ಚಿಕ್ಕಮಗಳೂರಿನಲ್ಲಿ ಹೇಗಿದ್ರು ಸಿಟಿ ರವಿನೇ ಗೆಲ್ಲೋದು ಸರ್..!: ಕಾಂಗ್ರೆಸ್​ ನಾಯಕನ ಆಡಿಯೋ ವೈರಲ್​​: ಪಕ್ಷದಿಂದ ಉಚ್ಚಾಟನೆ

|

Updated on: Apr 05, 2023 | 5:27 PM

ಚಿಕ್ಕಮಗಳೂರಿನಲ್ಲಿ ಹೇಗಿದ್ರು ಸಿ.ಟಿ ರವಿನೇ ಗೆಲ್ಲೋದು ಸರ್..! ಎನ್ನುವ ಕಾಂಗ್ರೆಸ್ ಮುಖಂಡ ರಸೂಲ್ ಖಾನ್ ಆಡಿಯೋ ವೈರಲ್​​​ ಆಗಿದೆ. ಆಡಿಯೋ ವೈರಲ್​ ಆಗುತ್ತಿದ್ದಂತೆ ರಸೂಲ್ ಖಾನ್​ ಅವರನ್ನು ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನದಿಂದ ಕಾಂಗ್ರೆಸ್​ ವಜಾ ಮಾಡಿದೆ.

ಚಿಕ್ಕಮಗಳೂರಿನಲ್ಲಿ ಹೇಗಿದ್ರು ಸಿಟಿ ರವಿನೇ ಗೆಲ್ಲೋದು ಸರ್..!: ಕಾಂಗ್ರೆಸ್​ ನಾಯಕನ ಆಡಿಯೋ ವೈರಲ್​​: ಪಕ್ಷದಿಂದ ಉಚ್ಚಾಟನೆ
ರಸೂಲ್​ ಖಾನ್​ (ಎಡಚಿತ್ರ) ವಜಾಗೊಳಿಸಿದ ಪ್ರತಿ (ಬಲಚಿತ್ರ)
Follow us on

ಚಿಕ್ಕಮಗಳೂರು: ಚುನಾವಣೆ ಹತ್ತಿರವಾಗುತ್ತಿದ್ದು, ಚಿಕ್ಕಮಗಳೂರು (Chikkamagaluru) ವಿಧಾನಸಭಾ ಅಖಾಡ ಹೈವೋಲ್ಟೆಜ್​ನಿಂದ ಕೂಡಿದೆ. ಈ ನಡುವೆ ಕಾಂಗ್ರೆಸ್​ (Congress) ಮುಖಂಡರೊಬ್ಬರು ಆಡಿಯೋ ವೈರಲ್​ ಆಗಿದೆ. ಚಿಕ್ಕಮಗಳೂರಿನಲ್ಲಿ ಹೇಗಿದ್ದರು ಸಿ.ಟಿ ರವಿನೇ (CT Ravi) ಗೆಲ್ಲೋದು ಸರ್..! ಎನ್ನುವ ಕಾಂಗ್ರೆಸ್ ಮುಖಂಡ ರಸೂಲ್ ಖಾನ್ (Rasul Khan) ಅವರ ಆಡಿಯೋ ವೈರಲ್​​​ ಆಗಿದೆ. ಇನ್ನು ಆಡಿಯೋ ವೈರಲ್​ ಆಗುತ್ತಿದ್ದಂತೆ ರಸೂಲ್ ಖಾನ್​ ಅವರನ್ನು ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನದಿಂದ ಕಾಂಗ್ರೆಸ್​ ವಜಾ ಮಾಡಿದೆ. ಪಕ್ಷಕ್ಕೆ ಮುಜುಗರ ತರುವ ಹೇಳಿಕೆ ರಸೂಲ್ ಖಾನ್ ನೀಡಿದ್ದಾರೆಂದು ರಾಜ್ಯ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ ವಜಾ ಮಾಡಿದ್ದಾರೆ.

ನಿನ್ನೆ (ಏ.4) ತುಮಕೂರಿನಲ್ಲಿ ರಸೂಲ್ ಖಾನ್ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ, ಇತ್ತೀಚಿಗೆ ಬಿಜೆಪಿ ತೊರೆದು ಕಾಂಗ್ರೆಸ್​ ಸೇರಿದ್ದ ಹೆಚ್‌.ಡಿ ತಮ್ಮಯ್ಯ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿದ್ದರು. ಈ ವೇಳೆ ತಮ್ಮಯ್ಯ ಅವರಿಗೆ ಕೈ ಟಿಕೆಟ್ ನೀಡದಂತೆ ಮುಸ್ಲಿಂ ಸಮುದಾಯ ಒತ್ತಾಯ ಮಾಡಿತ್ತು. ಕಾಂಗ್ರೆಸ್ ಟಿಕೆಟ್ ತಮ್ಮಯ್ಯ ಅವರಿಗೆ ನೀಡಿದರೇ ಮತದಾನದಿಂದ ದೂರ ಉಳಿಯುವ ಎಚ್ಚರಿಕೆ ನೀಡಲಾಗಿತ್ತು. ಅಲ್ಲದೆ ಟಿಕೆಟ್​ಗೆ ಅರ್ಜಿ ಹಾಕಿರುವ ಆರು ಜನರಲ್ಲಿ ಒಬ್ಬರಿಗೆ ಟಿಕೆಟ್ ನೀಡುವಂತೆ ಮುಸ್ಲಿಂ ಸಮುದಾಯ ಒತ್ತಾಯ ಮಾಡಿತ್ತು.

ಇದನ್ನೂ ಓದಿ: ಟಿಕೆಟ್​​ಗಾಗಿ ಕುತ್ತಿಗೆಗೆ ನೇಣು ಕುಣಿಕೆ ಹಾಕಿಕೊಂಡು, ಕೈಯಲ್ಲಿ ಬಾಟಲಿ ಹಿಡಿದು ಬಿಜೆಪಿ ನಾಯಕನ ಹೈಡ್ರಾಮಾ

ಕಾಂಗ್ರೆಸ್​ ಮುಖಂಡ ಪ್ರಸನ್ನಕುಮಾರ್ ಪಕ್ಷದಿಂದ ವಜಾ

ಇನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಗುಬ್ಬಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಸನ್ನಕುಮಾರ್ ಅವರನ್ನು ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್​ಗೌಡ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.

ಗುಬ್ಬಿ ಕ್ಷೇತ್ರದ ಟಿಕೆಟ್​ ಆಕಾಂಕ್ಷಿ ಶ್ರೀನಿವಾಸ್,​ ಕಾಂಗ್ರೆಸ್​​ ಸೇರ್ಪಡೆಗೆ ಪ್ರಸನ್ನಕುಮಾರ್ ವಿರೋಧಿಸಿದ್ದರು. ತಾವೇ ಅಭ್ಯರ್ಥಿ ಎಂದು ಚುನಾವಣಾ ಪ್ರಚಾರ ಮಾಡಲು ನಿರ್ಧರಿಸಿದ್ದರು. ಈ ಹಿನ್ನೆಲೆ ಉಚ್ಚಾಟನೆ ಮಾಡಲಾಗಿದೆ ಎಂದು ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್​ಗೌಡ ಮಾಹಿತಿ ನೀಡಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:27 pm, Wed, 5 April 23