ಚಾರ್ಮಾಡಿ ಘಾಟ್​​​ನಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ: ಮಣ್ಣಿನಡಿ ಶವ ಹೂತ್ತಿಟ್ಟಿದ್ದ ಜೊತೆಗಾರ

| Updated By: ಸಾಧು ಶ್ರೀನಾಥ್​

Updated on: Dec 01, 2021 | 9:29 AM

5 ದಿನಗಳ ಹಿಂದೆ ನಾಗೇಶ್ ರನ್ನ ಜೀಪಿನಲ್ಲಿ ಕರೆದುಕೊಂಡು ಹೋಗಿದ್ದ ಕೃಷ್ಣೇಗೌಡ ಎಂಬಾತನೇ ಕೊಲೆ ಮಾಡಿ, ಮಣ್ಣಿನಡಿ ಹೂತಿಟ್ಟು ಪೊಲೀಸರು, ಸ್ಥಳೀಯರ ಜೊತೆ ಸೇರಿಕೊಂಡು ಹುಡುಕಾಟದ ನಾಟಕವಾಡಿದ್ದ. ಬಾಳೂರು ಗ್ರಾಮದ ನಾಗೇಶ್ ಆಚಾರ್ (46) ಮೃತ ದುರ್ದೈವಿ.

ಚಾರ್ಮಾಡಿ ಘಾಟ್​​​ನಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ: ಮಣ್ಣಿನಡಿ ಶವ ಹೂತ್ತಿಟ್ಟಿದ್ದ ಜೊತೆಗಾರ
ಚಾರ್ಮಾಡಿ ಘಾಟ್​​​ನಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ: ಮಣ್ಣಿನಡಿ ಶವ ಹೂತ್ತಿಟ್ಟಿದ್ದರು
Follow us on

ಚಿಕ್ಕಮಗಳೂರು: ಚಾರ್ಮಾಡಿ ಘಾಟ್​​​ನಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾರೆ. ನಾಪತ್ತೆಯಾಗಿದ್ದ ನಾಗೇಶ್ ಆಚಾರ್ (46) ಅವರನ್ನು ಕೊಲೆ ಮಾಡಿ, ಮಣ್ಣಿನಡಿ ಹೂತ್ತಿಟ್ಟಿದ್ದರು. 5 ದಿನಗಳ ಹಿಂದೆ ನಾಗೇಶ್ ರನ್ನ ಜೀಪಿನಲ್ಲಿ ಕರೆದುಕೊಂಡು ಹೋಗಿದ್ದ ಕೃಷ್ಣೇಗೌಡ ಎಂಬಾತನೇ ಕೊಲೆ ಮಾಡಿ, ಮಣ್ಣಿನಡಿ ಹೂತಿಟ್ಟು ಪೊಲೀಸರು, ಸ್ಥಳೀಯರ ಜೊತೆ ಸೇರಿಕೊಂಡು ಹುಡುಕಾಟದ ನಾಟಕವಾಡಿದ್ದ. ಬಾಳೂರು ಗ್ರಾಮದ ನಾಗೇಶ್ ಆಚಾರ್ (46) ಮೃತ ದುರ್ದೈವಿ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಿದರುತಳ ಬಳಿ ಘಟನೆ ನಡೆದಿದೆ. ಪ್ರಕರಣ ಸಂಬಂಧ ಕೃಷ್ಣೇಗೌಡ, ಉದಯ್, ಪ್ರದೀಪ್ ಎಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಹಿಂದಿನ ಸುದ್ದಿ – ಚಾರ್ಮಾಡಿ ಘಾಟ್ ಅರಣ್ಯಕ್ಕೆ ಹೋಗಿದ್ದ ವ್ಯಕ್ತಿ ನಾಪತ್ತೆ

ಚಾರ್ಮಾಡಿ ಘಾಟ್ ಅರಣ್ಯಕ್ಕೆ ಹೋಗಿದ್ದ ವ್ಯಕ್ತಿ ನಾಪತ್ತೆಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಿದಿರುತಳ ಗ್ರಾಮಕ್ಕೆ ಹೋಗಿದ್ದ ಬಾಳೂರು ಗ್ರಾಮದ ನಾಗೇಶ್ ಆಚಾರ್ (46) ಕಣ್ಮರೆಯಾಗಿದ್ದಾರೆ. ನಾಲ್ಕು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿರುವ ನಾಗೇಶ್ ಅವರು ಕೃಷ್ಣೇಗೌಡ ಎಂಬುವರ ಜೊತೆ ಜೀಪ್ ನಲ್ಲಿ ಹೋಗಿದ್ದರು. ಕಣ್ಮರೆಯಾಗುವ ವ್ಯಕ್ತಿಗಾಗಿ ಚಾರ್ಮಾಡಿ ಘಾಟ್ ನಲ್ಲಿ ಸ್ಥಳೀಯರಿಂದ ಹುಡುಕಾಟ ನಡೆದಿದೆ. ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.