ಚಿಕ್ಕಮಗಳೂರು: ಕಾಡಾನೆ ದಾಳಿಗೆ ಮಹಿಳೆ ಸಾವು, ಮೃತರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ನೀಡಲು ಸಿದ್ದರಾಮಯ್ಯ ಸೂಚನೆ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಮಹಿಳೆ ಸಾವು ಕೇಸ್​​​​ಗೆ ಸಂಬಂಧಿಸಿದ್ದಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, 15 ಲಕ್ಷ ರೂ. ಪರಿಹಾರ ನೀಡಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆನೆ ದಾಳಿ ಸಂಬಂಧ ಪ್ರತಿಭಟನಾಕಾರರ ಜೊತೆ ಮಾತನಾಡಿದ್ದೇನೆ. ಆನೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಲಾಗುತ್ತೆ. ಆನೆಗಳನ್ನು ಕಾಡಿಗೆ ಓಡಿಸುವ ಪ್ರಕ್ರಿಯೆ ಆರಂಭಿಸುತ್ತೇವೆ ಎಂದು ಹೇಳಿದ್ದಾರೆ.

ಚಿಕ್ಕಮಗಳೂರು: ಕಾಡಾನೆ ದಾಳಿಗೆ ಮಹಿಳೆ ಸಾವು, ಮೃತರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ನೀಡಲು ಸಿದ್ದರಾಮಯ್ಯ ಸೂಚನೆ
ಸಿಎಂ ಸಿದ್ದರಾಮಯ್ಯ
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಗಂಗಾಧರ​ ಬ. ಸಾಬೋಜಿ

Updated on:Nov 08, 2023 | 4:23 PM

ಚಿಕ್ಕಮಗಳೂರು, ನವೆಂಬರ್​​​​​​​ 08: ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಇಂದು ಕಾರ್ಮಿಕ ಮಹಿಳೆ ಮೀನಾ (45) ಮೃತ ಪಟ್ಟಿದ್ದಾರೆ. ಈ ಕುರಿತಾಗಿ ಮೂಡಿಗೆರೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, (Siddaramaiah) ಕೂಡಲೇ ಮೃತರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ನೀಡಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆನೆ ದಾಳಿ ಸಂಬಂಧ ಪ್ರತಿಭಟನಾಕಾರರ ಜೊತೆ ಮಾತನಾಡಿದ್ದೇನೆ. ಆನೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಲಾಗುತ್ತೆ. ಆನೆಗಳನ್ನು ಕಾಡಿಗೆ ಓಡಿಸುವ ಪ್ರಕ್ರಿಯೆ ಆರಂಭಿಸುತ್ತೇವೆ. ಆನೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಲಾಗುತ್ತೆ. 5 ದಿನದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಚಿಕ್ಕಮಗಳೂರಿಗೆ ಬರುತ್ತಾರೆ ಎಂದು ಹೇಳಿದ್ದಾರೆ.

ಬಿಜೆಪಿ ಪ್ರಯತ್ನ ವಿಫಲವಾಗುತ್ತೆ

ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಸೆಳೆಯುವ ಬಗ್ಗೆ ಗುಪ್ತಚರ ಮಾಹಿತಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಗುಪ್ತಚರ ಇಲಾಖೆ ನನ್ನ ಬಳಿಯೇ ಇರುವುದು, ನಿಮಗೆ ಯಾರು ಹೇಳಿದ್ದು. ಯಾರೇ ಸಂಪರ್ಕ ಮಾಡಿದರೂ ನಮ್ಮ ಶಾಸಕರು ಗಟ್ಟಿಯಾಗಿದ್ದಾರೆ. ಬಿಜೆಪಿ ಪ್ರಯತ್ನ ವಿಫಲವಾಗುತ್ತೆ ಎಂದಿದ್ದಾರೆ.

ಇದನ್ನೂ ಓದಿ: ಪಕ್ಷಕ್ಕೆ ಬರುವಾಗ ಬಿಜೆಪಿಯವರು ಜಾಮೂನು ಕೊಡುತ್ತಾರೆ, ಅಧಿಕಾರ ಮುಗಿದ ಮೇಲೆ ವಿಷ ಕೊಡ್ತಾರೆ: ಸ್ವಪಕ್ಷದ ವಿರುದ್ಧ ಗುಡುಗಿದ ಸೋಮಶೇಖರ್

ಕಿಯೋನಿಕ್ಸ್ ಎಂಡಿ ವಿಚಾರವಾಗಿ ಮಾತನಾಡಿದ ಅವರು, ಕಡ್ಡಾಯ ರಜೆ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಟ್ವೀಟ್​ 

ಡಿ.ಬಿ.ಚಂದ್ರೇಗೌಡರ ಸಾವಿನಿಂದ ರಾಜ್ಯಕ್ಕೆ ನಷ್ಟವಾಗಿದೆ

ಡಿ.ಬಿ.ಚಂದ್ರೇಗೌಡರ ಅಂತಿಮ ದರ್ಶನದ ಬಳಿಕ ಪ್ರತಿಕ್ರಿಯಿಸಿದ್ದು, ಚಂದ್ರೇಗೌಡ ಒಳ್ಳೆ ಸ್ಪೀಕರ್ ಎಂದು ಪ್ರಶಂಸೆ ಪಡೆದುಕೊಂಡಿದ್ದರು. ಯಾಕೆಂದ್ರೆ ಆವತ್ತು ಸ್ಪೀಕರ್ ಆಗಿ ಕೆಲಸ ಮಾಡುವುದು ಬಹಳ ಕಷ್ಟ ಇತ್ತು. ಬಿಜೆಪಿ ಬೆಂಬಲ ಪಡೆದು ರಾಮಕೃಷ್ಣ ಹೆಗ್ಡೆ ಸಿಎಂ ಆಗಿದ್ದರು. ಚಂದ್ರೇಗೌಡ ಸ್ಪೀಕರ್ ಆಗಿ ಚಾಕಚಕ್ಯತೆಯಿಂದ ಕೆಲಸ ಮಾಡಿದ್ದರು ಎಂದರು.

ಇದನ್ನೂ ಓದಿ: ಅಗಲಿದ ಡಿಬಿ ಚಂದ್ರೇಗೌಡರಿಗೆ ಅಂತಿಮ ನಮನ ಸಲ್ಲಿಸುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವುಕರಾದರು

ಆ ಮೇಲೆ ಜನತಾ ಪಾರ್ಟಿಯಲ್ಲಿ ಬಹಳ ದಿನ ನಮ್ಮ ಜೊತೆಯಲ್ಲಿ ಇದ್ದರು. ಮತ್ತೆ ಕಾಂಗ್ರೆಸ್ ಸೇರಿ ಎಂ.ಎಲ್.ಎ. ಹಾಗೂ ಮಂತ್ರಿ ಆಗಿದ್ದರು. ಅವರು ರಾಜಕೀಯ ಆಗಿ ನಾಲ್ಕು ಸದನದಲ್ಲೂ ಸದಸ್ಯರಾಗಿದ್ದರು. ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್ 4 ಸದನದಲ್ಲೂ ಸದಸ್ಯರಾಗಿದ್ದರು. ಆ ರೀತಿ ನಾಲ್ಕು ಸದನದಲ್ಲೂ ಸದಸ್ಯರಾಗುವುದು ತೀರಾ ಅಪರೂಪ ಎಂದು ಹೇಳಿದ್ದಾರೆ.

ಪ್ರಜಾಪ್ರಭುತ್ವದ ನಾಲ್ಕು ವೇದಿಕೆಯಲ್ಲೂ ಇದ್ದರು. 87 ವರ್ಷದ ಅವರು ನಮ್ಮನ್ನ ಅಗಲಿದ್ದಾರೆ. ಅವರ ಸಾವಿನಿಂದ ರಾಜ್ಯಕ್ಕೆ ನಷ್ಟವಾಗಿದೆ. ಅವರ ಕುಟುಂಬಕ್ಕೆ ದೇವರು ನಷ್ಟ ಭರಿಸುವ ಶಕ್ತಿ ನೀಡಲಿ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:02 pm, Wed, 8 November 23

ಮುಸ್ಲಿಮರಿಗೆ ಮತದಾನದ ಹಕ್ಕು: ಸ್ವಾಮೀಜಿ ಹೇಳಿಕೆಗೆ ಮಹದೇವಪ್ಪ ಗರಂ
ಮುಸ್ಲಿಮರಿಗೆ ಮತದಾನದ ಹಕ್ಕು: ಸ್ವಾಮೀಜಿ ಹೇಳಿಕೆಗೆ ಮಹದೇವಪ್ಪ ಗರಂ
ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ
ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ
6,6,6,6,6: RCB ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಸಿಡಿಲಬ್ಬರ ಶುರು
6,6,6,6,6: RCB ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಸಿಡಿಲಬ್ಬರ ಶುರು
Daily Devotional: ಪುಣ್ಯಕ್ಷೇತ್ರಗಳಿಗೆ ತೆರಳುವಾಗ ಅಪಘಾತವಾದರೆ ಏನರ್ಥ
Daily Devotional: ಪುಣ್ಯಕ್ಷೇತ್ರಗಳಿಗೆ ತೆರಳುವಾಗ ಅಪಘಾತವಾದರೆ ಏನರ್ಥ
Daily Horoscope: ಈ ರಾಶಿಯವರ ವ್ಯಾಪಾರದ ತೊಂದರೆಗಳು ನಿವಾರಣೆಯಾಗುತ್ತದೆ
Daily Horoscope: ಈ ರಾಶಿಯವರ ವ್ಯಾಪಾರದ ತೊಂದರೆಗಳು ನಿವಾರಣೆಯಾಗುತ್ತದೆ
ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್