ಚಿಕ್ಕಮಗಳೂರಿನ ಕಾಫಿ ಎಸ್ಟೇಟ್​ನಲ್ಲಿ 50ಕ್ಕೂ ಅಧಿಕ ಕಾಡುಕೋಣಗಳು; ಕೊಡಗಿನಲ್ಲಿ 15 ಅಡಿ ಉದ್ದದ ಹೆಬ್ಬಾವು ಸೆರೆ!

ಚಿಕ್ಕಮಗಳೂರಿನ ಕಾಫಿ ಎಸ್ಟೇಟ್​ನಲ್ಲಿ 50ಕ್ಕೂ ಅಧಿಕ ಕಾಡುಕೋಣಗಳು; ಕೊಡಗಿನಲ್ಲಿ 15 ಅಡಿ ಉದ್ದದ ಹೆಬ್ಬಾವು ಸೆರೆ!
ಕಾಡುಕೋಣಗಳ ಹಿಂಡು


ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಭೂತನಕಾಡು ಎಂಬಲ್ಲಿ ಕಾಫಿ ಎಸ್ಟೇಟಿಗೆ ಕಾಡು ಕೋಣಗಳ ಹಿಂಡು ನುಗ್ಗಿದೆ. ಭೂತನಕಾಡುವಿನಲ್ಲಿ ಹಿಂಡು ಹಿಂಡು ಕಾಡುಕೋಣಗಳು ಪ್ರತ್ಯಕ್ಷವಾಗಿದೆ. ಒಂದೇ ಕಡೆ ಸುಮಾರು 50ಕ್ಕೂ ಹೆಚ್ಚು ಕಾಡುಕೋಣಗಳು ಕಾಣಿಸಿಕೊಂಡಿವೆ. ಸಿದ್ದಗಂಗಾ ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣಗಳು ಕಾಣಿಸಿಕೊಂಡಿದ್ದು ಅಲ್ಲಿನ ಕಾರ್ಮಿಕರು ಹಾಗೂ ಸ್ಥಳೀಯ ಜನರು ಆತಂಕಗೊಂಡಿದ್ದಾರೆ. ಕಾಡು ಪ್ರಾಣಿಗಳ ಓಡಾಟದಿಂದ ಕಾಫಿ, ಮೆಣಸು ಬೆಳೆಗಳಿಗೆ ಹಾನಿ ಆಗಿದೆ.

ಕೊಡಗಿನಲ್ಲಿ‌ಬೃಹತ್ ಹೆಬ್ಬಾವು ಸೆರೆ
ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸಮೀಪದ ತೂಬನ ಕೊಲ್ಲಿ ಎಸ್ಟೇಟ್ ನಲ್ಲಿ ಬೃಹತ್ ಹೆಬ್ಬಾವು ಸೆರೆ ಹಿಡಿಯಲಾಗಿದೆ. ತೋಟದ ಕೆಲಸ ಮಾಡುತ್ತಿದ್ದಾಗ ಹೆಬ್ಬಾವು ಕಾಣಿಸಿಕೊಂಡಿದೆ. ಬಳಿಕ, ಅರಣ್ಯ ಇಲಾಖೆ ಸಿಬ್ಬಂದಿಯ ಸಹಾಯದಿಂದ ಹಾವು ರಕ್ಷಣೆ ಮಾಡಲಾಗಿದೆ. 15 ಅಡಿ ಉದ್ದದ ಹಾವು ಸೆರೆ ಆಗಿದೆ.

ಚಿಕ್ಕಬಳ್ಳಾಪುರ: ವೈರಲ್ ಆಗಿರುವ ದೆವ್ವದ ವಿಡಿಯೋ ಗ್ರಾಮದ್ದೇ ಅಲ್ಲ
ಇಲ್ಲಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ದೇವ್ವ ಇರುವಿಕೆಯ ವದಂತಿ ಹಿನ್ನಲೆ ಗ್ರಾಮಸ್ಥ ವೇಣು ಟಿವಿ9ಗೆ ಹೇಳಿಕೆ ನೀಡಿದ್ದಾರೆ. ವೈರಲ್ ಆಗಿರುವ ವಿಡಿಯೊ ಗ್ರಾಮದ್ದೆ ಅಲ್ಲ. ದೆವ್ವ ಇದೆಯೊ ಇಲ್ಲವೊ ಗೊತ್ತಿಲ್ಲ. ಆದರೆ, ಈ ವಿಚಾರದಲ್ಲಿ ಕಿಡಿಗೇಡಿಗಳು ಸುಮ್ಮನೆ ವದಂತಿ ಹಬ್ಬಿಸಿದ್ದಾರೆ. ರೆಕಾರ್ಡ್ ಆಗಿರುವ ಸ್ಥಳವೆ ಗ್ರಾಮದಲ್ಲಿ ಇಲ್ಲ. ಗ್ರಾಮಸ್ಥರನ್ನು ಹೆದರಿಸಲು ವಿಡಿಯೊ ವೈರಲ್ ಮಾಡ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: ಮಾರುಕಟ್ಟೆಯಲ್ಲಿ ಬೆಲೆ ಕುಸಿತ; ಟ್ರ್ಯಾಕ್ಟರ್​ನಿಂದ 2 ಎಕರೆ ಉಳುಮೆ ಮಾಡಿ ಈರುಳ್ಳಿ ಬೆಳೆ ನಾಶ

ಇದನ್ನೂ ಓದಿ: ಕೊಡಗು: 80 ವರ್ಷದಿಂದ ವಾಸವಿದ್ದ ಮನೆ ತೆರವು; ಬೀದಿಗೆ ಬಿದ್ದ ಬಡ ಕುಟುಂಬ

Read Full Article

Click on your DTH Provider to Add TV9 Kannada