬಳಿ 8 ಸಾವಿರ ಲೀಟರ್ ಪೆಟ್ರೋಲ್, 4 ಸಾವಿರ ಲೀಟರ್ ಡೀಸೆಲ್ ಸಾಗಿಸುತ್ತಿದ್ದ ಟ್ಯಾಂಕರ್​ ಒಂದು ಪಲ್ಟಿಯಾಗಿದೆ. ಟ್ಯಾಂಕರ್ ಮಂಗಳೂರಿನಿಂದ ಮಾಗುಂಡಿಗೆ ತೆರಳುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಪಲ್ಟಿಯಾದ ಟ್ಯಾಂಕರ್​ನಿಂದ ತೈಲ ಸೋರಿಕೆಯಾಗುತ್ತಿದ್ದು ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಬಣಕಲ್ ಠಾಣೆಯ ಪೋಲಿಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾರಂಭಿಸಿದ್ದಾರೆ.

ಚಿಕ್ಕಮಗಳೂರು; ಎರಡೂ ಕಣ್ಣು ಕಾಣದ ಕಾಡುಕೋಣದ ರಕ್ಷಣೆ ಜಿಲ್ಲೆಯ ಆಲ್ದೂರು ವಲಯದ ಸತ್ತಿಹಳ್ಳಿ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಸ್ಥಳೀಯ ಕಾಫಿತೋಟಗಳಲ್ಲಿ ಎರಡೂ ಕಣ್ಣು ಕಾಣದೇ ಅಲೆದಾಡುತ್ತಿದ್ದ ಬೃಹತ್ ಕಾಟಿಯನ್ನು (ಕಾಡುಕೋಣ) ರಕ್ಷಣೆ ಮಾಡಿ ಮರಳಿ ಅರಣ್ಯಕ್ಕೆ ಬಿಡಲಾಗಿದೆ. ಕಾಫಿ ತೋಟಗಳಲ್ಲಿ ಮೊಕ್ಕಾಂ ಹೂಡಿದರೆ ಬೇಟೆಗಾರರ ಆಹಾರ ಆಗಬಹುದು ಎಂದು ಕುರುಡು ಕಾಡುಕೋಣವನ್ನು ಸೆರೆ ಹಿಡಿಯುವಂತೆ ಆಗ್ರಹ ಕೇಳಿಬಂದಿತ್ತು. ಸ್ಥಳೀಯ ಕಾಫಿ ತೋಟಗಳ ಮಾಲೀಕರ ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ವನ್ಯಜೀವಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಯವರ ಅನುಮತಿ ಪಡೆದುಕೊಂಡು ಕುರುಡು ಕಾಟಿಯನ್ನು ರಕ್ಷಣೆ ಮಾಡಲಾಗಿದೆ.

ಶಿವಮೊಗ್ಗ ಸಿಂಹ ಧಾಮದ ನುರಿತ ವನ್ಯಜೀವಿ ವೈದ್ಯ ಸುಜಿತ್ ಹಾಗೂ ಭದ್ರಾ ವನ್ಯಜೀವಿ ವೈದ್ಯ ಯಶಸ್ ಒಡೆಯರ್ ತಂಡ ಕಾರ್ಯಾಚರಣೆ ನಡೆಸಿ ಅರವಳಿಕೆ ಮದ್ದು ನೀಡಿ ಕಾಡುಕೋಣ ರಕ್ಷಣೆ ಮಾಡಿದರು. ಕಾಫಿ ತೋಟದಲ್ಲಿ ರಕ್ಷಣೆ ಮಾಡಿದ ಕಾಟಿಯನ್ನ ರೆಸ್ಕ್ಯೂ ಕಂಟೈನರ್ ಮೂಲಕ ಲಾರಿಯಲ್ಲಿ ತೆಗೆದುಕೊಂಡು ಹೋಗಿ ಮರಳಿ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು. ಈ ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ರಾಂತಿ, ಗೌರವ ವನ್ಯಜೀವಿ ಪರಿಪಾಲಕ ವೀರೇಶ್ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.

ಇದನ್ನೂ ಓದಿ: 

ಚಿಕ್ಕಮಗಳೂರು: ಮಾರುಕಟ್ಟೆಯಲ್ಲಿ ಬೆಲೆ ಕುಸಿತ; ಟ್ರ್ಯಾಕ್ಟರ್​ನಿಂದ 2 ಎಕರೆ ಉಳುಮೆ ಮಾಡಿ ಈರುಳ್ಳಿ ಬೆಳೆ ನಾಶ

ಚಿಕ್ಕಮಗಳೂರು: ಬೆಳೆ ಉಳಿಸುವಂತೆ ಕೋರಿ ಗಣೇಶನಿಗೆ ಜೀವಂತ ಇಲಿ ಸಮರ್ಪಿಸಿದ ಭಕ್ತ

(Chikkamagaluru Charmadi Ghat oil tanker accident)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada