ಚಿಕ್ಕಮಗಳೂರು ಜನರ ನಿದ್ದೆಗೆಡಿಸಿದ್ದ ‘ಕುಳ್ಳ’ ಕೊನೆಗೂ ಲಾಕ್‌, ನಾಲ್ಕು ದಿನದ ಆಪರೇಷನ್‌ ಬಳಿಕ ಕಾಡಾನೆ ಸೆರೆ

ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಆತಂಕ ಸೃಷ್ಟಿಸಿದ್ದ ಕುಳ್ಳ ಎಂಬ ಕಾಡಾನೆಯನ್ನು ನಾಲ್ಕು ದಿನಗಳ ಕಾರ್ಯಾಚರಣೆಯ ನಂತರ ಸೆರೆಹಿಡಿಯಲಾಗಿದೆ. ಮೂಡಿಗೆರೆ ತಾಲೂಕಿನಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಭೀಮ ಮತ್ತು ಏಕಲವ್ಯ ತಂಡಗಳು ಭಾಗವಹಿಸಿದ್ದವು. ಕುಳ್ಳನ ದಾಳಿಯಿಂದ ಆತಂಕಗೊಂಡಿದ್ದ ಸ್ಥಳೀಯರು ಈಗ ನಿಟ್ಟುಸಿರು ಬಿಟ್ಟಿದ್ದಾರೆ.

ಚಿಕ್ಕಮಗಳೂರು ಜನರ ನಿದ್ದೆಗೆಡಿಸಿದ್ದ ‘ಕುಳ್ಳ’ ಕೊನೆಗೂ ಲಾಕ್‌, ನಾಲ್ಕು ದಿನದ ಆಪರೇಷನ್‌ ಬಳಿಕ ಕಾಡಾನೆ ಸೆರೆ
Wild Elephant
Edited By:

Updated on: May 14, 2025 | 9:36 AM

ಚಿಕ್ಕಮಗಳೂರು, ಮೇ 14: ಕಾಡಾನೆಯೊಂದು ಮಲೆನಾಡು ಭಾಗದಲ್ಲಿ ಆತಂಕ ಸೃಷ್ಟಿಸಿತ್ತು. ಆ ಕಾಡಾನೆ (Wild elephant) ಕುಳ್ಳ ಅಂತಾನೇ ಫೇಮಸ್ ಆಗಿತ್ತು. ಇಂದು ಈ ಊರಲ್ಲಿ ಇದ್ದರೆ, ನಾಳೆ ಮತ್ತೊಂದು ಊರಲ್ಲಿ ಕಾಣಿಸಿಕೊಂಡು ದಾಂಧಲೆ ಮಾಡುತ್ತಿದ್ದ ಕುಳ್ಳ ಕಾಡಾನೆ ಕೊನೆಗೂ ಲಾಕ್ (Captured) ಆಗಿದೆ. ನಾಲ್ಕು ದಿನಗಳಿಂದ ನಡೆದ ಆಪರೇಷನ್ ಕೊನೆಗೂ ಯಶಸ್ವಿಯಾಗಿದ್ದೆ ರಣ ರೋಚಕ.

ಹಾಸನ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಅವನು ಕುಳ್ಳು ಅಂತಾನೆ ಖ್ಯಾತಿ ಪಡೆದಿದ್ದ ಒಂಟಿ ಸಲಗ, ಅವನು ಊರಿಗೆ ಎಂಟ್ರಿ ಕೊಟ್ರೆ ಇಡೀ ಊರಲ್ಲೇ ದಾಂಧಲೆ ಮಾಡಿ ಆತಂಕ ಸೃಷ್ಟಿ ಮಾಡುತ್ತಿದ್ದ. ಜನರು ಸಿಕ್ಕಿದ್ದರೆ ದಾಳಿಗೆ ಬರ್ತಿದ್ದ ಕುಳ್ಳ ಕೊನೆಗೂ ಲಾಕ್ ಆಗಿದ್ದಾನೆ.

ಇದನ್ನೂ ಓದಿ: ಚಿಕ್ಕಮಗಳೂರು: ಕಡೂರು ತಮ್ಮಿಹಳ್ಳಿಯಲ್ಲಿ ಹಸುವಿನ ಕೆಚ್ಚಲು ಕತ್ತರಿಸಿ ದುಷ್ಕರ್ಮಿಗಳು ಪರಾರಿ

ಇದನ್ನೂ ಓದಿ
ಗದಗಿನಲ್ಲಿ ಫಕಿರೇಶ್ವರನ ಭಾವೈಕ್ಯತೆಯ ಜಾತ್ರೆ: ಹಿಂದೂ, ಮುಸ್ಲಿಮರು ಭಾಗಿ
ಮಳೆ ಪರಿಣಾಮ ಬೆಂಗಳೂರಿನ ಹಲವೆಡೆ ಮುಂಜಾನೆಯೇ ಟ್ರಾಫಿಕ್ ಜಾಮ್: ಎಲ್ಲೆಲ್ಲಿ?
ಕಡೂರು ತಮ್ಮಿಹಳ್ಳಿಯಲ್ಲಿ ಹಸುವಿನ ಕೆಚ್ಚಲು ಕತ್ತರಿಸಿ ದುಷ್ಕರ್ಮಿಗಳು ಪರಾರಿ
ರಸ್ತೆ ಮಧ್ಯೆ ಗೋಪುರ:ದೇವಾಲಯದ ಆಡಳಿತ ಮಂಡಳಿ ವರ್ಸಸ್ ಸ್ಥಳೀಯರ ಮಧ್ಯೆ ಜಟಾಪಟಿ

ಹೌದು.. ಹಾಸನ ಜಿಲ್ಲೆಯ ಸಕಲೇಶಪುರ, ಬೇಲೂರು ಮತ್ತು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಸಂಚಾರ ಮಾಡಿ ಆತಂಕ ಸೃಷ್ಟಿ ಮಾಡಿದ ಕಾಡಾನೆ ಕುಳ್ಳ ಕೊನೆಗೂ ಲಾಕ್‌ ಆಗಿದೆ. ಕುಳ್ಳನ ಸೆರೆಗಾಗಿ ಕಳೆದ ನಾಲ್ಕು ದಿನದಿಂದ ಮೂಡಿಗೆರೆ ತಾಲೂಕಿನಲ್ಲಿ ಕಾರ್ಯಚರಣೆ ನಡೆದಿತ್ತು. ತನ್ನ ಹಿಡಿಯಲು ಭೀಮಾ ಟೀಮ್ ಎಂಟ್ರಿ ಯಾಗಿದೆ ಎಂಬ ಚಿಕ್ಕ ಸುಳಿವು ಸಿಗುತ್ತಿದ್ದಂತೆ ಎಸ್ಕೇಪ್ ಆಗಿದ್ದ ಕುಳ್ಳ ಕುಮ್ಕಿ ಆನೆ ಭೀಮ, ಏಕಲವ್ಯ ಟೀಮ್ ‌ನಡೆಸಿದ ಕಾರ್ಯಚರಣೆಯಲ್ಲಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ.

ಮೂಡಿಗೆರೆ ತಾಲೂಕಿನಲ್ಲಿ ಕಳೆದ‌‌ ನಾಲ್ಕು ದಿನದಿಂದ ಭೀಮ ಟೀಮ್ ನೇತೃತ್ವದಲ್ಲಿ ಕುಳ್ಳ ಒಂಟಿ ಸಲಗದ‌ ಸೆರೆಗಾಗಿ ಕಾರ್ಯಚರಣೆ ನಡೆದಿತ್ತು. ನಿರಂತರವಾಗಿ ನಡೆದ ಕಾರ್ಯಚರಣೆಯಲ್ಲಿ ಕುಳ್ಳ ಮೂಡಿಗೆರೆ ತಾಲೂಕಿನ ಹಾಂದಿ ಬಳಿ‌ ಲಾಕ್‌ ಆಗಿದ್ದಾನೆ.

ಕುಳ್ಳ ಅಂತಾನೆ ಖ್ಯಾತಿ ಪಡೆದಿದ್ದ ಕಾಡಾನೆ, ಮಾನವರ ಮೇಲೆ ದಾಳಿಗೆ ಯತ್ನಿಸಿ ಆತಂಕದ ವಾತಾವರಣ ಸೃಷ್ಟಿ ಮಾಡಿದ್ದ. ಹೆಚ್ಚು ಸಂಚಾರ ಮಾಡುತ್ತಿದ್ದ ಗ್ರಾಮಗಳಿಂದ ಕುಳ್ಳನ ಸೆರೆಗಾಗಿ ರಾಜ್ಯ ಸರ್ಕಾರಕ್ಕೆ ಚಿಕ್ಕಮಗಳೂರು ಅರಣ್ಯ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದರು. ಹಾಗಾಗಿ ಸರ್ಕಾರದಿಂದ ಸೆರೆ ಕಾರ್ಯಚರಣೆಗೆ ಅನುಮತಿ ಪಡೆದ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಚರಣೆ ನಡೆಸಿ ಕೊನೆಗೂ ಕುಳ್ಳ ನನ್ನ ಸೆರೆ ಹಿಡಿದಿದ್ದಾರೆ.

ಇದನ್ನೂ ಓದಿ: ರಸ್ತೆ ಮಧ್ಯೆ ಗೋಪುರ ನಿರ್ಮಿಸಿ ಓಡಾಟಕ್ಕೆ ತಡೆ: ಅನ್ನಪೂರ್ಣೇಶ್ವರಿ ದೇವಾಲಯದ ಆಡಳಿತ ಮಂಡಳಿ ನಡೆಗೆ ಬೇಸರ, ರಾಜ್ಯಪಾಲರಿಗೆ ಪತ್ರ

ಎರಡು ಜಿಲ್ಲೆಗಳ ಮೂರು ತಾಲೂಕಿನಲ್ಲಿ ಆತಂಕ ಸೃಷ್ಟಿ ಮಾಡಿದ್ದ ಕುಳ್ಳ ಕೊನೆಗೂ ಲಾಕ್ ಆಗಿದ್ದಾನೆ. ಕುಳ್ಳನ ದಾಳಿಯ ಆತಂಕದಲ್ಲಿದ್ದ ಜನರು, ಲಾಕ್ ಆಗುತ್ತಿದ್ದಂತೆ ನಿಟ್ಟುಸಿರು ಬಿಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:00 am, Wed, 14 May 25