ಚಿಕ್ಕಮಗಳೂರು: ಕೊರೊನಾ ಸೋಂಕು ಕರ್ನಾಟಕ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ, ಚಿಕ್ಕಮಗಳೂರು ಜಿಲ್ಲೆಗೆ ಪ್ರವಾಸಿಗರು ಬರದಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಜಿಲ್ಲೆಯಲ್ಲಿ ಕೊವಿಡ್ ಪ್ರಕರಣಗಳು ಕ್ರಮೇಣ ಹೆಚ್ಚುತ್ತಿವೆ. ಕೇರಳ, ಮಹಾರಾಷ್ಟ್ರಗಳಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿ. ಹೀಗಾಗಿ, ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ನಿಯಂತ್ರಣ ಅನಿವಾರ್ಯ ಎಂದು ಚಿಕ್ಕಮಗಳೂರು ಜಿಲ್ಲಾಡಳಿತ ತಿಳಿಸಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಪ್ರವಾಸಿಗರಲ್ಲಿ ಸೋಂಕು ಪತ್ತೆಯಾದರೆ ಚಿಕಿತ್ಸೆಯೂ ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ಪ್ರವಾಸಿಗರು ತಮ್ಮ ಪ್ರವಾಸ ಮುಂದೂಡುವುದು ಒಳ್ಳೆಯದು. ಪ್ರವಾಸಿಗರ ಭೇಟಿಗೆ 72 ಗಂಟೆಯೊಳಗಿನ RTPCR ನೆಗೆಟಿವ್ ವರದಿ ಕಡ್ಡಾಯ. ಸರ್ಕಾರದ ನಿಯಮಗಳನ್ನ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಚಿಕ್ಕಮಗಳೂರು ಜಿಲ್ಲಾಡಳಿತ ಹೇಳಿದೆ.
ಪ್ರವಾಸ ಮೊಟಕುಗೊಳಿಸಿ ಜಿಲ್ಲಾಡಳಿತಕ್ಕೆ ಸಹಕರಿಸಲು ಮನವಿ ಮಾಡಲಾಗಿದೆ. ಜಿಲ್ಲೆಯ ವಿವಿಧೆಡೆ ಐದು ಚೆಕ್ ಪೋಸ್ಟ್ ಸ್ಥಾಪಿಸಿ ತಪಾಸಣೆ ನಡೆಸಲಾಗುತ್ತಿದೆ.
ಕೊರೊನಾ ಮೂರನೇ ಅಲೆ ಈ ತಿಂಗಳಲ್ಲೇ ಶುರುವಾಗಲಿದೆ: ತಜ್ಞರ ವರದಿ
ಕೊವಿಡ್ 2ನೇ ಅಲೆ(Covid ಯಿಂದ ದೇಶ ಅದೆಷ್ಟು ಸಂಕಷ್ಟಕ್ಕೀಡಾಗಿತ್ತು ಎಂಬುದನ್ನು ನಾವೆಲ್ಲ ನೋಡಿದ್ದೇವೆ. ಕೊರೊನಾ ಬಗ್ಗೆ ನಿರ್ಲಕ್ಷ್ಯ ಬೇಡ, ಇದು ಎರಡನೇ ಅಲೆಗೆ ಮುಗಿಯುವುದಿಲ್ಲ..ಮೂರನೇ ಅಲೆ ಹತ್ತಿರದಲ್ಲೇ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡುತ್ತಲೇ ಇದ್ದರು. ಇದೀಗ ಕೊವಿಡ್ 19 ಮೂರನೇ ಅಲೆ ತುಂಬ ಹತ್ತಿರದಲ್ಲೇ ಇದೆ ಎಂದು ತಜ್ಞರು ವರದಿ ನೀಡಿದ್ದಾರೆ. ಅಂದರೆ ಕೊರೊನಾ ಮೂರನೇ ಅಲೆ ಆಗಸ್ಟ್ನಲ್ಲಿಯೇ ದೇಶವನ್ನು ಅಪ್ಪಳಿಸಲಿದೆ. ಅಕ್ಟೋಬರ್ ಹೊತ್ತಿಗೆ ಉತ್ತುಂಗಕ್ಕೆ ಏರಲಿದೆ ಎಂದು ಹೇಳಲಾಗಿದೆ.
ಇತ್ತೀಚೆಗೆ ದೇಶದಲ್ಲಿ ಕೊರೊನಾ ಪ್ರಮಾಣ ತುಸು ತಗ್ಗಿತ್ತು. ಅಂದರೆ ಒಂದು ದಿನದಲ್ಲಿ ದಾಖಲಾಗುವ ಕೊರೊನಾ ವೈರಸ್ ಪ್ರಮಾಣ ಕಡಿಮೆಯಾಗಿತ್ತು. ಆದರೀಗ ಮತ್ತೆ ಒಂದು ದಿನದಲ್ಲಿ 40 ಸಾವಿರಕ್ಕೂ ಅಧಿಕ ಕೊರೊನಾ ಕೇಸ್ಗಳು ದಾಖಲಾಗುತ್ತಿವೆ. ಅದರಲ್ಲೂ ಕೇರಳದಲ್ಲಂತೂ ಮಿತಿಮೀರುತ್ತಿದೆ. ಈ ಹೊತ್ತಲ್ಲಿ ತಜ್ಞರು ನೀಡಿರುವ ಅಧ್ಯಯನ ವರದಿ ನಿಜಕ್ಕೂ ಆತಂಕ ಮೂಡಿಸುವಂತಿದೆ. ಅಕ್ಟೋಬರ್ ಹೊತ್ತಿಗೆ ಕೊರೊನಾ ವೈರಸ್ ಪ್ರಸರಣ ದೇಶದಲ್ಲಿ ಅತ್ಯಂತ ಉತ್ತುಂಗಕ್ಕೆ ಏರಲಿದೆ. ಆದ ಒಂದು ದಿನದಲ್ಲಿ 1 ಲಕ್ಷಕ್ಕೆ ಕಡಿಮೆ ಕೇಸ್ ದಾಖಲಾದರೆ ಅದು ಉತ್ತಮ ಎಂದೇ ಪರಿಗಣಿಸಬೇಕು. ಯಾಕೆಂದರೆ ಒಂದು ದಿನದಲ್ಲಿ 1.50 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುವ ಕೆಟ್ಟ ಪರಿಸ್ಥಿತಿ ಬರಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಹೃತಿಕ್ ರೋಷನ್ಗೆ ಜೋಡಿ ಆಗ್ತಾರಾ ಚಿಕ್ಕಮಗಳೂರು ಹುಡುಗಿ? ನಭಾ ನಟೇಶ್ಗೆ ಬಿಗ್ ಆಫರ್
ಚಿಕ್ಕಮಗಳೂರು: ಕೊಪ್ಪದಲ್ಲಿ ಮಿತಿಮೀರಿದ ದನಗಳ್ಳರ ಹಾವಳಿ; ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಆಟಾಟೋಪ
(Chikkamagaluru District Administration on Tourists visiting Tourism Places amid Coronavirus Covid19)
Published On - 6:09 pm, Mon, 2 August 21