ಇಬ್ಬರನ್ನು ಬಲಿ ಪಡೆದ ಒಂಟಿ ಸಲಗ ಸೆರೆಗೆ ಸರ್ಕಾರ ಆದೇಶ: ಬೇರೆ-ಬೇರೆ ಶಿಬಿರಗಳಿಂದ ಬಂದ ಗಜಪಡೆ

ಚಿಕ್ಕಮಗಳೂರಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳ ದಾಂಧಲೆ ಜನರು ಕಂಗಾಲಾಗಿದ್ದಾರೆ. ಅಲ್ಲದೇ ಒಂಟಿ ಸಲಗವೊಂದು ಈಗಾಗಲೇ ಎರಡು ಜೀವಗಳನ್ನು ಬಲಿ ಪಡೆದುಕೊಂಡಿದೆ. ಹೀಗಾಗಿ ಸರ್ಕಾರ ಆ ಆನೆ ಸೆರೆ ಹಿಡಿಯಲು ಆದೇಶಿಸಿದೆ. ಇದರ ಬೆನ್ನಲ್ಲೇ ಅರಣ್ಯ ಇಲಾಖೆ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದು, ಒಂಟಿ ಸಲಗ ಸೆರೆ ಹಿಡಿಯಲು ಕಾರ್ಯಚರಣೆಗಳಿದಿದ್ದಾರೆ.

ಇಬ್ಬರನ್ನು ಬಲಿ ಪಡೆದ ಒಂಟಿ ಸಲಗ ಸೆರೆಗೆ ಸರ್ಕಾರ ಆದೇಶ: ಬೇರೆ-ಬೇರೆ ಶಿಬಿರಗಳಿಂದ ಬಂದ ಗಜಪಡೆ
ಕಾರ್ಯಚರಣೆಗೆ ಬಂದ ಆನೆಗಳು
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ರಮೇಶ್ ಬಿ. ಜವಳಗೇರಾ

Updated on: Nov 09, 2023 | 11:47 AM

ಚಿಕ್ಕಮಗಳೂರು, (ನವೆಂಬರ್ 09): ಭುವನೇಶ್ವರಿ ತಂಡದಿಂದ ಬೇರ್ಪಟ್ಟಿರುವ ಒಂಟಿ ಸಲಗ (wild elephant) ಈಗಾಗಲೇ ಇಬ್ಬರನ್ನು ಬಲಿ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆ ಆನೆ ಸೆರೆಹಿಡಿಯಲು ಸರ್ಕಾರ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ವಿವಿಧ ಶಿಬಿರಗಳ ಆನೆಗಳ ಮೂಲಕ ಕಾರ್ಯಚರಣೆ ನಡೆಸಿದ್ದಾರೆ. ಸಕ್ರೇಬೈಲು ಆನೆ ಬಿಡಾರದಿಂದ ಸೋಮಣ್ಣ, ಆಲೆ, ಬಹಾದ್ದೂರ್ ಎನ್ನುವ ಆನೆಗಳು ಹಾಗೂ ಮಡಿಕೇರಿಯ ದುಬಾರೆ ಆನೆ ಶಿಬಿರದಿಂದ ನಾಲ್ಕು ಆನೆಗಳಿಂದ ಎರಡು ತಂಡಗಳಾಗಿ ಕಾಡಾನೆ ಸ್ಥಳಾಂತರ , ಸೆರೆ ಹಿಡಿಯಲು ಚಿಕ್ಕಮಗಳೂರು ವಲಯ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಚರಣೆ ಆರಂಭಿಸಿದ್ದು, ಸಕ್ರೇಬೈಲ್ ಆನೆ ಶಿಬಿರದ ಅರಿವಳಿಕೆ ತಜ್ಞ ಡಾ: ವಿನಯ್ ಆಗಮಿಸಿದ್ದಾರೆ.

ಭುವನೇಶ್ವರಿ ಹೆಸರಿನ 7 ಕಾಡಾನೆ ಹಿಂಡು ಚಿಕ್ಕಮಗಳೂರು ತಾಲೂಕಿನ 20ಕ್ಕೂ ಅಧಿಕ ಗ್ರಾಮದಲ್ಲಿ ದಾಂಧಲೆ ಮಾಡಿದ್ದವು. ಅಲ್ಲದೇ ಭುವನೇಶ್ವರಿ ತಂಡದಿಂದ ಬೇರ್ಪಟ್ಟಿರುವ ಒಂಟಿ ಸಲಗ ಇಬ್ಬರನ್ನು ಬಲಿ ಪಡೆದುಕೊಂಡಿತ್ತು. ಚಿಕ್ಕಮಗಳೂರು ನಗರದಿಂದ 2ಕಿ.ಮೀ ದೂರದಲ್ಲಿರುವ ಮತ್ತಾವರ ಗ್ರಾಮದಲ್ಲಿ ಕಾಡಾನೆ ಹಿಂಡು ಬೀಡುಬಿಟ್ಟಿದ್ದು, ಮೂರು ತಿಂಗಳಿನಿಂದ ನಿರಂತರವಾಗಿ ಕೋಟ್ಯಾಂತರ ಮೌಲ್ಯದ ಬೆಳೆ ನಾಶ ಮಾಡಿವೆ. ಈ ಹಿನ್ನೆಲೆಯಲ್ಲಿ ಮಲೆನಾಡಿಗರ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ಅರಣ್ಯ ಇಲಾಖೆ, ಕಾಡಾನೆ ಸೆರೆ ,ಸ್ಥಳಾಂತರ ಕಾರ್ಯಚರಣೆ ಶುರು ಮಾಡಿದೆ.

ಇದನ್ನೂ ಓದಿ: ಮಲೆನಾಡಿನಲ್ಲಿ ಕಾಡಾನೆಗಳ ದಾಂಧಲೆ: ಸೆರೆಹಿಡಿದಿರುವ 7 ಕಾಡಾನೆಗಳನ್ನು ಸ್ಥಳಾಂತರಿಸುವಂತೆ ಆದೇಶ

ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆ ಸಾವು

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾನವ ಮತ್ತು ಕಾಡು ಪ್ರಾಣಿ ಸಂಘರ್ಷ ಮುಂದುವರೆದಿದೆ. ಈಗಾಗಲೇ ಕಾಡಾನೆಗಳು ಹಲವು ಜನರ ಜೀವ ಬಲಿಪಡೆದುಕೊಂಡಿವೆ. ಅಲ್ಲದೇ ಹೊಲ-ತೋಟಗಳಿಗೆ ನುಗ್ಗಿ ರೈತರ ಬೆಳೆಗಳನ್ನು ನಾಶ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ರೈತರು ತಮ್ಮ ಹೊಲ-ಗದ್ದೆಗಳ ಸುತ್ತ ವಿದ್ಯುತ್ ತಂತಿ ಬೇಲಿ ಹಾಕಿಕೊಂಡಿದ್ದಾರೆ. ಅದರಂತೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹರುವನಹಳ್ಳಿ ಗ್ರಾಮದಲ್ಲಿ ಜೋಳ ಚಿತ್ತನೆ ಮಾಡಿದ್ದ ಹೊಲದ ಸುತ್ತಲೂ ವಿದ್ಯುತ್ ತಂತಿ ಅಳವಡಿಸಿದ್ದು, ಈ ವಿದ್ಯುತ್​ ತಂತಿಗೆ ಸಿಲುಕಿ ಆನೆಯೊಂದು ಮೃತಪಟ್ಟಿದೆ.

ಇದನ್ನೂ ಓದಿ: ಪ್ರತ್ಯೇಕ ಪ್ರಕರಣ: ಒಂಟಿ ಸಲಗ ದಾಳಿಗೆ ಕಾರ್ಮಿಕ ಮಹಿಳೆ ಮೃತ, ಕರು ಮೇಲೆ ಚಿರತೆ ದಾಳಿ

ಜೋಳ ಹೊಲದ ಸುತ್ತಲೂ ತಂತಿ ಅಳವಡಿಸಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ 24 ವರ್ಷದ ಗಂಡು ಆನೆ ಸ್ಥಳದಲ್ಲೇ ಸಾವನ್ನಪ್ಪಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಡಿಸಿಎಫ್ ಯಶಪಾಲ್ ಕ್ಷೀರಸಾಗರ, ಎಸಿಎಫ್ ವೀರೇಶ್ ಭೇಟಿ ನೀಡಿ ಪರಿಶೀನಲೆ ನಡೆಸಿದರು. ಬಳಿಕ ಆನೆಯ ಆನೆ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ನೆರವೇರಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ