ಚಿಕ್ಕಮಗಳೂರು, ನ.10: ನಗರಸಭೆ (Chikkamagaluru City Municipal Council) ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ (Varasiddhi Venugopal) ವಿರುದ್ಧ ಇಂದು ಬಿಜೆಪಿ ಅವಿಶ್ವಾಸ ಮಂಡನೆ ಮಾಡಿತು. ಆದರೆ, ಒಂದೇ ಒಂದು ಮತ ಕೂಡ ಅವಿಶ್ವಾಸಕ್ಕೆ ಬೀಳದ ಹಿನ್ನೆಲೆ ವೇಣುಗೋಪಾಲ್ ಅವರು ವಿಶ್ವಾಸಮತ ಗೆದ್ದು ಬೀಗಿದರು. ಇದು ಬಿಜೆಪಿಗೆ ತೀವ್ರ ಮುಖಭಂಗ ಉಂಟು ಮಾಡಿದೆ.
ಸ್ವಪಕ್ಷದದಿಂದಲೇ ಎದುರಾದ ಅವಿಶ್ವಾಸ ನಿರ್ಣಯದಲ್ಲಿ ಹಾಲಿ ಅಧ್ಯಕ್ಷ ವೇಣುಗೋಪಾಲ್ ಅವರು ಗೆದ್ದಿದ್ದಾರೆ. ಮೂರು ತಿಂಗಳಿನಿಂದ ನಾನಾ ರೀತಿಯ ಹೈಡ್ರಾಮಕ್ಕೆ ನಗರಸಭೆ ಸಾಕ್ಷಿಯಾಗಿತ್ತು. ಎರಡು ಬಾರಿ ರಾಜೀನಾಮೆ ನೀಡಿ ಬಳಿಕ ವಾಪಸ್ ಪಡೆದಿದ್ದ ವೇಣುಗೋಪಾಲ್ ಅವರನ್ನು ಪಕ್ಷದಿಂದ ಬಿಜೆಪಿ ಅಮಾನತು ಮಾಡಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ಕಾಡಾನೆ ದಾಳಿಗೆ ಮಹಿಳೆ ಸಾವು, ಮೃತರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ನೀಡಲು ಸಿದ್ದರಾಮಯ್ಯ ಸೂಚನೆ
ಅಲ್ಲದೆ, ಇಂದು ಅವಿಶ್ವಾಸ ಮಂಡನೆ ಮಾಡಿದ ಬಿಜೆಪಿಗೆ ಮುಖಭಂಗ ಉಂಟಾಗಿದೆ. 30 ತಿಂಗಳ ಆಡಳಿತಕ್ಕೆ ಬಿಜೆಪಿಯು 18-12 ತಿಂಗಳಿಗೆ ಅಧಿಕಾರ ಹಂಚಿಕೆ ಮಾಡಿಕೊಂಡಿತ್ತು. ಮೊದಲ ಅವಧಿಗೆ ವೇಣುಗೋಪಾಲ್ ಅಧ್ಯಕ್ಷರಾಗಿದ್ದರು. ಈಗ ರಾಜೀನಾಮೆ ನೀಡದೆ ವೇಣುಗೋಪಾಲ್ ಅವರು ಆಟ ಆಡಿಸುತ್ತಿದ್ದಾರೆ.
ಇತ್ತ, ಸೋಲಿನ ಮುನ್ಸೂಚನೆ ಹಿನ್ನೆಲೆ ಸಂಸದೆ ಶೋಭಾ ಕರಂದ್ಲಾಜೆ, ವಿಧಾನಪರಿಷತ್ ಸದಸ್ಯ ಪ್ರಾಣೇಶ್ ಅವರು ಜಿಲ್ಲಾ ಕೇಂದ್ರದಲ್ಲಿ ನೆಲೆಸಿದ್ದಾರೆ. ಆ ಮೂಲಕ ಅವಿಶ್ವಾಸ ಮತ ಚಲಾವಣೆಗೆ ಗೈರಾಗಿದ್ದಾರೆ. ಇತ್ತ ಕಾಂಗ್ರೆಸ್ನ ನಗರಸಭಾ ಸದಸ್ಯರು, ಹಾಲಿ ಶಾಸಕ ಹೆಚ್.ಡಿ. ತಮ್ಮಯ್ಯ ಭಾಗಿಯಾಗಿದ್ದಾರೆ.
ಒಟ್ಟು 35 ಸದಸ್ಯ ಬಲದ ನಗರಸಭೆಯಲ್ಲಿ ಬಿಜೆಪಿ 17, ಜೆಡಿಎಸ್ 3, ಎಸ್ಡಿಪಿಐ 1, ಕಾಂಗ್ರೆಸ್ 12, ಪಕ್ಷಾಂತರ 1, ಶಾಸಕರು 1, ಬಂಡಾಯ ಅಧ್ಯಕ್ಷರ 1 ಮತ ಇದ್ದು, ಅವಿಶ್ವಾಸ ಮತಗಳ ವಿರುದ್ಧ ಒಂದು ಮತವೂ ಬೀಳದ ಹಿನ್ನೆಲೆ ಅಧ್ಯಕ್ಷ ವೇಣುಗೋಪಾಲ್ ಅವರು ವಿಶ್ವಾಸ ಮತ ಗೆದ್ದಿದ್ದಾರೆ.
ಇತ್ತ, ತೀವ್ರ ಮುಖಭಂಗ ಅನುಭವಿಸಿದ ಬಿಜೆಪಿ, ವರಸಿದ್ಧಿ ವೇಣುಗೋಪಾಲ್ ಕಚೇರಿ ಮುಂದೆ ಕುಳಿತು ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿತು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:30 pm, Fri, 10 November 23