AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಮಗಳೂರು; ಪಟಾಕಿ ಸಿಡಿದು ಓರ್ವ ಸಾವು, ಮೂವರು ಮಕ್ಕಳು ಸೇರಿ ನಾಲ್ವರಿಗೆ ಗಂಭೀರ ಗಾಯ

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಸುಣ್ಣದಹಳ್ಳಿಯಲ್ಲಿ ಪಟಾಕಿ ಸಿಡಿದು ಪ್ರದೀಪ್​(30) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೋರ್ವನಿಗೆ ಗಂಭೀರ ಗಾಯಗಳಾಗಿವೆ. ಜೊತೆಗೆ ಮೂವರು ಮಕ್ಕಳಿಗೂ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಪ್ರದೀಪ್, ಅಡಕೆ ಗೋಟು (ಕಲ್ಲು ಆಟಂಬಾಂಬ್) ಪಟಾಕಿಯನ್ನ ಚೇರ್ ಕೆಳಗೆ ಇಟ್ಟುಕೊಂಡು ಕೂತಿದ್ದ ವೇಳೆ ಪಟಾಕಿ ಸಿಡಿದಿದ್ದು ಪಟಾಕಿ ಸಿಡಿದ ರಭಸಕ್ಕೆ ನೆಲದಿಂದ 5 ಅಡಿ ಹಾರಿ ಬಿದ್ದಿದ್ದು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಚಿಕ್ಕಮಗಳೂರು; ಪಟಾಕಿ ಸಿಡಿದು ಓರ್ವ ಸಾವು, ಮೂವರು ಮಕ್ಕಳು ಸೇರಿ ನಾಲ್ವರಿಗೆ ಗಂಭೀರ ಗಾಯ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on:Nov 15, 2023 | 12:48 PM

ಚಿಕ್ಕಮಗಳೂರು, ನ.15: ಪಟಾಕಿ ( Firecracker)  ಸಿಡಿದು ಓರ್ವ ಯುವಕ ಮೃತಪಟ್ಟಿದ್ದು (Death) ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಸುಣ್ಣದಹಳ್ಳಿಯಲ್ಲಿ ಪಟಾಕಿ ಸಿಡಿದು ಪ್ರದೀಪ್​(30) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೋರ್ವನಿಗೆ ಗಂಭೀರ ಗಾಯಗಳಾಗಿವೆ. ಜೊತೆಗೆ ಮೂವರು ಮಕ್ಕಳಿಗೂ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 6 ನೇ ತರಗತಿಯ ವಿದ್ಯಾರ್ಥಿ ಕುಶಾಲ್ ಗೆ ಗಂಭೀರ ಗಾಯವಾಗಿದ್ದು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮೃತ ಪ್ರದೀಪ್, ಅಡಕೆ ಗೋಟು (ಕಲ್ಲು ಆಟಂಬಾಂಬ್) ಪಟಾಕಿಯನ್ನ ಚೇರ್ ಕೆಳಗೆ ಇಟ್ಟುಕೊಂಡು ಕೂತಿದ್ದ ವೇಳೆ ಪಟಾಕಿ ಸಿಡಿದಿದ್ದು ಪಟಾಕಿ ಸಿಡಿದ ರಭಸಕ್ಕೆ ನೆಲದಿಂದ 5 ಅಡಿ ಹಾರಿ ಬಿದ್ದಿದ್ದು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ದೇಹದ ಸೂಕ್ಷ್ಮ ಜಾಗಕ್ಕೆ ಗಂಭೀರವಾಗಿ ಏಟು ಬಿದ್ದು ಸಾವು ಸಂಭವಿಸಿದೆ. ಪ್ರದೀಪ್ ಜೊತೆಗಿದ್ದ ಮತ್ತೋರ್ವ ಯುವಕನಿಗೂ ಗಂಭೀರವಾಗಿ ಗಾಯವಾಗಿದೆ. ಮೂವರು ಮಕ್ಕಳಿಗೂ ಗಾಯಗಳಾಗಿವೆ. ಕಲ್ಲು ಆಟಂಮ್ ಬಾಂಬ್ ಸಿಡಿದ ರಭಸಕ್ಕೆ ಮನೆಯ ಗ್ಲಾಸ್​ಗಳು ಪುಡಿ-ಪುಡಿಯಾಗಿವೆ. ತರೀಕೆರೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮನೆಗೆ ಬೆಂಕಿ

ಬೆಳ್ಳಂಬೆಳಗ್ಗೆ ಚಿಕ್ಕಬಳ್ಳಾಪುರದಲ್ಲಿ ಭಯಾನಕ ಘಟನೆ ಸಂಭವಿಸಿದೆ.. ಅಡುಗೆ ಮಾಡುತ್ತಿದ್ದ ವೇಳೆ, ಸ್ಫೋಟ ಸಂಭವಿಸಿದೆ. ಚಿಕ್ಕಬಳ್ಳಾಫುರ ನಗರದ ಎಂ.ಜಿ.ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ.. ಅಮ್ಮ, ಪುಟ್ಟ ಮಗು ಇದ್ದ ಮನೆಯಲ್ಲಿ ಇದ್ದಕ್ಕಿದ್ದಂತೆ ಸ್ಫೋಟವಾಗಿದೆ. ಅಡುಗೆ ಮನೆಯಲ್ಲಿ ಬ್ಲಾಸ್ಟ್ ಆಗ್ತಿದ್ದಂತೆ, ಮನೆಯ ಸೀಟುಗಳ ಹೊಡೆದು ಹೋಗಿವೆ. ಮನೆ ವಸ್ತುಗಳೆಲ್ಲಾ ಚಿಲ್ಲಾಪಿಲ್ಲಿಯಾಗಿ ಬಿದ್ದಿವೆ. ಬೆಂಕಿ ತಗುಲಿದ ಕಾರಣ ಪುಟ್ಟ ಮಗು ಹಾಗೂ ಮಹಿಳೆಗೆ ತೀವ್ರ ಗಾಯವಾಗಿದೆ.

ಇನ್ನು, ಸ್ಫೋಟದ ಭಯಾನಕ ಸದ್ದು ಕೇಳಿ ಬಂದ ಸ್ಥಳೀಯರು, ಮನೆಯಲ್ಲಿದ್ದ ಮಗು ಹಾಗೂ ಮಹಿಳೆಯನ್ನ ಹೊರತಂದಿದ್ದಾರೆ. ಕೂಡಲೇ ಗಾಯಾಳುಗಳನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ ರವಾನಿಸಿದ್ದಾರೆ. ಕೆಲವರು ಸಿಲಿಂಡರ್ ಸ್ಫೋಟವಾಗಿದೆ ಅಂತಂದ್ರೆ, ಇನ್ನೂ ಕೆಲವರು ಕುಕ್ಕರ್ ಬ್ಲಾಸ್ಟ್ ಆಗಿದೆ ಅಂತಿದ್ದಾರೆ. ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಇದನ್ನೂ ಓದಿ: ದೀಪಾವಳಿ ಪಟಾಕಿ ಅವಘಡ; ಬೆಂಗಳೂರಿನಲ್ಲಿ 60ಕ್ಕೂ ಅಧಿಕ ಮಂದಿಗೆ ಗಾಯ, ಹಲವರ ಕಣ್ಣಿಗೆ ಹಾನಿ

ದೀಪಾವಳಿ ಪಟಾಕಿ ಅವಘಡ; ಬೆಂಗಳೂರಿನಲ್ಲಿ 60ಕ್ಕೂ ಅಧಿಕ ಮಂದಿಗೆ ಗಾಯ, ಹಲವರ ಕಣ್ಣಿಗೆ ಹಾನಿ

ಬೆಳಕಿನ ಹಬ್ಬ ದೀಪಾವಳಿ (Deepavali) ಅಂದರೆ ಸಡಗರ ಸಂಭ್ರಮ ಮನೆ ಮಾಡಿರುತ್ತೆ. ಆದರೆ ಜನರ ಬಾಳಲ್ಲಿ ಬೆಳಕಾಗಬೇಕಾಗಿದ್ದ ಇದೇ ದೀಪಾವಳಿ ಹಬ್ಬ ಕೆಲವರ ಬಾಳನ್ನ ಕತ್ತಲಾಗಿಸುತ್ತಿದೆ. ಪ್ರತಿ ವರ್ಷದ ಹಾಗೇ ಈ ಬಾರಿ ಕೂಡ ದೀಪಾವಳಿಯಲ್ಲಿ ಪಟಾಕಿ ಅವಗಢಗಳು ಸಂಭವಿಸಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರಲ್ಲಿ ಪಟಾಕಿ ಸಿಡಿದು ನಿನ್ನೆ ಒಂದೇ ದಿನ 13 ಜನರಿಗೆ ಗಾಯಗಳಾಗಿವೆ.

ಭಾನುವಾರದಿಂದ ಪ್ರಾರಂಭವಾಗಿರುವ ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಿವಿಧ ಆಸ್ಪತ್ರೆಗಳಲ್ಲಿ 60 ಕ್ಕೂ ಹೆಚ್ಚು ಪಟಾಕಿ ಸಂಬಂಧಿತ ಗಾಯಗಳ ಪ್ರಕರಣಗಳು ವರದಿಯಾಗಿವೆ. ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರು ಗಾಯಾಳುಗಳು ಗಂಭೀರವಾದ ಗಾಯಗಳಿಂದ ಬಳಲುತ್ತಿದ್ದು, ಅವರ ಒಂದು ಕಣ್ಣಿನ ದೃಷ್ಟಿ ಹಾಳಾಗುವ ಸಾಧ್ಯತೆಯಿದೆ ಎಂದು ವೈದ್ಯರು ಹೇಳಿದ್ದಾರೆ. ಶ್ರೀರಾಂಪುರದಲ್ಲಿ 18 ವರ್ಷದ ಯುವಕ ಭಾನುವಾರ ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದು ಆತನ ಕಣ್ಣಿನ ಭಾಗಕ್ಕೆ ಹೆಚ್ಚಿನ ಗಾಯಗಳಾಗಿವೆ. ಧರ್ಮಾವರಂನ 10 ವರ್ಷದ ಬಾಲಕಿ ಮತ್ತು ಬೆಂಗಳೂರಿನ 22 ವರ್ಷದ ಯುವಕಿಗೂ ಕಣ್ಣಿನ ಭಾಗಕ್ಕೆ ಹೆಚ್ಚಿನ ಗಾಯಗಳಾಗಿವೆ. ಇದರಿಂದಾಗಿ ಅವರಿಗೆ ದೃಷ್ಟಿ ಸಮಸ್ಯೆ ಎದುರಾಗಿದೆ. ಮಿಂಟೋ ಆಸ್ಪತ್ರೆಯ ನಿರ್ದೇಶಕ ಜಿ.ನಾಗರಾಜು ಮಾತನಾಡಿ, ಮೂವರಿಗೂ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ದೀರ್ಘಾವಧಿ ಚಿಕಿತ್ಸೆ ಅಗತ್ಯವಿದೆ. ಸೋಮವಾರ ಸಂಜೆಯವರೆಗೆ ಮಿಂಟೋದಲ್ಲಿ ಒಟ್ಟು ಒಂಬತ್ತು ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ನವೆಂಬರ್ 12 ರಂದು ಬಿಹಾರದಲ್ಲಿ ಬಿಹಾರಿ ಕುಟುಂಬ ಮೂಲದ ಆರು ವರ್ಷದ ಬಾಲಕ ಕೂಡ ಪಟಾಕಿ ಸಿಡಿಸಿ ಗಾಯಗೊಂಡಿದ್ದು ಬಾಲಕನಿಗೆ ಸ್ಥಳೀಯ ಚಿಕಿತ್ಸಾಲಯದಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಅವನನ್ನು ನಾರಾಯಣ ನೇತ್ರಾಲಯಕ್ಕೆ ಶಿಫ್ಟ್ ಮಾಡಲಾಗಿದೆ ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:32 pm, Wed, 15 November 23

ಮಂಗಳೂರು: ರಹಿಮಾನ್ ಶವಯಾತ್ರೆಯ ವೇಳೆ ಯುವಕರ ದಾಂಧಲೆ, ವೀಡಿಯೋ ವೈರಲ್
ಮಂಗಳೂರು: ರಹಿಮಾನ್ ಶವಯಾತ್ರೆಯ ವೇಳೆ ಯುವಕರ ದಾಂಧಲೆ, ವೀಡಿಯೋ ವೈರಲ್
VIDEO: ಇಲ್ಲಿ ಏನ್ ನಡೀತಿದೆ... ಗೊಂದಲದಲ್ಲೇ ಕೂತ RCB ಆಟಗಾರ
VIDEO: ಇಲ್ಲಿ ಏನ್ ನಡೀತಿದೆ... ಗೊಂದಲದಲ್ಲೇ ಕೂತ RCB ಆಟಗಾರ
ಷಷ್ಠಿಪೂರ್ತಿ ಯಾಕೆ ಆಚರಿಸಬೇಕು ಹಾಗೂ ಇದರ ಮಹತ್ವವೇನು?
ಷಷ್ಠಿಪೂರ್ತಿ ಯಾಕೆ ಆಚರಿಸಬೇಕು ಹಾಗೂ ಇದರ ಮಹತ್ವವೇನು?
ಈ ರಾಶಿಯವರಿಗೆ ಏಳು ಗ್ರಹಗಳ ಅನುಗ್ರಹ, ವ್ಯಾಪಾರದಲ್ಲಿ ಅಧಿಕ ಲಾಭ
ಈ ರಾಶಿಯವರಿಗೆ ಏಳು ಗ್ರಹಗಳ ಅನುಗ್ರಹ, ವ್ಯಾಪಾರದಲ್ಲಿ ಅಧಿಕ ಲಾಭ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್